K N Rajanna: ರಾಜ್ಯದಲ್ಲಿ ಬರಗಾಲ ಹಿನ್ನೆಲೆಯಲ್ಲಿ ಕೃಷಿ ಸಾಲ ಮನ್ನಾ ಮಾಡಲಾಗುವುದೇ ಎಂಬುದರ ಕುರಿತಾಗಿ ಸಹಕಾರ ಸಚಿವ ಕೆ.ಎನ್. ರಾಜಣ್ಣ(K N Rajanna) ಪ್ರತಿಕ್ರಿಯೆ ನೀಡಿದ್ದು, ಸಾಲಾಮನ್ನಾ ನಿರೀಕ್ಷೆಯಲ್ಲಿದ್ದ ಅನೇಕ ರೈತರಿಗೆ ಭಾರೀ ನಿರಾಸೆಯಾಗಿದೆ. ಅಲ್ಲದೆ ಅವರ ಮಾತಿನಿಂದ ಆತಂಕವೂ ಹೆಚ್ಚಾಗಿದೆ. ಹಾಗಿದ್ರೆ ರಾಜಣ್ಣ ಹೇಳಿದ್ದೇನು?
ಹೌದು, ರಾಜ್ಯದಲ್ಲಿ ತೀವ್ರ ಬರಗಾಲ ಕಾಡುತ್ತಿದೆ. ಕೇಂದ್ರದ ತಂಡವೇ ತಂಡೋಪ ತಂಡವಾಗಿ ಬಂದು ರಾಜ್ಯದಲ್ಲಿ ಬರಗಾಲ ಅಧ್ಯಯನ ನಡೆಸುತ್ತಿವೆ. ಅಲ್ಲದೆ ಈ ಹಿನ್ನೆಲೆಯಲ್ಲಿ ರೈತರ ಸಾಲ ಮನ್ನ ಆಗುತ್ತದೆ ಎಂಬ ವಿಚಾರ ಕೂಡ ಸುದ್ದಿಯಲ್ಲಿತ್ತು. ಸದ್ಯ ಈ ಬಗ್ಗೆ ಸಚಿವ ರಾಜಣ್ಣ ಪ್ರತಿಕ್ರಿಯಿಸಿದ್ದು ‘ಬರಗಾಲದ ಹಿನ್ನೆಲೆಯಲ್ಲಿ ಕೃಷಿ ಸಾಲದ ಬಗ್ಗೆ ಕೇಂದ್ರ ಬರ ಅಧ್ಯಯನ ತಂಡದ ಜತೆ ಚರ್ಚಿಸಲಾಗಿದೆ. ಕೃಷಿ ಸಾಲ ಮರುಪಾವತಿ ಅವಧಿ ವಿಸ್ತರಣೆ, ಹೊಸ ಸಾಲ ವಿತರಣೆ ಸಂಬಂಧ ಕೇಂದ್ರ ಸರ್ಕಾರವೇ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
ಅಂದಹಾಗೆ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬರಗಾಲದ ಹಿನ್ನೆಲೆಯಲ್ಲಿ ಕೃಷಿ ಸಾಲ ಮನ್ನಾ ಮಾಡಲಾಗುತ್ತದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಅಧ್ಯಯನ ತಂಡದ ವರದಿ ಆಧರಿಸಿ ಕೇಂದ್ರ ಸರ್ಕಾರ ಕೈಗೊಳ್ಳುವ ನಿರ್ಧಾರದಂತೆ ಮುಂದಿನ ಕ್ರಮ ವಹಿಸುವುದಾಗಿ ಹೇಳಿದ್ದಾರೆ. ಈ ಮೂಲಕ ಬರ ಪರಿಹಾರಕ್ಕೆ ರಾಜ್ಯದಿಂದ ಏನಾದರು ಪರಿಹಾರ ಸಿಗುತ್ತ ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ತುಂಬಾ ನಿರಾಸೆ ಉಂಟಾಗಿದೆ.
ಇದನ್ನೂ ಓದಿ: D K Shivkumar: ಪ್ರದೀಪ್ ಈಶ್ವರನ್ ಬಿಗ್ ಬಾಸ್ ಎಂಟ್ರಿ ವಿವಾದ – ಅಚ್ಚರಿ ಹೇಳಿಕೆ ನೀಡಿದ ಡಿಕೆ ಶಿವಕುಮಾರ್!!
