Home » BBK 10: ಬಿಗ್‌ಬಾಸ್‌ ಮನೆಗೆ ಹೋದ MLA ಪ್ರದೀಪ್‌ ಈಶ್ವರ್‌ ಪಡೆದ ಸಂಭಾವನೆ ಎಷ್ಟು ಗೊತ್ತೇ?

BBK 10: ಬಿಗ್‌ಬಾಸ್‌ ಮನೆಗೆ ಹೋದ MLA ಪ್ರದೀಪ್‌ ಈಶ್ವರ್‌ ಪಡೆದ ಸಂಭಾವನೆ ಎಷ್ಟು ಗೊತ್ತೇ?

by Mallika
2 comments
BBK 10

BBK 10: MLA ಪ್ರದೀಪ್‌ ಈಶ್ವರ್‌ ಅವರು ಬಿಗ್‌ಬಾಸ್‌ ಮನೆಗೆ ಹೋಗಿ ಹೊರಗೆ ಬಂದಿರುವುದು ಅನಂತರ ನಡೆದ ಕೆಲವು ಕುತೂಹಲಕಾರಿ ಬೆಳವಣಿಗೆಯಲ್ಲಿ ಕೆಲವೊಂದು ಪ್ರಶ್ನೆಗಳಿಗೆ ಅವರು ಉತ್ತರ ನೀಡಿದ್ದಾರೆ. ನಾನಿದ್ದದ್ದೇ ಎರಡರಿಂದ ಮೂರು ಗಂಟೆ ಅಷ್ಟೇ ಎಂಬ ಮಾತನ್ನು ಹೇಳಿದ್ದಾರೆ.

ಪ್ರದೀಪ್‌ ಈಶ್ವರ್‌ ಬಿಗ್‌ಬಾಸ್‌ (BBK 10)ಮನೆಗೆ ಹೋಗಿದ್ದು, ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿದೆ. ವಿರೋಧ ಪಕ್ಷಗಳು ಕೂಡಾ ಪ್ರದೀಪ್‌ ಅವರ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ. ಇದರ ಜೊತೆಯಲ್ಲಿ ಪ್ರದೀಪ್‌ ಈಶ್ವರ್‌ ಅವರು ಪಡೆದ ಸಂಭಾವನೆ ಎಷ್ಟು ಎಂಬ ಚರ್ಚೆ ಕೂಡಾ ಆಗುತ್ತಿದೆ.

ಆದರೆ ಮೂಲಗಳ ಪ್ರಕಾರ ಪ್ರದೀಪ್‌ ಈಶ್ವರ್‌ಗೆ ಒಂದು ರೂಪಾಯಿ ಸಂಭಾವನೆಯನ್ನೂ ನೀಡಿಲ್ಲ ಎಂಬ ಮಾಹಿತಿಯೊಂದು ಹೊರಬಿದ್ದಿದೆ. ಹಾಗಾದರೆ ಒಂದು ರೂಪಾಯಿ ಸಂಭಾವನೆಯನ್ನೂ ಪಡೆದ ಮೇಲೆ ಚಿಕ್ಕಬಳ್ಳಾಪುರ ಎಂಎಲ್‌ಎ ಬಿಗ್‌ಬಾಸ್‌ ಮನೆಗೆ ಹೋಗಿದ್ದೇಕೆ? ಎಂಬ ಪ್ರಶ್ನೆ ಬರುವುದು ಸಹಜ. ಬಿಗ್‌ಬಾಸ್‌ ಟೀಮ್‌ ಒಳಗಿರುವ ಸ್ಪರ್ಧಿಗಳಿಗೆ ಸ್ಪೂರ್ತಿಯ ಮಾತುಗಳನ್ನು ಹೇಳುವಂತೆ ಕೇಳಿಕೊಂಡಿದ್ದರು. ಹಾಗಾಗಿ ಅವರು ಹೋಗಿದ್ದರು ಎಂದು ಮೂಲಗಳು ತಿಳಿಸಿದೆ.

ಸೋಶಿಯಲ್‌ ಮೀಡಿಯಾದಲ್ಲಿ ಪ್ರದೀಪ್‌ ಅವರು ಫೇಮಸ್‌. ಚಿಕ್ಕಬಳ್ಳಾಪುರ ಎಂಎಲ್‌ಎ ಎಂದು ಅಲ್ಲಿನ ಮಂದಿಗೆ ಮಾತ್ರ ಪರಿಚಯವಿದೆ. ಇದೀಗ ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟಿದ್ದರಿಂದ ಇಡೀ ಕರ್ನಾಟಕದ ಜನರ ಮನೆ ಮನೆಗೆ ಇವರು ತಲುಪಿದಂತಾಗಿದೆ. ಇದು ಇವರಿಗೆ ರಾಜಕೀಯವಾಗಿ ಬೆಳೆಯಲು ಅನುಕೂಲವಾಗಿದೆ ಎಂದು ರಾಜಕೀಯ ವಲಯದಲ್ಲಿ ಮಾತೊಂದು ಕೇಳಿ ಬರುತ್ತಿದೆ.

ಇದನ್ನೂ ಓದಿ: ಇಂದು ಈ ರಾಶಿಯವರಿಗೆ ವಾಹನ ಯೋಗ ಪ್ರಾಪ್ತಿ! ಉದ್ಯೋಗದಲ್ಲಿ ದೊರಕಲಿದೆ ಸದಾ ಬೆಂಬಲ!!!

You may also like

Leave a Comment