Kerala High Court: ಹೆತ್ತಮ್ಮನಿಗೆ ಹೆಗ್ಗಣ ಮುದ್ದು ಎಂಬ ಮಾತು ಹೆಚ್ಚು ಪ್ರಚಲಿತ. ತಾಯಿಯನ್ನು(Mother)ದೇವರ ಸ್ವರೂಪಿ ಎಂದೇ ಪರಿಗಣಿಸಲಾಗುತ್ತದೆ. ಆದರೆ, ಇಲ್ಲೊಂದು ಕಡೆ ಹೆತ್ತ ತಾಯಿಯೇ ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಅತ್ಯಾಚಾರ ನಡೆಸಲು ನಡೆಸಲು ಅನುವು ಮಾಡಿಕೊಟ್ಟಿರುವ ಹೇಯ ಕೃತ್ಯ ವರದಿಯಾಗಿದೆ.
ತಾಯಿಯೇ ತನ್ನ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ದೌರ್ಜನ್ಯ ನಡೆಸಲು ಮಲತಂದೆಗೆ ಅನುವು ಮಾಡಿಕೊಟ್ಟಿರುವ ಆರೋಪ ಕೇಳಿ ಬಂದಿದೆ. ಈ ಪ್ರಕರಣದ ಕುರಿತಂತೆ ತಾಯಿ ಕೇರಳ ಹೈಕೋರ್ಟ್ನಲ್ಲಿ (Kerala High Court)ನಿರೀಕ್ಷಣಾ ಜಾಮೀನು ಕೋರಿ ಮನವಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಗೋಪಿನಾಥ್ ಪಿ “ತಾಯಿಯ ಮೇಲಿನ ಆರೋಪಗಳು ಸತ್ಯವೆಂದು ಸಾಬೀತಾದಲ್ಲಿ, ತಾಯ್ತನಕ್ಕೆ ಅಪಮಾನ ಮಾಡಿದಂತೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಈ ಪ್ರಕರಣದಲ್ಲಿ ಹೆತ್ತ ತಾಯಿಯೇ ಆರೋಪಿಯಾಗಿರುವ ಹಿನ್ನೆಲೆ ತನ್ನ ಅಪ್ರಾಪ್ತ ವಯಸ್ಸಿನ ಮಗಳಿಂದ ಆರೋಪಿಗಳಿಗೆ ನೆರವಾಗುವ ರೀತಿಯಲ್ಲಿ ಸಾಕ್ಷ್ಯ ಹೇಳಿಸುವ ಇಲ್ಲವೇ ಪ್ರಭಾವ ಬೀರುವ ಸಂಭವದ ಬಗ್ಗೆ ಕೋರ್ಟ್ ಅನುಮಾನ ವ್ಯಕ್ತಪಡಿಸಿ ಆರೋಪ ಹೊತ್ತಿರುವ ಮಹಿಳೆಗೆ ಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.ಈ ಪ್ರಕರಣದಲ್ಲಿ ಅಪ್ರಾಪ್ತ ವಯಸ್ಸಿನ ಹುಡುಗಿಯ ಮೇಲೆ ನಡೆದಿರುವ ಅತ್ಯಾಚಾರದಲ್ಲಿ ಮಲತಂದೆ ಮೊದಲ ಆರೋಪಿಯಾಗಿದ್ದು, ಹೆತ್ತ ತಾಯಿ ಎರಡನೇ ಆರೋಪಿಯಾಗಿದ್ದಾರೆ. ಪೋಕ್ಸ್ ಕಾಯ್ದೆಯ, ಐಪಿಸಿ ಸೆಕ್ಷನ್ 376(2)(1), 376 (3) ಹಾಗೂ ಮಕ್ಕಳ ಆರೈಕೆ ಮತ್ತು ರಕ್ಷಣಾ ಕಾಯ್ದೆ ಸೆಕ್ಷನ್ 75 ಅಡಿಯಲ್ಲಿ ಆರೋಪ ದಾಖಲಾಗಿದೆ.
ಈ ನಡುವೆ, ಅರ್ಜಿದಾರರ ವಿರುದ್ಧ ಮಾಡಿರುವ ಆರೋಪಗಳು ತುಂಬಾ ಗಂಭೀರವಾದ ಪ್ರಕರಣವಾಗಿದ್ದು, ಈ ಆರೋಪಗಳು ಸಾಬೀತಾದಲ್ಲಿ ತಾಯ್ತನಕ್ಕೆ ಅಪಮಾನವಾದಂತೆ. ಈ ಹಿನ್ನೆಲೆಯಲ್ಲಿ ಅವರಿಗೆ ನಿರೀಕ್ಷಾ ಜಾಮೀನು ಕೊಡುವಂತಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಎರಡನೇ ಆರೋಪಿ ಮತ್ತು ಅರ್ಜಿದಾರರ ಮಹಿಳೆಯ ಮುಂದೆಯೇ ಅತ್ಯಾಚಾರ ನಡೆದಿರುವ ಕುರಿತು ಸಂತ್ರಸ್ತೆಯು ಹೇಳಿಕೆ ನೀಡಿದ್ದು ಹೀಗಾಗಿ ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: JDS -BJP:ಜೆಡಿಎಸ್ ಪಕ್ಷದ ನಾಯಕರ ಕೈಗೆಟಕುವ ಬಿಜೆಪಿ ವರಿಷ್ಠರು, ರಾಜ್ಯ ಬಿಜೆಪಿ ನಾಯಕರಿಗೆ ಸಿಗೋದಿಲ್ಲ! ಕಾರಣ ಇದಿರಬಹುದೇ?
