Home » Kodi Mutt Swamiji: ಕೋಡಿಶ್ರೀ ಹೇಳಿದ ಭವಿಷ್ಯ ನಿಜವಾಗುತ್ತ? ಒಂದು ದೇಶ ಭೂಪಟದಿಂದ ಕಣ್ಮರೆ, ಇಸ್ರೇಲ್‌ ಅಥವಾ ಪ್ಯಾಲೆಸ್ತೇನ್‌?

Kodi Mutt Swamiji: ಕೋಡಿಶ್ರೀ ಹೇಳಿದ ಭವಿಷ್ಯ ನಿಜವಾಗುತ್ತ? ಒಂದು ದೇಶ ಭೂಪಟದಿಂದ ಕಣ್ಮರೆ, ಇಸ್ರೇಲ್‌ ಅಥವಾ ಪ್ಯಾಲೆಸ್ತೇನ್‌?

by Mallika
18 comments
Kodi Mutt Swamiji

ಇಸ್ರೇಲ್‌ ಹಾಗೂ ಪ್ಯಾಲೆಸ್ತೇನ್‌ ಮಧ್ಯೆ ಭೀಕರ ಯುದ್ಧ ನಡೆಯುತ್ತಿರುವುದನ್ನು ನೋಡಿದರೆ ಒಂದು ಕಡೆ ಕೋಡಿಶ್ರೀ ಹೇಳಿದ ಭವಿಷ್ಯ ನಿಜವಾಗುತ್ತದೆಯೋ ಎಂದನಿಸುತ್ತದೆ. ಕೋಡಿಶ್ರೀ ಗಳು ಎರಡು ತಿಂಗಳ ಹಿಂದೆ ಒಂದು ದೇಶ ಕಣ್ಮರೆಯಾಗಲಿದೆ ಎಂಬ ಭವಿಷ್ಯವನ್ನು ನುಡಿದಿದ್ದು, ಇದು ನಿಜವಾಗುವುದೇ ಎಂಬ ಮಾತು ಕೇಳಿ ಬರುತ್ತಿದೆ.

ಬಾಂಬ್‌ಗಳು, ಭೂಕಂಪ, ಯುದ್ದಭೀತಿ, ಜನ ಜನಗಳ ಮೇಲೆ ನಿಯಂತ್ರಣ ಕಳೆದುಕೊಂಡು ಹುಚ್ಚರಾಗುವುದು, ದೇಹ ಅಶಕ್ತಿಯಿಂದ ದಾರಿಯಲ್ಲಿ ಬಿದ್ದು ಸಾಯುವುದು. ದೇಹ ಅಂಗಾಂಗಗಳ ಮೇಲೆ ಪ್ರಭಾವ ಕಳೆದುಕೊಳ್ಳುತ್ತವೆ. ಜಾಗತಿಕ ಭೂಪಟದಲ್ಲಿ ಒಂದು ದೇಶ ಕಣ್ಮರೆಯಾಗುತ್ತದೆ ಎಂದು ಶ್ರೀಗಳು ಭವಿಷ್ಯ ನುಡಿದಿದ್ದರು. ಕೋಡಿ ಶ್ರೀಗಳ ಭವಿಷ್ಯ ನುಡಿದಂತೆ ಇಸ್ರೇಲ್‌- ಪ್ಯಾಲೆಸ್ತೇನ್‌ ಯುದ್ಧ ಆರಂಭವಾಗಿದೆ.ಇಸ್ರೇಲ್‌ ಪ್ಯಾಲೆಸ್ತೇನ್‌ ಯುದ್ಧ ನೋಡಿದರೆ ಒಂದು ದೇಶ ಕಣ್ಮರೆಯಾಗುವ ಎಲ್ಲಾ ಲಕ್ಷಣ ಕಾಣುತ್ತಿದೆ.

ಕಳೆದ ಎರಡು ತಿಂಗಳ ಹಿಂದೆ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು, ಜಾಗತಿಕ ಮಟ್ಟದಲ್ಲಿ ಸಂಭವಿಸುವ ಘಟನೆಗಳ ಬಗ್ಗೆ ಭವಿಷ್ಯ ನುಡಿದಿದ್ದರು. ಯುದ್ಧದ ಭೀತಿಯಿಂದ ಹಾಗೂ ಮಳೆಯಿಂದ ಎರಡು ದೇಶಗಳು ಭೂಪಟದಿಂದ ಕಣ್ಮರೆಯಾಗಲಿವೆ ಎಂದು ಹೇಳಿದ್ದರು.

You may also like

Leave a Comment