Home » Ration card: ರೇಷನ್ ಕಾರ್ಡ್ ಇರುವವರೇ ಇತ್ತ ಗಮನಿಸಿ- ಆಹಾರ ಇಲಾಖೆಯಿಂದ ಬಂತೊಂದು ಮುಖ್ಯ ಮಾಹಿತಿ

Ration card: ರೇಷನ್ ಕಾರ್ಡ್ ಇರುವವರೇ ಇತ್ತ ಗಮನಿಸಿ- ಆಹಾರ ಇಲಾಖೆಯಿಂದ ಬಂತೊಂದು ಮುಖ್ಯ ಮಾಹಿತಿ

2 comments
Ration Card

Ration Card: ಪಡಿತರ ಚೀಟಿದಾರರಿಗೆ ಆಹಾರ ಇಲಾಖೆ( Ration card and government) ಕೊಪ್ಪಳ ಜನರಿಗೆ ಸಿಹಿ ಸುದ್ದಿ ಒಂದನ್ನು ನೀಡಿದ್ದು, ಇದೀಗ ಪಡಿತರ ಕಾರ್ಡುಗಳ (Ration Card) ತಿದ್ದುಪಡಿಗೆ ಆಹಾರ ತಂತ್ರಾಂಶದಲ್ಲಿ ಅಕ್ಟೋಬರ್ 11ರಿಂದ ಅ. 13ರ ವರೆಗೆ ಬೆಳಿಗೆ 10 ರಿಂದ ಸಂಜೆ 7 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ: ಮಂಗಳೂರು : ಗಣಪತಿ ಕಟ್ಟೆಯಲ್ಲಿ ಮುಸ್ಲಿಂ ಧ್ವಜ ಹಾರಿಸಿದ ಕಿಡಿಗೇಡಿಗಳು !! ಸ್ಥಳಕ್ಕೆ ಬಂದ ಪೋಲೀಸ್ ಆಫೀಸರ್ ಮಾಡಿದ್ದೇನು ?

ಸದ್ಯ ಕಾರ್ಡುದಾರರು ಸಮೀಪದ ಕರ್ನಾಟಕ ಗ್ರಾಮ ಒನ್ ಹಾಗೂ ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು. ಮುಖ್ಯವಾಗಿ (ಅಕ್ಟೋಬರ್ 11ರಿಂದ ಅ. 13ರ ವರೆಗೆ) ಪಡಿತರ ಕಾರ್ಡುಗಳ ತಿದ್ದುಪಡಿ ಮಾಡಿಕೊಳ್ಳಲಾದ ಮನವಿಯನ್ನು ಆಹಾರ ನಿರೀಕ್ಷಕರ ಲಾಗಿನ್‌ನಲ್ಲಿ ಅನುಮೊದನೆಗೆ ಸಲ್ಲಿಸಲು ಅಕ್ಟೋಬರ್ 20 ರ ಸಂಜೆ 7 ಗಂಟೆಯವರೆಗೆ ಅವಕಾಶವಿರುತ್ತದೆ.

ಅದಲ್ಲದೆ ಡಿಬಿಟಿ ಯೋಜನೆಗೆ ಸಂಬಂಧಿಸಿದಂತೆ, ಪಡಿತರ ಚೀಟಿಗಳ ಎನ್.ಪಿ.ಸಿ.ಐ ಬ್ಯಾಂಕ್ ವೆರೆಫಿಕೇಶನ್ ಮತ್ತು ಆಧಾರ್ ಅಥೆಂಟಿಕೇಶನ್ ಫೇಲ್ ಪ್ರಕರಣಗಳ ಕುಟುಂಬದ ಮುಖ್ಯಸ್ಥರು ಸಂಬಂಧಿಸಿದ ಬ್ಯಾಂಕುಗಳಿಗೆ ಭೇಟಿ ನೀಡಿ ಬ್ಯಾಂಕ್ ಖಾತೆಗಳನ್ನು ಸರಿಪಡಿಸಿಕೊಳ್ಳುವಂತೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Mangalore: ಮಂಗಳೂರಿನ ಜನತೆಗೆ ಬೊಂಬಾಟ್ ಸುದ್ದಿ- KSRTCಯಿಂದ ಟೂರ್‌ ಪ್ಯಾಕೇಜ್ ಘೋಷಣೆ !! ದರ, ಸಮಯ, ದಿನಾಂಕಗಳ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ

You may also like

Leave a Comment