Kumata : ರಾಷ್ಟ್ರ ಧ್ವಜವನ್ನು ತಿರುಚಿ ಈದ್ ಮಿಲಾದ್ ಆಚರಣೆ ಮಾಡಿದ ಘಟನೆ ಕುಮಟಾ (Kumata) ತಾಲೂಕಿನ ಮಿರ್ಜಾನಿನಲ್ಲಿ ನಡೆದಿದೆ. ಈದ್‌ಮಿಲಾದ ದಿನ ಇಲ್ಲಿನ ಸ್ಥಳೀಯ ಜಮಾತುಲ್ ಮುಸ್ಲಿಮೀನ್ ಸಮಿತಿ ನಡೆಸಿದ ಮೆರವಣಿಗೆ ವೇಳೆ ರಾಷ್ಟ್ರಧ್ವಜದ ಅಶೋಕ ಚಕ್ರದ ಜಾಗದಲ್ಲಿ ಚಂದ್ರ ಮತ್ತು ನಕ್ಷತ್ರದ ಚಿತ್ರ ಬರೆದ ಧ್ವಜ ಹಾರಾಡಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇನ್‌ಸ್ಟಾಗ್ರಾಂ ಖಾತೆಯಲ್ಲಿ ವೀಡಿಯೋವೊಂದನ್ನು ಹರಿಬಿಡಲಾಗಿತ್ತು. ಅದರಲ್ಲಿ ಇದು ಕೇರಳ, ಪಶ್ಚಿಮ ಬಂಗಾಳ ಅಲ್ಲ, ನಮ್ಮ ಉತ್ತರ ಕನ್ನಡದ ಕುಮಟಾದ ಮಿರ್ಜಾನಿನಲ್ಲಿ ನಮ್ಮ ರಾಷ್ಟ್ರ ಬಾವುಟದಲ್ಲಿ ಅಶೋಕ ಚಕ್ರ ಇರುವ ಜಾಗದಲ್ಲಿ ಅರ್ಧಚಂದ್ರ ಬಂದು ಕೂತಿದೆ. ಮುಂದಿನ ದಿನದಲ್ಲಿ ಕೇಸರಿ, ಬಿಳಿ ಬಣ್ಣ ಅಳಿಸಿ ಶಾಶ್ವತ ಹಸಿರು ಬಣ್ಣಕ್ಕೆ ಬದಲಾಯಿಸುತ್ತಾರೆ. ಜಾಗೋ ಭಾರತೀಯ ಜಾಗೋ ಎಂಬ ಸಂದೇಶ ಬರೆದಿದ್ದರು. ಈ ವಿಡಿಯೋ ಕುಮಟಾ ಪೊಲೀಸ್ ಸಿಬ್ಬಂದಿಗೆ ಸಾಮಾಜಿಕ ಜಾಲತಾಣ ತಪಾಸಣೆ ನಡೆಸುತ್ತಿರುವ ವೇಳೆ ಗಮನಕ್ಕೆ ಬಂದಿದೆ.
ರಾಷ್ಟ್ರಧ್ವಜಕ್ಕೆ ಅವಮಾನ ಎಸಗಿದ ಹಿನ್ನೆಲೆಯಲ್ಲಿ ಕುಮಟಾ ಪೊಲೀಸರು ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಈದ್ ಮಿಲಾದ್ ದಿನ ಮೆರವಣಿಗೆಯ ವೇಳೆ ಅಪರಿಚಿತ ವ್ಯಕ್ತಿ ಕೇಸರಿ, ಬಿಳಿ, ಹಸಿರು ಬಣ್ಣದ ಬಟ್ಟೆಯಲ್ಲಿ ನಕ್ಷತ್ರ ಮತ್ತು ಅರ್ಧಚಂದ್ರಾಕೃತಿಯ ಚಿತ್ರ ಬರೆದು, ಇದು ಎಲ್ಲರಿಗೂ ಕಾಣುವಂತೆ ಹಾರಿಸಲಾಗಿದೆ. ಸದ್ಯ ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ನಡೆಯುತ್ತಿದೆ.
ಇದನ್ನು ಓದಿ: Girl Friend: ಗಂಡನನ್ನು ಸಂತೋಷ ಪಡಿಸಲು ಹೆಂಡತಿ ಮಾಡಿದ್ಲು ಮಾಸ್ಟರ್ ಪ್ಲಾನ್: ಹೆಂಡತಿಯ ಪ್ಲಾನ್ ನಿಂದ ಗಂಡ ಫುಲ್ ಹ್ಯಾಪಿ
