Home » Bus Body Construction: ದೇಶದ ಎಲ್ಲಾ ಸರ್ಕಾರಿ ಬಸ್ ಗಳಿಗೆ ಬಂತು ಹೊಸ ರೂಲ್ಸ್ – ಬೆಳ್ಳಂಬೆಳಗ್ಗೆಯೇ ಆದೇಶ ಹೊರಡಿಸಿದ ಕೇಂದ್ರ

Bus Body Construction: ದೇಶದ ಎಲ್ಲಾ ಸರ್ಕಾರಿ ಬಸ್ ಗಳಿಗೆ ಬಂತು ಹೊಸ ರೂಲ್ಸ್ – ಬೆಳ್ಳಂಬೆಳಗ್ಗೆಯೇ ಆದೇಶ ಹೊರಡಿಸಿದ ಕೇಂದ್ರ

1 comment
Bus Body Construction

Bus Body Construction: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಮಾಹಿತಿ ಪ್ರಕಾರ, 2022ರಲ್ಲಿ ಸಂಭವಿಸಿದ ಒಟ್ಟು ಅಪಘಾತಗಳಲ್ಲಿ ಬಸ್‌ಗಳ ಪಾಲು ಶೇ.3ರಷ್ಟಿದೆ. ಒಟ್ಟು ಸಾವಿನ ಸಂಖ್ಯೆಯಲ್ಲಿ ಶೇ.28ರಷ್ಟು ಜನ ಬಸ್‌ ಅಪಘಾತಗಳಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಆದ್ದರಿಂದ ಕೇಂದ್ರ ಸರ್ಕಾರವು ದೇಶಾದ್ಯಂತ ಬಸ್‌ಗಳ ಬಾಡಿ ನಿರ್ಮಾಣದ (Bus Body Construction) ಕುರಿತಂತೆ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಈ ಕುರಿತು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವ ನಿತಿನ್‌ ಗಡ್ಕರಿ (Nitin Gadkari) ‘ಬಸ್‌ಗಳ ಬಾಡಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮಾನದಂಡಗಳನ್ನು ರೂಪಿಸಲು ಅನುಮೋದನೆ ನೀಡಿದೆ’ ಎಂದು ಮಾಹಿತಿ ನೀಡಿದ್ದಾರೆ.

ನಿತಿನ್‌ ಗಡ್ಕರಿ ಪ್ರಕಾರ, ದೇಶಾದ್ಯಂತ ಬಸ್‌ ಬಾಡಿಗಳ ನಿರ್ಮಾಣದಲ್ಲಿ ಏಕರೂಪತೆ ಜಾರಿಗೆ ತಂದರೆ, ಬಸ್‌ ಅಪಘಾತ ಸಂಭವಿಸಿದಾಗ ಉಂಟಾಗುವ ಸಾವಿನ ಸಂಖ್ಯೆ ನಿಯಂತ್ರಣವಾಗುತ್ತದೆ. ಅದಲ್ಲದೆ ‘ದೇಶದಲ್ಲಿ ಬಸ್‌ ಅಪಘಾತಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಆದರೆ, ದೇಶದಲ್ಲಿ ಗುಣಮಟ್ಟದ ಬಸ್‌ಗಳ ಬಾಡಿ ನಿರ್ಮಾಣವಾದರೆ ಅಪಘಾತದ ವೇಳೆ ಸಾವಿನ ಸಂಖ್ಯೆ ತಗ್ಗಿಸಬಹುದು. ಅದರಲ್ಲೂ, ದೇಶಾದ್ಯಂತ ಏಕರೂಪದ ಹಾಗೂ ಏಕ ಗುಣಮಟ್ಟದ ಬಸ್‌ ಬಾಡಿಗಳ ನಿರ್ಮಾಣವಾದರೆ ಪ್ರಯಾಣಿಕರ ಸುರಕ್ಷತೆ ಕಾಪಾಡಬಹುದು’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರೇಷನ್ ಕಾರ್ಡ್ ಇರುವವರೆ ಇತ್ತ ಗಮನಿಸಿ- ಆಹಾರ ಇಲಾಖೆಯಿಂದ ಬಂತೊಂದು ಮುಖ್ಯ ಮಾಹಿತಿ

ಮುಖ್ಯವಾಗಿ ‘ಕೇಂದ್ರ ಸರ್ಕಾರವು ಹೊಸ ಮಾನದಂಡಗಳನ್ನು ಜಾರಿಗೊಳಿಸುವುದರಿಂದ ಬಸ್‌ಗಳ ಬಾಡಿ ನಿರ್ಮಾಣದಲ್ಲಿ ಒರಿಜಿನಲ್‌ ಎಕ್ಯೂಪ್‌ಮೆಂಟ್‌ ಮ್ಯಾನುಫೆಕ್ಚರರ್‌ (Original Equipment Manufacturer)ಗಳು ಹಾಗೂ ಬಸ್‌ಗಳ ಬಾಡಿ ನಿರ್ಮಾಣ ಕಂಪನಿಗಳಲ್ಲಿ ಏಕರೂಪತೆ ಜಾರಿಗೆ ಬರಲಿದೆ’ ಎಂದು ತಿಳಿಸಿದ್ದಾರೆ.

ಶೀಘ್ರದಲ್ಲೇ ಬಸ್‌ ಬಾಡಿ ನಿರ್ಮಾಣದ ಮಾನದಂಡಗಳ ಕುರಿತು ನೋಟಿಫಿಕೇಶನ್‌ ಹೊರಡಿಸಲಾಗುತ್ತದೆ. ಸಲಹೆ-ಸೂಚನೆಗಳ ನಂತರ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ನಿತಿನ್‌ ಗಡ್ಕರಿ ಮಾಹಿತಿ ನೀಡಿದ್ದಾರೆ.

https://x.com/nitin_gadkari/status/1710283130018353638?s=20

ಇದನ್ನೂ ಓದಿ: ಈ ಯಜಮಾನಿಯರಿಗೆ ‘ಗೃಹಲಕ್ಷ್ಮೀ’ ಹಣ ಸಿಗೋದು ಬಹುತೇಕ ಡೌಟ್ !! ಅಚ್ಚರಿಯ ಕಾರಣ ಬಿಚ್ಚಿಟ್ಟ ಸಚಿವೆ ಹೆಬ್ಬಾಳ್ಕರ್

You may also like

Leave a Comment