Israel Palestine War: ಇಸ್ರೇಲ್ ಹಾಗೂ ಪ್ಯಾಲೆಸ್ತೇನ್ ಯುದ್ದ(Israel Palestine War) ಇಡೀ ಪ್ರಪಂಚವನ್ನೇ ನಲುಗಿಸಿಬಿಟ್ಟಿದೆ. ಕಳೆದೆರಡು ದಿನಗಳಿಂದ ನಡೆಯುತ್ತಿರವ ದಾಳಿಗೆ ಇಸ್ರೇಲ್ ನಲುಗಿ ಹೋಗಿದೆ. ಹಮಾಸ್ ಉಗ್ರರು ಇಸ್ರೇಲ್ (Israel) ನಗರದ ಒಳಗಡೆ ನುಗ್ಗಿ ಸೈನಿಕರ ಜನರ ಪ್ರಾಣ ತೆಗೆಯುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ದಾಳಿ ನಡೆಸುತ್ತಿದ್ದರೂ ಇಸ್ರೇಲ್ ಪವರ್ ಏನೇನೂ ಸಾಲದಂತಾಗಿದೆ. ಈ ನಡುವೆ ಇಡೀ ಮನುಕುಲವೇ ಮರುಗುವಂತೆ ಹಮಾಸ್ ಉಗ್ರರು ಬರೋಬ್ಬರಿ 40 ಇಸ್ರೇಲ್ ಮಕ್ಕಳ ಶಿರಚ್ಛೇಧ ಮಾಡಿದ್ದಾರೆ.
ಹೌದು, ಹಮಾಸ್ ಉಗ್ರರ ಭೀಕರತೆ ಇಸ್ರೇಲ್ ನಲುಗಿದೆ. ಪ್ರತಿದಾಳಿ ನಡೆಸುತ್ತಿದ್ದರೂ, ಇಸ್ರೇಲ್ ನಾಗರೀಕರ ಮೇಲೆ ಉಗ್ರರು ನಡೆಸುತ್ತಿರುವ ಪೈಶಾಚಿಕ ಕೃತ್ಯವನ್ನು ಇಸ್ರೇಲ್ ಸಹಿಸದಾಗುತ್ತಿದೆ. ಪ್ರಪಂಚದ ಹೆಚ್ಚಿನ ರಾಷ್ಟ್ರಗಳು ಇಸ್ರೇಲ್ ಪರ ನಿಂತರೂ ಏನೂ ಮಾಡಲಾಗುತ್ತಿಲ್ಲ. ಈ ಬೆನ್ನಲ್ಲೇ ಇಡೀ ವಿಶ್ವವವೇ ಬೆಚ್ಚಿಬೀಳುವಂತಹ ಘಟನೆ ನಡೆದಿದ್ದು, ರಾಕ್ಷಸಾಗಿರುವ ಹಮಾಸ್ ಉಗ್ರರು ಬರೋಬ್ಬರಿ 40 ಇಸ್ರೇಲ್ ಮಕ್ಕಳ ಶಿರಚ್ಛೇಧ ಮಾಡಿದ್ದಾರೆ. ಈ ವಿಡಿಯೋ ಬಹಿರಂವಾಗುತ್ತಿದ್ದಂತೆ ಇಡೀ ವಿಶ್ವವೇ ಬೆಚ್ಚಿ ಬಿದ್ದಿದೆ. ಈ ಬೆನ್ನಲ್ಲೇ ಹಮಾಸ್ ಹೆಡೆಮುರಿ ಕಟ್ಟಲು ಇದೀಗ ಅಮೆರಿಕ ಪಡೆ ಇಸ್ರೇಲ್‌ಗೆ ಬಂದಿಳಿದಿದೆ.
ಅಂದಹಾಗೆ ಇದೀಗ ತಡವಾಗಿ ಇಸ್ರೇಲ್ ನ ಒಳ ನುಗ್ಗಿ ಹಮಾಸ್ ಉಗ್ರರು ಶನಿವಾರದಿಂದ ನಡೆಸಿರುವ ಭೀಕರ ಹತ್ಯೆಯಲ್ಲಿ ಇದುವರೆಗೂ 40 ಮಕ್ಕಳ ಶಿರಚ್ಚೇಧ ಮಾಡಿರುವ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಇಸ್ರೇಲ್ ಸೈನಿಕರು ಕಾರ್ಯಾಚರಣೆಯಲ್ಲಿ ಹಲವು ಭಾಗದಲ್ಲಿ ಮಕ್ಕಳು, ಪೋಷಕರು ಸೇರಿದಂತೆ ಕುಟುಂಬಗಳನ್ನೇ ಹತ್ಯೆ ಮಾಡಿರುವ ಘಟನೆಗಳೇ ಎದುರಾಗುತ್ತಿದೆ. ಇಸ್ರೇಲ್ ಮನೆಗಳ ಮೇಲೆ ದಾಳಿ ಮಾಡಿದ ಹಮಾಸ್ ಉಗ್ರರು ಶಿರಚ್ಚೇಧ ಮಾಡಿದ್ದಾರೆ. ಇದರಲ್ಲಿ 40ಕ್ಕೂ ಹೆಚ್ಚು ಮಕ್ಕಳೇ ಇದ್ದಾರೆ. ಎಳೆ ಹಸಗೂಸು, ಒಂದು ವರ್ಷದಿಂದ 14 ವರ್ಷದ ಮಕ್ಕಳನ್ನೂ ಬಿಡದೇ ಶಿರಚ್ಛೇಧ ಮಾಡಲಾಗಿದೆ ಎಂದು ವರದಿಯೊಂದು ಹೇಳಿದೆ.
ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ಮಾಡಿದಾಗಿಂದಲೂ ತಾವು ನಡೆಸುವ ಹೇಯ ಕೃತ್ಯಗಳನ್ನು ತಾವೇ ಸ್ವತಃ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ಹರಿಬಿಡುತ್ತಿದ್ದಾರೆ. ಇದನ್ನು ಕಂಡ ಇಡೀ ಪ್ರಪಂಚವೇ ನಲುಗಿದೆ. ಈ ಬೆನ್ನಲ್ಲೇ 40 ಮಕ್ಕಳ ಶಿರಚ್ಛೇದದ ವಿಚಾರವಂತೂ ಎಲ್ಲರನ್ನೂ ದಂಗುಬಡಿಸಿದೆ.
