4
Actor Anirudh : ʼಜೊತೆ ಜೊತೆಯಲಿʼ ಸೀರಿಯಲ್‌ನಿಂದ ಖ್ಯಾತಿ ಪಡೆದ ನಟ ಅನಿರುದ್ಧ(Actor Anirudh )ಅವರು ಕೆಲವೊಂದು ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನ, ಭಗವಾನ್ ಶ್ರೀ ಬಬ್ಬು ಸ್ವಾಮಿ ದೇವಸ್ಥಾನ, ಕೊರಗಜ್ಜ ದೇಗುಲ, ಉಡುಪಿ ಕೃಷ್ಣ ಮಠ, ಶ್ರೀ ಕ್ಷೇತ್ರ ಧರ್ಮಸ್ಥಳ, ಅರಿಕೋಡಿಯ ಶ್ರೀ ಚಾಮುಂಡೇಶ್ವರಿ ಕ್ಷೇತ್ರ, ಮಂದಾರ್ತಿಯ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ, ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನ, ಕೊಲ್ಲೂರು ಮೂಕಾಂಬಿಕ ದೇವಸ್ಥಾನ ಹೀಗೆ ಮುಂತಾದ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿ ವಿಶೇಷ ಪೂಜೆಗಳನ್ನು ಮಾಡಿ ದೇವರ ಕೃಪೆಗೆ ಪಾತ್ರರಾಗಿದ್ದಾರೆ. ಇದರ ಕೆಲವೊಂದು ಫೋಟೋಸ್ ಇಲ್ಲಿದೆ.


ನಟ ಅನಿರುದ್ಧ್ ಇವರು ಇದೀಗ ‘ಶೆಫ್ ಚಿದಂಬರ’ ಸಿನಿಮಾದ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಶೂಟಿಂಗ್‌ನ ಬಿಜಿ ಶೆಡ್ಯೂಲ್ ಮಧ್ಯೆ ಬಿಡುವು ಮಾಡಿಕೊಂಡು ನಟ ಅನಿರುದ್ಧ್ ಪುಣ್ಯ ಕ್ಷೇತ್ರಗಳ ದರ್ಶನ ಮಾಡಿದ್ದಾರೆ.

