Bantwal : ಬಂಟ್ವಾಳ(Bantwal)ಪಾಣೆ ಮಂಗಳೂರಿನ(Mangalore)ನೇತ್ರಾವತಿ ಹಳೆಯ ಉಕ್ಕಿನ ಸೇತುವೆಯ ನಡುವೆ ಬಿರುಕು ಕಾಣಿಸಿಕೊಂಡ ಘಟನೆ ಆದಿತ್ಯವಾರ ನಡೆದಿದ್ದು, ಇದೀಗ ಸೇತುವೆಯಲ್ಲಿ(Bridge)ಸಂಚರಿಸಲು ಸಮಸ್ಯೆ ಎದುರಾಗಿದೆ.
ಈ ಸೇತುವೆ ಬ್ರಿಟಿಷರ ಕಾಲದಲ್ಲಿಯೇ ನಿರ್ಮಾಣವಾಗಿದ್ದು, ಈ ಹಿಂದೊಮ್ಮೆ ಬಿರುಕು ಕಾಣಿಸಿಕೊಂಡು ಸ್ಥಳೀಯರಿಗೆ ಆತಂಕ ಮೂಡಿಸಿತ್ತು. ಈ ಸಂದರ್ಭ ಘನ ವಾಹನಗಳ ಸಂಚಾರ ಅಪಾಯಕಾರಿ ಎಂಬ ವರದಿ ಪ್ರಕಟವಾಗಿತ್ತು. ಆದಾಗ್ಯೂ, ಘನ ವಾಹನಗಳ ಸಂಚಾರ ಮಾತ್ರ ನಿಂತಿರಲಿಲ್ಲ. ಇದೀಗ, ಮತ್ತೊಮ್ಮೆ ಸೇತುವೆಯಲ್ಲಿ ಬಿರುಕಿನ ಮಾದರಿ ಕಂಡುಬಂದಿದೆ. ಆದರೆ, ಇದು ಸೇತುವೆಯ ಬಿರುಕೇ ಇಲ್ಲವೇ ಮೇಲಿನ ರಸ್ತೆಯ ಭಾಗದಲ್ಲಿ ಮಾತ್ರ ಬಿರುಕು ಆಗಿರುವುದೇ? ಎಂಬುದು ಖಾತ್ರಿಯಾಗಿಲ್ಲ. ಹೀಗಾಗಿ, ಸಹಜವಾಗಿ ಸ್ಥಳೀಯರಿಗೆ ಆತಂಕ ಮನೆ ಮಾಡಿದೆ. ಈ ಕುರಿತು ಸಂಬಂಧಪಟ್ಟ ತಜ್ಞರು ಪರಿಶೀಲಿಸಿ ವರದಿ ನೀಡಿ ಜನರ ಸಮಸ್ಯೆಗೆ ಪರಿಹಾರ ನೀಡಬೇಕಾದ ಅಗತ್ಯವಿದೆ.
ಇದನ್ನು ಓದಿ: ಬೆಳ್ತಂಗಡಿ : ಮತ್ತೆ ಮನೆ ಕೆಡವಲು ಮುಂದಾದ ಅರಣ್ಯ ಇಲಾಖೆ : ಸ್ಥಳದಲ್ಲಿ ಜಮಾಯಿಸಿದ ಜಿಲ್ಲೆಯ ಬಿಜೆಪಿ ಶಾಸಕರು ,ಸಾರ್ವಜನಿಕರು
