Home » Tumkuru: ಲೇಡಿ PSI ಗೆ ಲೈಂಗಿಕ ಕಿರುಕುಳ ಕೊಟ್ಟ ಭೂಪ !! ನಂತರ ಏನಾಯ್ತು ಗೊತ್ತಾ ?!

Tumkuru: ಲೇಡಿ PSI ಗೆ ಲೈಂಗಿಕ ಕಿರುಕುಳ ಕೊಟ್ಟ ಭೂಪ !! ನಂತರ ಏನಾಯ್ತು ಗೊತ್ತಾ ?!

1 comment
Tumkuru

Tumkuru: ಪೋಲಿಸರು ಅಂದ್ರೆ ಸಾಕು ಹೆಚ್ಚಿನವರು ಹೆದರುವವರೆ. ಕೆಲವರಂತೂ ಎದ್ವೋ ಬಿದ್ವೋ ಎಂದು ಓಡುತ್ತಾರೆ. ಇನ್ನೂ ತಪ್ಪುಮಾಡಿದವರಂತೂ ನಡುಗೇ ಬಿಡುತ್ತಾರೆ. ಆದರಿಲ್ಲೊಬ್ಬ ಆಸಾಮಿ ಮಹಿಳಾ PSI ಗೇ ಲೈಂಗಿಕ ಕಿರುಕುಳ ನೀಡಿ, ಪೋಲೀಸರ ಅತಿಥಿಯಾಗಿದ್ದಾನೆ.

ಹೌದು, ಗೃಹ ಸಚಿವರ ತವರು ಜಿಲ್ಲೆಯಲ್ಲೆಯಾದ ತುಮಕೂರಿನಲ್ಲಿ(Tumkuru) ಮಹಿಳಾ ಪೊಲೀಸ್ ಸಿಬ್ಬಂದಿಯ ಮೇಲೆ ಹನುಮಂತಪುರದ ದರ್ಶನ್ ಎಂಬಾತ ಲೈಂಗಿಕ ಕಿರುಕುಳ ನಡೆದ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಅಂದಹಾಗೆ ತುಮಕೂರಿನ ನಾಗರಕಟ್ಟೆಯ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ವೇಳೆ ಡಿಜೆ ವಾಹನದ ಬಳಿ ಭದ್ರತಾ ಕರ್ತವ್ಯದಲ್ಲಿದ್ದ ಮಹಿಳಾ ಪಿಎಸ್ ಐಗೆ ಆರೋಪಿ ದರ್ಶನ್ ಲೈಂಗಿಕ ಕಿರುಕುಳ ನೀಡಿದ್ದು, ಮೆರವಣಿಗೆ ಎಂ.ಜಿ.ರಸ್ತೆಯ ಮಹದೇವ ಸ್ಟೇಷನರಿ ಅಂಗಡಿ ಬಳಿ ತಲುಪುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಸದ್ಯ ಘಟನೆ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಹುಡುಗಿಯನ್ನು ಚುಡಾಯಿಸಿ ಈ ಲೇಡಿ ಪೋಲೀಸರ ಕೈಗೆ ಸಿಕ್ಕಿಬಿದ್ರೆನೇ ಕಥೆ ಮುಗಿದಹಾಗೆ. ಆದ್ರೆ ಈ ಭೂಪ ಲೇಡಿ ಪೋಲೀಸ್ ಗೆ ಕ್ವಾಟ್ಲೆ ಕೊಟ್ಟಿರೋದು ಅಚ್ಚರಿ ಮೂಡಿದ್ರು ಅವನ ಕಥೆ ಏನಾಗಿರಬೇಕು ನೀವೇ ಊಹಿಸಿ.

ಇದನ್ನೂ ಓದಿ : BJP-JDS: ಮೈತ್ರಿ ಬೆನ್ನಲ್ಲೇ ಬಿಜೆಪಿಗೆ ಬಿಗ್ ಶಾಕ್ ಕೊಟ್ಟ ಜೆಡಿಎಸ್ – ಬಿಜೆಪಿಗಂತೂ ಇದು ಊಹಿಸಲಾರದ ಹೊಡೆತ

You may also like

Leave a Comment