Dasara Holidays: ಈ ಜಿಲ್ಲೆಯ ಶಾಲೆಗಳಿಗೆ ದಸರಾ ರಜೆಯಲ್ಲಿ(Dasara Holidays) ಬದಲಾವಣೆ ಮಾಡಲಾಗಿದ್ದು, ಜಿಲ್ಲಾಡಳಿತ ಮಹತ್ವದ ಆದೇಶ ಹೊರಡಿಸಿದೆ.
ಹೌದು!!ಕೊಡಗು(Kodagu)ಜಿಲ್ಲೆಯ ಶಾಲೆಗಳಿಗೆ ದಸರಾ ರಜಾ ದಿನಗಳಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಕೊಡಗು ಜಿಲ್ಲಾಡಳಿತ ಅಕ್ಟೋಬರ್ 25 ರವರೆಗೆ ರಜೆ ಘೋಷಣೆ ಮಾಡಿದೆ. ಈ ಮೊದಲು ದಸರಾ ರಜೆಯನ್ನು ಅಕ್ಟೋಬರ್ 10 ರಿಂದ 24ರ ವರೆಗೆ ನೀಡಲಾಗುತ್ತಿತ್ತು.ಆದರೆ, ಈ ಬಾರಿ, ಅಕ್ಟೋಬರ್ 24ರಂದು ರಾತ್ರಿ ಮಡಿಕೇರಿಯಲ್ಲಿ ದಸರಾ ಅದ್ದೂರಿ ಆಚರಣೆ ನಡೆಯಲಿದೆ. ಈ ನಡುವೆ, ದಸರಾ ಆಚರಣೆ ಗೋಣಿಕೊಪ್ಪಲುವಿನಲ್ಲಿ ಕೂಡ ನಡೆಯುವುದರಿಂದ ದಸರಾ ಆಚರಣೆಯ ಮರು ದಿನ ಕೂಡ ಕೊಡಗು ಜಿಲ್ಲಾಡಳಿತ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದೆ. ಹೀಗಾಗಿ, ಅಕ್ಟೋಬರ್ 25 ರವರೆಗೆ ಶಾಲೆಗೆ ರಜೆ ಇರಲಿದ್ದು, ಅಕ್ಟೋಬರ್ 26 ರಿಂದ ಕೊಡಗು ಜಿಲ್ಲೆಯ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಮತ್ತೆ ಆರಂಭವಾಗಲಿವೆ.
