Home » Mangaluru: ವೈರಲ್ ಆಗ್ತಿದೆ ಹಮಾಸ್ ಉಗ್ರರನ್ನು ‘ದೇಶಪ್ರೇಮಿಗಳು’ ಎಂದು ಕರೆದ ಮಂಗಳೂರು ವ್ಯಕ್ತಿ ಹೇಳಿಕೆಯ ವೀಡಿಯೋ

Mangaluru: ವೈರಲ್ ಆಗ್ತಿದೆ ಹಮಾಸ್ ಉಗ್ರರನ್ನು ‘ದೇಶಪ್ರೇಮಿಗಳು’ ಎಂದು ಕರೆದ ಮಂಗಳೂರು ವ್ಯಕ್ತಿ ಹೇಳಿಕೆಯ ವೀಡಿಯೋ

by Mallika
1 comment

Mangaluru: ಇಸ್ರೇಲ್‌ ಮತ್ತು ಪ್ಯಾಲೇಸ್ತೇನ್‌ ನಡುವೆ ಯುದ್ಧ ತಾರಕಕ್ಕೇರಿದ್ದು, ಇಲ್ಲಿ ಸಾವಿರಾರು ಅಮಾಯಕರ ಜೀವ ಬಲಿ ಪಡೆದಿರುವ ವರದಿಯನ್ನು ನೀವು ಓದುತ್ತಲೇ ಇರುತ್ತೀರಿ. ಇದರ ಮಧ್ಯೆ ಮಂಗಳೂರಿನ ವ್ಯಕ್ತಿಯೊಬ್ಬರು ಹಮಾಸ್‌ ಉಗ್ರರನ್ನು ʼದೇಶಪ್ರೇಮಿಗಳುʼ ಎಂದು ಕರೆದು ವೀಡಿಯೋ ಮಾಡಿ ಹರಿಬಿಟ್ಟು ವಿವಾದ ಉಂಟು ಮಾಡಿದ್ದಾನೆ.

ಮಂಗಳೂರಿನ (Mangaluru) ಝಾಕೀರ್‌ ಎಂಬಾತನ ವೀಡಿಯೋ ವೈರಲ್‌ ಆಗಿದ್ದು, ʼದೇಶಪ್ರೇಮಿ ಹಮಾಸ್‌ ಯೋಧರಿಗೆ ವಿಜಯವಾಗಲಿʼ ಎಂದು ಹೇಳಿದ್ದಾನೆ. ವಿಶ್ವ ಖಬ್ರುಸ್ತಾನ್‌ ಪ್ರೇಮಿ ಸಂಘದ ಸದಸ್ಯ ಎಂದು ಝಾಕೀರ್‌ ಹೇಳಿಕೊಂಡಿದ್ದಾನೆ.

ಶುಕ್ರವಾರದ ನಮಾಜ್‌ನಲ್ಲಿ ಪ್ರತ್ಯೇಕವಾಗಿ ಪ್ರಾರ್ಥಿಸಿ ಎಂದು ಈತ ಹೇಳಿದ್ದಾನೆ. ಇದರ ಕುರಿತು ವಿಶ್ವಹಿಂದೂ ಭಜರಂಗದಳ ಉಗ್ರರಿಗೆ ಬೆಂಬಲ ಕೊಡುವ ಇವನ ಮೇಲೆ ಮಂಗಳೂರು ಪೊಲೀಸ್‌ ಇಲಾಖೆ ಕಾನೂನು ಕ್ರಮ ತೆಗೆದುಕೊಳ್ಳಲಿ ಎಂದು ಆಗ್ರಹ ಮಾಡಿದೆ. ಅಧಿಕಾರಿಗಳೇ ಎಚ್ಚೆತ್ತುಕೊಳ್ಳಿ, ದೇಶಪ್ರೇಮಿಗಳು ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ಮಾಡಿ ಕೊಡಬೇಡಿ, ಕೂಡಲೇ ಇವನ ಬಂಧನ ಆಗಲಿ ಎಂದು ಶರಣ್‌ ಪಂಪ್‌ವೆಲ್‌ ಎಚ್ಚರಿಕೆ ನೀಡಿದ್ದಾರೆ.

ಈತ 2019 ರಲ್ಲಿ ಇದೇ ರೀತಿಯ ಮಾಡಿ ಹರಿಬಿಟ್ಟಿದ್ದ ಈ ಪೌರತ್ವ ಕಾಯ್ದೆ ವಿರುದ್ಧ ಭಾರೀ ಪ್ರತಿಭಟನೆ ನಡೆಸಲು ಕರೆ ಕೊಟ್ಟಿದ್ದ. ಅಂದು ಇದು ಮಂಗಳೂರು ಗಲಭೆಗೂ ಮುನ್ನ ವೈರಲ್‌ ಆಗಿತ್ತು. 2019 ರ ಡಿ.20 ನೆಹರೂ ಮೈದಾನಕ್ಕೆ ಬರುವಂತೆ ಕರೆ ಕೊಟ್ಟಿದ್ದು, ಬಳಿಕ ಸಿಎಎ ಪ್ರತಿಭಟನೆ ಮಂಗಳೂರಿನಲ್ಲಿ ಭಾರೀ ಗಲಭೆಯನ್ನು ಸೃಷ್ಟಿ ಉಂಟು ಮಾಡಿತ್ತು.

ಇದನ್ನೂ ಓದಿ: ಬರ ಪರಿಹಾರದ ಬಗ್ಗೆ ಕಂದಾಯ ಇಲಾಖೆಯಿಂದ ಬಂತು ಬಿಗ್ ಅಪ್ಡೇಟ್ – ಈ ದಿನವೇ ನಿಮ್ಮ ಖಾತೆ ಸೇರಲಿದೆ ಪರಿಹಾರ ಹಣ !

You may also like

Leave a Comment