Divorce: ಇಂಡೋನೇಷ್ಯಾದಲ್ಲಿ 78 ವರ್ಷದ ಅಜ್ಜ 17ರ ಹುಡುಗಿಯನ್ನು ವಿವಾಹವಾಗಿ(Marriage)ಭಾರೀ ಸುದ್ದಿಯಾಗಿದ್ದರು. ಮದುವೆಯಾದ 22 ದಿನದಲ್ಲಿಯೇ ವಿಚ್ಛೇಧನ ಕೂಡ ಪಡೆದಿದ್ದಾರಂತೆ. ಅಷ್ಟಕ್ಕೂ ಈ ವಿಚ್ಛೇದನಕ್ಕೆ(Divorce) ಕಾರಣವೇನು ಗೊತ್ತಾ?
ಇಂಡೋನೇಷ್ಯಾದಲ್ಲಿ 78 ವರ್ಷದ ಅಬಾ ಸರ್ನಾ 17ರ ಹರೆಯದ ಯುವತಿ ನೋನಿ ನವಿತಾರನ್ನು ಮದುವೆಯಾಗಿದ್ದರು. ಆದರೆ ಮದುವೆಯಾದ ಕೇವಲ 22 ದಿನಗಳಲ್ಲಿ 78 ವರ್ಷದ ಅಜ್ಜ ವಿಚ್ಛೇದನ ಪಡೆದಿದ್ದಾರೆ. ವೃದ್ಧ ಅಬಾ ಸರ್ನಾ ಅವರು ವಿಚ್ಛೇದನ ಪತ್ರ(divorce Letter)ಕಳುಹಿಸಿದ್ದರಿಂದ 17 ವರ್ಷದ ನೋನಿ ಮತ್ತು ಆಕೆಯ ಕುಟುಂಬದವರಿಗೆ ತೀವ್ರ ಆಘಾತವಾಗಿದೆ.

ಇವರಿಬ್ಬರ ಸಂಬಂಧದ ಕುರಿತು ಹುಡುಗಿ ಇಲ್ಲವೇ ಆಕೆಯ ಕುಟುಂಬದವರಿಗೆ ಯಾವುದೇ ಸಮಸ್ಯೆ ಇರಲಿಲ್ಲವಂತೆ. ಆದಾಗ್ಯೂ, ಏನೊಂದು ಹೇಳದೆ ಏಕಾಏಕಿ ವೃದ್ದ ವಿಚ್ಛೇಧನ ನೀಡಿದ್ದರಿಂದ ನೋನಿ ಬೇಸರಗೊಂಡಿದ್ದಾರೆ. ಈ ಮದುವೆ ಆಗುವುದಕ್ಕೂ ಮೊದಲೇ ನೋನಿ ಗರ್ಭಿಣಿಯಾಗಿದ್ದರು ಎಂಬುದು ವೃದ್ದ ಅಬಾ ಸರ್ನಾ ಅವರಿಂದ ಆರೋಪ ಕೇಳಿ ಬಂದಿದ್ದು, ಈ ಆರೋಪವನ್ನು ಅಯಾನ್ ನಿರಾಕರಿಸಿದ್ದಾರೆ. ವೃದ್ಧ ಅಬಾ ಅವರು ಆರ್‍ಎಂ 2,819(50 ಸಾವಿರ ರೂ.), ಮೋಟರ್ ಸೈಕಲ್, ಹಾಸಿಗೆಯನ್ನು ನೋನಿಗೆ ನೀಡಿದ್ದರಂತೆ. ವಿಚ್ಛೇದನದ ಬಳಿಕ ವೃದ್ದ ವಧುದಕ್ಷಿಣೆಯನ್ನು ಕೂಡ ಮರಳಿ ಪಡೆದಿದ್ದಾರಂತೆ. ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿ ಸಂಚಲನ ಮೂಡಿಸಿದೆ.
