Home » Mysore: ‘ಒಕ್ಕಲಿಗರು ಸಂಸ್ಕೃತಿ ಇಲ್ಲದ ಪಶುಗಳು’ – ಮಹಿಷ ದಸರಾದಲ್ಲಿ ಕೇಳಿಬಂತು ಶಾಕಿಂಗ್ ಹೇಳಿಕೆ !! ಹೇಳಿದ್ಯಾರು ಗೊತ್ತೇ ?!

Mysore: ‘ಒಕ್ಕಲಿಗರು ಸಂಸ್ಕೃತಿ ಇಲ್ಲದ ಪಶುಗಳು’ – ಮಹಿಷ ದಸರಾದಲ್ಲಿ ಕೇಳಿಬಂತು ಶಾಕಿಂಗ್ ಹೇಳಿಕೆ !! ಹೇಳಿದ್ಯಾರು ಗೊತ್ತೇ ?!

1,523 comments
KS Bhagavan

KS Bhagavan: ಹಲವು ವಿವಾದಗಳ, ವಿರೋಧಗಳ ನಡುವೆಯೇ ಮಹಿಷ ದಸರಾ ಆಚರಣೆಯನ್ನು ಸಮಿತಿಯು ತುಂಬಾ ವಿಜೃಂಭಣೆಯಿಂದ ಆಚರಿಸಿದೆ. ಸಾವಿರಾರು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ನಾಡಿನ ಕೆಲವು ಪ್ರಗತಿಪರ ಚಿಂತಕರು, ಬುದ್ಧಿ ಜೀವಿಗಳು, ಕೆಲವು ಮಠದ ಮಠದ ಮಠಾಧಿಪತಿಗಳು ಕೂಡ ಭಾಗವಹಿಸಿದ್ದರು. ಅಂತೆಯೇ ಈ ಕಾರ್ಯಕ್ರಮದಲ್ಲಿ ‘ಒಕ್ಕಲಿಗರು ಸಂಸ್ಕೃತಿ ಹೀನ ಪಶುಗಳು’ ಎಂಬ ಶಾಕಿಂಗ್ ಹೇಳಿಕೆಯೊಂದು ಕೇಳಿಬಂದಿದೆ. ಹಾಗಿದ್ರೆ ಇದನ್ನು ಹೇಳಿದ್ಯಾರು? ಯಾಕಾಗಿ ಹೇಳಿದರು ಗೊತ್ತಾ ?!

ಹೌದು, ಮೈಸೂರು(Mysore) ನಾಡ ಹಬ್ಬ ದಸರಾವನ್ನು ಆಚರಿಸಲು ಮದುವಣಗಿತ್ತಿಯಂತೆ ಸಿಂಗಾರಗೊಂಡು ಜಗಮಗಿಸುತ್ತಿದ್ದರೆ ಇತ್ತ ಕೆಲವರು ನಿನ್ನೆ ಮೈಸೂರಿನ ಪುರುಭವನದ ಆವರಣದಲ್ಲಿ ಇದಕ್ಕೆ ತದ್ವಿರುದ್ಧವಾಗಿ ‘ಮಹಿಷಾ ದಸರವನ್ನು'( ಆಚರಿಸಿ ಸಂಭ್ರಮಿಸಿದರು. ಎಲ್ಲೆಲ್ಲೂ ನೀಲಿ ಬಟ್ಟೆಗಳು ರಾರಾಜಿಸಿ, ಮಹಿಷಾಸುರನಿಗೆ ಜೈಕಾರ ಮೊಳಗಿದವು. ಆರಂಭದಲ್ಲಿ ಹೇಳಿದಂತೆ ಅನೇಕ ವಿಚಾರವಾದಿಗಳು ಇಲ್ಲಿ ಪಾಲ್ಗೊಂಡು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡರು. ಅಂತೆಯೇ ಕಾರ್ಯಕ್ರಮದ ಮುಖ್ಯ ಭಾಗವಾಗಿದ್ದ ವಿಚಾರವಾದಿ ಕೆ.ಎಸ್. ಭಗವಾನ್‌(KS Bhagavan) ಅವರು ಈ ವೇಳೆ ‘ಒಕ್ಕಲಿಗರು ಸಂಸ್ಕೃತಿ ಹೀನ ಪಶುಗಳು ಎಂದು ರಾಷ್ಟ್ರಕವಿ ಕುವೆಂಪು(Kuvempu) ಹೇಳಿದ್ದರು’ ಎಂದು ಹೇಳಕೆಯನ್ನು ನೀಡಿ ಎಲ್ಲರಿಗೂ ಅಚ್ಚರಿ ಮೂಡಿಸಿದರು.

ಅಂದಹಾಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ರಾಷ್ಟ್ರ ಕವಿ ಕುವೆಂಪು ಎಲ್ಲರಿಗೂ ಆದರ್ಶರು. ನಾನು ಹಿಂದೂ ಧರ್ಮವನ್ನು ಯಾವಾಗಲೋ ಬಿಟ್ಟು ಬಿಟ್ಟೆ ಎಂದು ಕುವೆಂಪು ಯಾವಾಗಲೂ ಹೇಳುತ್ತಿದ್ದರು. ಆದರೆ, ಅವರ ಶಿಷ್ಯರಿಗೆ ಅದು ಅರ್ಥವಾಗಲಿಲ್ಲ. ಆದ್ದರಿಂದಲೇ ಕುವೆಂಪು, ಒಕ್ಕಲಿಗರು ಸಂಸ್ಕೃತಿ ಹೀನ ಪಶುಗಳು ಎಂದು ಹೇಳಿದ್ದರು. ಇದು ನನ್ನ ಮಾತಲ್ಲ; ಕುವೆಂಪು ಅವರದ್ದು. ಇಲ್ಲದಿದ್ದರೆ ನನಗೆ ಹೊಡೆಯಲು ಬರುತ್ತಾರೆ. ನನ್ನನ್ನು ಕೊಂದು ಹಾಕಿ ಬಿಡುತ್ತಾರೆ. ಆದರೆ, ನಿಜ ಹೇಳಿಯೇ ಸಾಯಬೇಕು’ ಹೀಗಾಗಿ ಹೇಳುತ್ತಿದ್ದೆನೆ’ ಎಂದರು.

ಇಷ್ಟೆಲ್ಲಾ ಹೇಳಿದ ವಿಚಾರವಾದಿ ಭಗವಾನ್ ಅವರು ಕುವೆಂಪು ಎಲ್ಲಿ ಹೀಗೆ ಹೇಳಿದ್ದಾರೆ, ಯಾವ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ಯಾಕಾಗಿ ಒಕ್ಕಲಿಗರನ್ನೇ ಉದ್ದೇಶಿಸಿ ಹೀಗೆ ಹೇಳಿದ್ದಾರೆ. ಯಾವ ಸಂದರ್ಭದಲ್ಲಿ ಹೇಳಿದ್ದಾರೆ ಎನಬುದನ್ನು ಹೇಳಲಿಲ್ಲ. ಹೇಳಬೇಕಾಗಿತ್ತು. ಯಾಕೆಂದರೆ ಇದು ವಿವಾದದ ಸ್ವರೂಪ ಪಡೆಯುವ ಲಕ್ಷಣಗಳಿವೆ. ಉಲ್ಲೇಖದ ದಾಖಲೆ ನೀಡಿದ್ದರೆ ಎಲ್ಲರೂ ಅದನ್ನು ಗಮನಿಸಬಹುದಿತ್ತು.

ಇನ್ನು ಮಹಿಷಾ ದಸರ ಆಚರಣೆಗೆ ಕೊನೆಯ ಗಳಿಗೆಯಲ್ಲಿ ಅನುಮತಿ ದೊರೆತರೂ ಚಾಮುಂಡಿಬೆಟ್ಟದಲ್ಲಿರುವ ಮಹಿಷ ಪ್ರತಿಮೆಗೆ ಮಾಲಾರ್ಪಣೆ ಮಾಡಲು, ಮೆರವಣಿಗೆ ನಡೆಸಲು ಅವಕಾಶವನ್ನು ನೀಡಿಲ್ಲ. ಚಾಮುಂಡಿ ಬೆಟ್ಟ ಪ್ರವೇಶಕ್ಕೆ ನಿರ್ಬಂಧ ವಿಧಿಸಿಲಾಗಿತ್ತು. ಇತ್ತ ಪುರಭವನದ ಕಾರ್ಯಕ್ರಮಕ್ಕೆ ಜನರು ತಂಡೋಪತಂಡವಾಗಿ ಬಂದು ನೀಲಿ ಪಟ್ಟಿ ಧರಿಸಿಕೊಂಡು ಅವರು‌ ಭಾಗವಹಿಸಿದರು. ಜೈ ಭೀಮ್ ಘೋಷಣೆಗಳು, ಮಹಿಷಾಸುರನಿಗೂ ಜೈಕಾರ ಮೊಳಗಿದವು. ಮೈಸೂರಿನ ಅಸ್ಮಿತೆಗಾಗಿ ಮಹಿಷ ದಸರಾ ಎಂಬ ಫಲಕವನ್ನೂ ಹಾಕಲಾಗಿತ್ತು.

ಇದನ್ನೂ ಓದಿ: Uttar Pradesh: ಕಬ್ಬಿನ ಗದ್ದೆಯಲ್ಲಿ ಪತ್ತೆಯಾದ್ಲು ನಾಪತ್ತೆಯಾದ ಹುಡುಗಿ – ಬಾಯಿಗೆ ಕೆಸರು ತುಂಬಿ, ಕಣ್ಣಿಗೆ ಕಬ್ಬಿನಿಂದ ಚುಚ್ಚಿ ಬರ್ಬರವಾಗಿ ಕೊಂದ ಪಾಪಿಗಳು

You may also like

Leave a Comment