Home » Bigg Boss Kannada Season 10: ‘ಬಿಗ್ ಬಾಸ್’ ಅಲ್ಲಿ ಪ್ರತೀ ದಿನ ಕೇಳೋ ಖಡಕ್ ಧ್ವನಿಗಳು, ಮಾತಗಳು ಯಾರದ್ದು ಗೊತ್ತಾ ?! ಇವರೇ ನೋಡಿ ಆ ಮೋಡಿಗಾರರು

Bigg Boss Kannada Season 10: ‘ಬಿಗ್ ಬಾಸ್’ ಅಲ್ಲಿ ಪ್ರತೀ ದಿನ ಕೇಳೋ ಖಡಕ್ ಧ್ವನಿಗಳು, ಮಾತಗಳು ಯಾರದ್ದು ಗೊತ್ತಾ ?! ಇವರೇ ನೋಡಿ ಆ ಮೋಡಿಗಾರರು

1 comment
Bigg Boss Kannada

Bigg Boss Kannada Season 10: ಬಿಗ್ ಬಾಸ್ ಸೀಸನ್ 10ರಲ್ಲಿ (BBK Season 10)ಈಗಾಗಲೇ 17 ಜನ ಸ್ಪರ್ಧಿಗಳು ಬಿಗ್‌ಬಾಸ್ ಮನೆಯೊಳಗೆ ಪಾದಾರ್ಪಣೆ ಮಾಡಿದ್ದಾರೆ. ಕರುನಾಡಿನ ನೆಚ್ಚಿನ ರಿಯಾಲಿಟಿ ಶೋ ಈಗಾಗಲೇ ಆರಂಭವಾಗಿದ್ದು, ‘ಬಿಗ್ ಬಾಸ್’ ಧ್ವನಿ (Bigg Boss Kannada Season 10)ಯಾರದ್ದು ಎಂಬ ಕುತೂಹಲ ಎಲ್ಲರನ್ನು ಸಹಜವಾಗಿ ಕಾಡುತ್ತದೆ. ‘ಬಿಗ್ ಬಾಸ್(‘Bigg Boss Kannada)ಅಲ್ಲಿ ಪ್ರತೀ ದಿನ ಕೇಳೋ ಖಡಕ್ ಧ್ವನಿಗಳು, ಮಾತಗಳು ಯಾರದ್ದು ಗೊತ್ತಾ ?! ಇವರೇ ನೋಡಿ ಆ ಮೋಡಿಗಾರರು!!

 

 

# ಬಿಎಂ ವೆಂಕಟೇಶ್‌
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೊತೆ ಜೊತೆಯಲಿ ಧಾರವಾಹಿಯ ಝೇಂಡೆ ಪಾತ್ರದ ಮೂಲಕ ಮನೆ ಮಾತಾದ ಕನ್ನಡದ ಪ್ರಸಿದ್ದ ನಟ ಬಿಎಂ ವೆಂಕಟೇಶ್‌ ರವರು ಅನೇಕ ಸಿನಿಮಾ, ಧಾರವಾಹಿಗಳಲ್ಲಿ ಕೂಡಾ ಬಣ್ಣ ಹಚ್ಚಿದ್ದಾರೆ. ಇವರು 2015ರಲ್ಲಿ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್‌ ಬಾಸ್‌ ಸೀಸನ್‌ 3ರಲ್ಲಿ ಧ್ವನಿ ನೀಡಿದ್ದರು.

# ಶ್ರೀನಿವಾಸ್‌ ಪ್ರಸಾದ್‌
2016ರಿಂದ ಇಲ್ಲಿಯವರೆಗೂ ಬಿಗ್‌ ಬಾಸ್‌ ಆಗಿ ಧ್ವನಿ ನೀಡುತ್ತಿರುವವರು ಶ್ರೀನಿವಾಸ್‌ ಪ್ರಸಾದ್ !! ಆದರೆ ಇಲ್ಲಿಯವರೆಗೆ ಇವರ ಮುಖ ಪರಿಚಯ ಹೆಚ್ಚಿನವರಿಗಿಲ್ಲ.

 

# ಅಮಿತ್‌ ಭಾರ್ಗವ್‌
ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ “ಸೀತೆ” ಧಾರಾವಾಹಿಯಲ್ಲಿ ಶ್ರೀರಾಮ ಪಾತ್ರದಾರಿಯಾಗಿ ಗಮನ ಸೆಳೆದಿದ್ದ ಅಮಿತ್‌ ಭಾರ್ಗವ್‌ 2013ರಲ್ಲಿ ಈಟಿವಿ ಕನ್ನಡದಲ್ಲಿ ಪ್ರಸಾರವಾದ ಬಿಗ್‌ ಬಾಸ್‌ ಸೀಸನ್‌ 1 ಮತ್ತು 2014 ರಲ್ಲಿ ಏಷ್ಯಾನೆಟ್‌ ಸುವರ್ಣದಲ್ಲಿ ಪ್ರಸಾರವಾದ ಬಿಗ್‌ ಬಾಸ್‌ ಸೀಸನ್‌ 2 ಕ್ಕೆ ಧ್ವನಿ ನೀಡಿದ್ದರು.

# ಬಡೆಕ್ಕಿಲ ಪ್ರದೀಪ್‌:
ಬಡೆಕ್ಕಿಲ ಪ್ರದೀಪ್ ರವರು ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರಿಗೆ ಚಿರಪರಿಚಿತರಾಗಿದ್ದಾರೆ. ನಟ, ಕಲಾವಿದ ಮಾತ್ರವಲ್ಲದೇ ಮಾಡೆಲ್ ಆಗಿ ಕೂಡ ಬಡೆಕ್ಕಿಲ ಪ್ರದೀಪ್‌ ಗುರುತಿಸಿಕೊಂಡಿದ್ದಾರೆ. ಇವರು ಬಿಗ್‌ ಬಾಸ್‌ ಶೋಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ಬಿಗ್‌ ಬಾಸ್‌ ಆಗಿ ದ್ವನಿ ನೀಡುವುದಿಲ್ಲ ಬದಲಿಗೆ, ಕಾರ್ಯಕ್ರಮದ ಕೊನೆಗೆ ಬಿಗ್ ಬಾಸ್ ನೀಡುವ ಸಂದೇಶಕ್ಕೆ ಇವರು ಧ್ವನಿ ನೀಡುತ್ತಾರೆ.

ಇದನ್ನೂ ಓದಿ: Kitchen Hacks: ಮನೆಯಲ್ಲಿ ಗ್ಯಾಸ್‌ ಸ್ಟವ್‌ ಬರ್ನರ್‌ ಗಳು ಜಿಡ್ಡು ಗಟ್ಟಿವೆಯೇ ?! ಜಸ್ಟ್ ಹೀಗೆ ಮಾಡಿ ಸಾಕು ಫಳ ಫಳ ಹೊಳೆಯುತ್ತದೆ!

You may also like

Leave a Comment