Home » Swiss Bank: ಏಕಾಏಕಿ ಸ್ವಿಸ್ ಬ್ಯಾಂಕಿಂದ ಹಲವು ಮಾಹಿತಿ ಪಡೆದ ಭಾರತ, ಸ್ಪೋಟಕ ಮಾಹಿತಿ ಬಹಿರಂಗ

Swiss Bank: ಏಕಾಏಕಿ ಸ್ವಿಸ್ ಬ್ಯಾಂಕಿಂದ ಹಲವು ಮಾಹಿತಿ ಪಡೆದ ಭಾರತ, ಸ್ಪೋಟಕ ಮಾಹಿತಿ ಬಹಿರಂಗ

1 comment
Swiss Bank

Swiss Bank: ಸ್ವಿಸ್ ಬ್ಯಾಂಕ್(Swiss Bank)ಗಳಲ್ಲಿರುವ ಭಾರತೀಯರ ಹೊಸ ಖಾತೆಗಳ ಬಗ್ಗೆ ಸ್ವಿಸ್ಜರ್ಲೆಂಡ್ ಮಾಹಿತಿಯನ್ನು ನೀಡಿದೆ. ಸ್ವಿಟ್ಜರ್ಲೆಂಡ್ ಸುಮಾರು 36 ಲಕ್ಷ ಹಣಕಾಸು ಖಾತೆಗಳ ವಿವರಗಳನ್ನು ಹಂಚಿಕೊಂಡಿದ್ದು, ಇದು ಭಾರತ ಮತ್ತು ಸ್ವಿಟ್ಜರ್ಲೆಂಡ್ ನಡುವೆ ಐದನೇ ಬಾರಿಯ ಮಾಹಿತಿ ವಿನಿಮಯವಾಗಿದೆ. ತೆರಿಗೆ ವಂಚನೆ, ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದನೆಗೆ ಹಣಕಾಸು ನೆರವು ಒಳಗೊಂಡಂತೆ ಈ ರೀತಿ ಎಲ್ಲಾದರೂ ಹಣ ದುರ್ಬಳಕೆ ಆಗಿದೆಯೇ ಎಂಬುದನ್ನು ಪರಿಶೀಲನೆ ನಡೆಸಲಾಗುತ್ತದೆ.

ಭಾರತೀಯ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾದ ಹೊಸ ವಿವರಗಳು ನೂರಾರು ಖಾತೆಗಳಿಗೆ ಸಂಬಂಧಪಟ್ಟಿದೆ. ಇದರ ಜೊತೆಗೆ ಕೆಲವು ವ್ಯಕ್ತಿಗಳು, ಕಾರ್ಪೊರೇಟ್ ಕಂಪನಿಗಳು, ಟ್ರಸ್ಟ್ಗಳಿಗೆ ಸಂಬಂಧಪಟ್ಟಿದೆ. ಸ್ವಿಟ್ಜರ್ಲೆಂಡ್ 104 ದೇಶಗಳೊಂದಿಗೆ ಸುಮಾರು 36 ಲಕ್ಷ ಖಾತೆಗಳ ವಿವರಗಳನ್ನು ಹಂಚಿಕೊಂಡಿದೆ. ಸ್ವಿಟ್ಜರ್ಲೆಂಡ್ 2024ರಲ್ಲಿ ಮತ್ತೆ ಮಾಹಿತಿಯನ್ನು ಹಂಚಿಕೊಳ್ಳಲಿದ್ದು, ಈ ಮಾಹಿತಿಯ ಆಧಾರದ ಅನುಸಾರ ತೆರಿಗೆದಾರರು ಮತ್ತು ಆದಾಯ ತೆರಿಗೆ ರಿಟರ್ನ್ಸ್ನಲ್ಲಿ ತಮ್ಮ ಹಣಕಾಸು ಖಾತೆಗಳನ್ನು ಸರಿಯಾಗಿ ಘೋಷಿಸಲಾಗಿದೆಯೇ ಎಂಬುದನ್ನು ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಸಾಧ್ಯವಾಗುತ್ತದೆ. ಭಾರತೀಯ ಅಧಿಕಾರಿಗಳೊಂದಿಗೆ ವ್ಯಕ್ತಿಗಳು, ಕಾರ್ಪೊರೇಟ್ ಕಂಪನಿಗಳು, ಟ್ರಸ್ಟ್ಗಳ ಹೆಸರು, ವಿಳಾಸ, ವಾಸಿಸುವ ದೇಶ ಹಾಗೂ ತೆರಿಗೆ, ಖಾತೆ ಹಾಗೂ ಹಣಕಾಸಿನ ವಿವರಗಳನ್ನು ಹಂಚಿಕೊಳ್ಳಲಾಗಿದೆ.

ಈ ವರ್ಷ ಕಜಕಿಸ್ತಾನ, ಮಾಲ್ಡೀವ್ಸ್ ಮತ್ತು ಓಮನ್ ಅನ್ನು ಹಿಂದಿನ 101 ದೇಶಗಳ ಪಟ್ಟಿಗೆ ಸೇರಿಸಲಾಗಿದ್ದು, ಹಣಕಾಸು ಖಾತೆಗಳ ಸಂಖ್ಯೆ ಸುಮಾರು 2 ಲಕ್ಷದಷ್ಟು ಹೆಚ್ಚಿದೆ. ಸಿಟ್ಜರ್ಲೆಂಡ್ ರಾಜಧಾನಿಯಾಗಿರುವ ಬರ್ನ್ನಲ್ಲಿ ಫೆಡರಲ್ ಟ್ಯಾಕ್ಸ್ ಅಡ್ಮಿನಿಸ್ಟ್ರೇಷನ್ ಹೊರಡಿಸಿರುವ ಹೇಳಿಕೆಯ ಅನುಸಾರ ಹಣಕಾಸು ಖಾತೆ ವಿವರಗಳನ್ನು ಜಾಗತಿಕ ಮಾನದಂಡದ ಚೌಕಟ್ಟಿನಲ್ಲಿ 104 ದೇಶಗಳ ಜೊತೆಗೆ ಹಂಚಿಕೊಳ್ಳಲಾಗಿದೆ

You may also like

Leave a Comment