ಮಂಗಳೂರು: ಇತ್ತೀಚೆಗಷ್ಟೇ ವಿವಾಹ ಬಂಧನಕ್ಕೊಳಗಾಗಿದ್ದ ಮಹಿಳೆಯೊಬ್ಬರು ಪುಣೆಯಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾದ ಘಟನೆಯೊಂದು ನಡೆದಿದೆ.
ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದ ಸುಜಾತ ಶೆಟ್ಟಿ (38) ಮೃತ ಮಹಿಳೆ. ಉಳ್ಳಾಲ ತೌಡುಗೋಳಿ ನಿವಾಸಿಯಾದ ಇವರು ಪುಣೆಯಲ್ಲಿ ವಾಸವಾಗಿದ್ದರು.
ಸುಜಾತ ಶೆಟ್ಟಿ ಇವರನ್ನು ಪಜೀರು ಪಾನೇಲ ನಿವಾಸಿ ಪುಣೆಯಲ್ಲಿ ಕ್ಯಾಂಟೀನ್ ನಡೆಸುತ್ತಿದ್ದ ಸುರೇಶ್ ಕೈಯ್ಯ ಎಂಬುವವರಿಗೆ ಮದುವೆ ಮಾಡಿ ಕೊಡಲಾಗಿತ್ತು. ಅ.8 ರಂದು ಸುಜಾತ ಮೃತದೇಹ ಭಾರತೀಯ ವಿದ್ಯಾಪೀಠದಲ್ಲಿರುವ ಮನೆಯೊಳಗೆ ಅನುಮಾನಾಸ್ಪದವಾಗಿ ಕಂಡು ಬಂದಿದೆ.
ಅಲ್ಲಿನ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ನಂತರ ಶವವನ್ನು ಮಹಜರಿಗೆ ಕಳುಹಿಸಿ ಕೊಡಲಾಗಿತ್ತು. ಅ.9 ರಂದು ಅಂತಿಮ ಸಂಸ್ಕಾರ ನಡೆದಿದ್ದು, ಮನೆ ಮಂದಿ ಸುರೇಶ್ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದಾರೆ.
ಶವಮಹಜರು ವರದಿ ಬಂದ ನಂತರ ಪ್ರಕರಣದ ಕುರಿತು ಸತ್ಯ ಅರಿವಾಗಲಿದೆ.
ಇದನ್ನು ಓದಿ: Israel Palestine War: ಸ್ವಂತ ಮಗನನ್ನೇ ಯುದ್ಧ ಭೂಮಿಗೆ ಕಳಿಸಿದ ಇಸ್ರೇಲ್ ಪ್ರಧಾನಿ ?!
