Home » Interesting Fact: ಭರ್ತಿ 100 ವರ್ಷ ಬದುಕಬೇಕೆಂಬ ಬಯಕೆಯೇ ?! ಕೊನೆಗೂ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ ನೋಡಿ ‘ಶತಾಯುಷ್ಯ’ ದ ರಹಸ್ಯ

Interesting Fact: ಭರ್ತಿ 100 ವರ್ಷ ಬದುಕಬೇಕೆಂಬ ಬಯಕೆಯೇ ?! ಕೊನೆಗೂ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ ನೋಡಿ ‘ಶತಾಯುಷ್ಯ’ ದ ರಹಸ್ಯ

2 comments
Interesting Fact

Interesting Fact: ಮನುಷ್ಯನ ಜೀವಿತಾವಧಿಯನ್ನು ಹೆಚ್ಚಿಸಲು ಇಂದಿಗೂ ಹಲವರ ಪ್ರಯತ್ನ ನಡೆಯುತ್ತಲೇ ಇದೆ. ಕನಿಷ್ಠ ಅಂದರೆ ಕನಿಷ್ಠ 100 ವರ್ಷಗಳಾದರೂ ದೀರ್ಘಾಯುಷಿಗಳಾಗಿ ಬದುಕಬೇಕು ಎಂಬ ಹಂಬಲ ಎಲ್ಲರಿಗೂ ಇದ್ದೇ ಇರುತ್ತದೆ.

ಹಿಂದಿನ ಕಾಲದ ಜನರು ಹೆಚ್ಚು ಕಾಲ ಬದುಕುತ್ತಿದ್ದರು. ಅದಕ್ಕೆ ಕಾರಣ ಅವರ ಜೀವನ ಶೈಲಿ ಹಾಗೂ ಅವರ ಆಹಾರ ಪದ್ಧತಿಯೇ ಆಗಿತ್ತು. ಆದರೆ ಈಗ ಹಾಗಿಲ್ಲ. ಈಗ ಆಹಾರ ಪದ್ಧತಿ ಹಾಗೂ ಜೀವನಶೈಲಿಗಳೆರಡೂ ಬದಲಾಗಿವೆ. ಇದು ಫಾಸ್ಟ್ ಫುಡ್ ಯುಗ. ಅದರಿಂದಲೇ ಹೆಚ್ಚು ಜನರು ತಮ್ಮ ಅರ್ಧ ಆಯಸ್ಸಿನಲ್ಲೇ ಸಾವನ್ನಪ್ಪುತ್ತಿದ್ದಾರೆ. ಆದರೆ ದೀರ್ಘಾಯುಷಿಗಳಾಗಿ ಬದುಕಲು ಆಸೆ ಇರುವವರಿಗೆ ಒಂದು ಸಂತಸದ ಮತ್ತು ಕುತೂಹಲದ ಸುದ್ದಿ (Interesting Fact) ಇಲ್ಲಿದೆ.

ಸಾಮಾನ್ಯವಾಗಿ ಪ್ರಪಂಚದ ಹೆಚ್ಚಿನ ದೇಶಗಳಲ್ಲಿ ಮನುಷ್ಯರ ಜೀವಿತಾವಧಿ ಹೆಚ್ಚು ಅಂದರೆ 70 ರಿಂದ 75 ವರ್ಷಗಳ ನಡುವೆ ಇರುತ್ತದೆ. ಆದರೆ ಇನ್ಮುಂದೆ ಯಾವುದೇ ವ್ಯಕ್ತಿ 100 ವರ್ಷಗಳವರೆಗೆ ಬದುಕಬಹುದು ಎಂದು ವೈಜ್ಞಾನಿಕ ಸಂಶೋಧನೆ ಬಹಿರಂಗಪಡಿಸಿದೆ. ಹೌದು, ಸಂಶೋಧಕರು 100 ವರ್ಷ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಜನರ ಮೇಲೆ ವಿಶೇಷ ಅಧ್ಯಯನ ನಡೆಸಿದ್ದಾರೆ. ಉರಿಯೂತ, ಮೂತ್ರಪಿಂಡ, ಯಕೃತ್ತು, ಅಪೌಷ್ಟಿಕತೆ ಮತ್ತು ರಕ್ತಹೀನತೆ ಹೀಗೆ ಅನೇಕ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಿದ್ದಾರೆ.

ಅಧ್ಯಯನ ಪ್ರಕಾರ, ಮುಖ್ಯವಾಗಿ 100 ವರ್ಷಗಳ ಕಾಲ ಬದುಕಿದವರಲ್ಲಿ ಗ್ಲೂಕೋಸ್ ಮಟ್ಟವು 6.5 ಕ್ಕಿಂತ ಹೆಚ್ಚಿಲ್ಲ, ಆದರೆ ರಕ್ತದಲ್ಲಿನ ಕ್ರಿಯೇಟಿನೈನ್ ಮಟ್ಟವು 1.25 ಕ್ಕಿಂತ ಕಡಿಮೆಯಿತ್ತು. ಇಷ್ಟೇ ಅಲ್ಲ, 100 ವರ್ಷಗಳ ಜೀವನದ ರಹಸ್ಯದಲ್ಲಿ ಅಲಾತ್ ಮತ್ತು ಅಲ್ಬುಮಿನ್ ಪಾತ್ರವು ಪ್ರಮುಖವಾಗಿದೆ. ಕೊಲೆಸ್ಟ್ರಾಲ್ ಮಟ್ಟವನ್ನು ಸಹ ಕಾಪಾಡಿಕೊಳ್ಳಬೇಕು. ಕೆಟ್ಟ ಜೀವನಶೈಲಿ ಇದ್ದರೆ ಅಥವಾ ಆಹಾರದ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಅಂಥವರು 100 ವರ್ಷಗಳ ಕಾಲ ಬದುಕುವುದು ಅಸಾಧ್ಯ ಎಂದು ಕೂಡ ತಿಳಿದು ಬಂದಿದೆ.

ಒಟ್ಟಿನಲ್ಲಿ ವಯಸ್ಸಾದಂತೆ ಮೂತ್ರಪಿಂಡ ಮತ್ತು ಯಕೃತ್ತಿನ ಸುರಕ್ಷತೆ, ಗ್ಲೂಕೋಸ್ ಮತ್ತು ಯೂರಿಕ್ ಆಮ್ಲದ ಮೇಲೆ ಗಮನ ಇರಿಸಬೇಕು. ವಯಸ್ಸಿನ ಯಾವುದೇ ಹಂತದಲ್ಲಿ ನಮ್ಮ ಕೊಲೆಸ್ಟ್ರಾಲ್ ಮಟ್ಟ, ಗ್ಲೂಕೋಸ್ ಮಟ್ಟ, ಕ್ರಿಯೇಟಿನೈನ್ ಮಟ್ಟ, ಯೂರಿಕ್ ಆಸಿಡ್ ಮತ್ತು TIBC ಅನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರೆ ಯಾವುದೇ ದೈಹಿಕ ಸಮಸ್ಯೆಗಳಿಲ್ಲದೆ 10ವರ್ಷ ಬದುಕಬಹುದು ಎಂದು ತಿಳಿದು ಬಂದಿದೆ.

 

ಇದನ್ನೂ ಓದಿ: Israel-Gaza conflict: ಇಸ್ರೇಲ್ ರೀತಿ ಭಾರತದ ಮೇಲೂ ದಾಳಿ ?! ಅರೆ… ಏನಿದು ಶಾಕಿಂಗ್ ನ್ಯೂಸ್ ?!

You may also like

Leave a Comment