Home » Health Tips: ‘ಬ್ರಾ’ ಹಾಕಿದ್ರೆ ‘ಆ’ರೋಗ ಬರುತ್ತಂತೆ ಹೌದಾ ?!

Health Tips: ‘ಬ್ರಾ’ ಹಾಕಿದ್ರೆ ‘ಆ’ರೋಗ ಬರುತ್ತಂತೆ ಹೌದಾ ?!

1 comment
Breast Cancer

Breast Cancer : ಬ್ರಾ (bra) ಹಾಕಿದ್ರೆ ಸ್ತನ ಕ್ಯಾನ್ಸರ್ (breast cancer) ಬರುತ್ತದೆ ಎಂದು ಹೇಳಲಾಗುತ್ತಿದೆ. ಆದರೆ, ಇದು ಎಷ್ಟು ಸುಳ್ಳು, ಎಷ್ಟು ಸತ್ಯ? ಈ ಬಗ್ಗೆ ಮಾಹಿತಿ ಇಲ್ಲಿದೆ‌. ಚರ್ಮದ ಕ್ಯಾನ್ಸರ್ ನಂತರ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಎರಡನೇ ಅತ್ಯಂತ ಸಾಮಾನ್ಯ ಕ್ಯಾನ್ಸರ್. ಸ್ತನ ಕ್ಯಾನ್ಸರ್ ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ಸರಿಯಾದ ಮಾಹಿತಿಯನ್ನು (Health Tips) ಹೊಂದಿರುವುದು ಮುಖ್ಯ. ಇದಕ್ಕೆ ಸಂಬಂಧಿಸಿದ ಅನೇಕ ಮಿಥ್ಯೆಗಳ ಬಗ್ಗೆಯೂ ನೀವು ತಿಳಿದುಕೊಳ್ಳಬೇಕು.

ವೈದ್ಯರ ಪ್ರಕಾರ, ಬ್ರಾ ಧರಿಸುವುದರಿಂದ ಸ್ತನ ಕ್ಯಾನ್ಸರ್ ಉಂಟಾಗಬಹುದು ಅನ್ನೋದು ಕೇವಲ ಮಿಥ್ಯೆ ಮತ್ತು ಅದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಸ್ತನ ಕ್ಯಾನ್ಸರ್ ಹಲವಾರು ಕಾರಣಗಳಿಂದ ಉಂಟಾಗಬಹುದು. ಅವುಗಳನ್ನು ಅರ್ಥಮಾಡಿಕೊಳ್ಳುವುದರಿಂದ ಬೇಗನೆ ಚಿಕಿತ್ಸೆ ಪಡೆದುಕೊಳ್ಳಲು ಸಹಾಯವಾಗುತ್ತದೆ. ವಯಸ್ಸಾದ ವ್ಯಕ್ತಿಗಳು ಮತ್ತು ಮಹಿಳೆಯರು ಸ್ತನ ಕ್ಯಾನ್ಸರ್ ಗೆ ಹೆಚ್ಚು ಒಳಗಾಗುತ್ತಾರೆ. ಪುರುಷರಲ್ಲಿ ಕೇವಲ 1% ಸ್ತನ ಕ್ಯಾನ್ಸರ್ ಪ್ರಕರಣಗಳು ಸಂಭವಿಸುತ್ತವೆ.

ಸ್ತನ ಕ್ಯಾನ್ಸರ್ ಗೆ ಬೊಜ್ಜು (obesity) ಮತ್ತೊಂದು ಅಪಾಯಕಾರಿ ಅಂಶವಾಗಿದೆ‌‌. ಆದರೆ, ಬ್ರಾ ಧರಿಸುವುದಕ್ಕೂ ಸ್ತನ ಕ್ಯಾನ್ಸರ್ ಗೂ ಯಾವುದೇ ಸಂಬಂಧವಿಲ್ಲ. ಸ್ತನಗಳು ದೊಡ್ಡದಾಗಿದ್ದರೆ, ಬ್ರಾ ಧರಿಸೋದ್ರಿಂದ ಸ್ತನ ಕ್ಯಾನ್ಸರ್‌ಗೆ ಕಾರಣವಾಗಬಹುದು ಎಂದು ಕೆಲವರು ನಂಬುತ್ತಾರೆ. ಆದರೆ, ಇದು ತಪ್ಪು ತಿಳುವಳಿಕೆ.

ಇದನ್ನೂ ಓದಿ: ಮಂಗಳೂರು : ಗಣಪತಿ ಕಟ್ಟೆಯಲ್ಲಿ ಮುಸ್ಲಿಂ ಧ್ವಜ ಹಾರಿಸಿದ ಕಿಡಿಗೇಡಿಗಳು !! ಸ್ಥಳಕ್ಕೆ ಬಂದ ಪೋಲೀಸ್ ಆಫೀಸರ್ ಮಾಡಿದ್ದೇನು ?

You may also like

Leave a Comment