Home » Chitradurga: ಟಿವಿ ರಿಮೋಟ್ ಗಾಗಿ ಕಿತ್ತಾಡಿದ ಮಕ್ಕಳು, ಜಗಳ ಬಿಡಿಸಲು ಕತ್ತರಿ ಎಸೆದ ತಂದೆ – ನಡೆದೇ ಹೋಯ್ತು ಘೋರ ದುರಂತ!!

Chitradurga: ಟಿವಿ ರಿಮೋಟ್ ಗಾಗಿ ಕಿತ್ತಾಡಿದ ಮಕ್ಕಳು, ಜಗಳ ಬಿಡಿಸಲು ಕತ್ತರಿ ಎಸೆದ ತಂದೆ – ನಡೆದೇ ಹೋಯ್ತು ಘೋರ ದುರಂತ!!

1 comment
Chitradurga

Chitradurga: ಮನೆಯಲ್ಲಿ ಮಕ್ಕಳಿದ್ದರೆ ಗ ಹೆಲಾಟೆ, ಕಿತ್ತಾಟಗಳು ಸಾಮಾನ್ಯ. ಈ ವೇಳೆ ಹೆತ್ತವರು ಮಕ್ಕಳಿಗೆ ತಿಳಿ ಹೇಳಿ, ಬುದ್ಧಿ ಹೇಳಿ ಗಲಾಟೆಗಳನ್ನು ಬಿಡಿಸಿ ಅವರನ್ನು ಸಮಾಧಾನಪಡಿಸಬೇಕು. ಅಂತೆಯೇ ಇಲ್ಲೊಂದು ಮನೆಯಲ್ಲಿ ಮಕ್ಕಳಿಬ್ಬರು ಟಿ.ವಿ ರಿಮೋಟ್ ಗಾಗಿ ಕಿತ್ತಾಟ ಶುರುಮಾಡಿದ್ದಾರೆ. ಆಗ ಇದನ್ನು ಬಿಡಿಸಲು ತಂದೆ ಮಾಡಿದ ಆ ಅವಾಂತರ ಮಗನನ್ನೇ ಬಲಿಪಡೆದಿದೆ.

ಹೌದು, ಚಿತ್ರದುರ್ಗ(Chitradurga) ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದ ಮನೆಯೊಂದರಲ್ಲಿ ಟಿವಿ ರಿಮೋಟ್ ಗಾಗಿ ಅಣ್ಣ-ತಮ್ಮಂದಿರಾದ ಚಂದ್ರಶೇಖರ್ (16) ಮತ್ತು ಪವನ್ (14)ನಡುವೆ ಗಲಾಟೆ ನಡೆದಿದೆ. ಸ್ವಲ್ಪ ದೂರದಲ್ಲಿದ್ದ ತಂದೆ ಸಿಟ್ಟಿಗೆದ್ದು ತನ್ನ ಹಿರಿಮಗನ ಮೇಲೆ ಕತ್ತರಿ‌ ಎಸೆದಿದ್ದಾರೆ. ಆದರೆ, ತಂದೆ ಎಸೆದ ಕತ್ತರಿಯು ಬಾಲಕನ ಕುತ್ತಿಗೆಗೆ ಸಿಲುಕಿ ಏಟು ಬಿದ್ದು ರಕ್ತಸ್ರಾವದಿಂದ ಸಾವು ಸಂಭವಿಸಿದ ಅಘಾತಕಾರಿ ಘಟನೆಯೊಂದು ನಡೆದಿದೆ.

ಉಗುರಲ್ಲಿ ಹೋಗುವುದಕ್ಕೆ ಕೊಡಲಿಯನ್ನೇ ತಂದಂತಾಗಿದೆ ಈ ತಂದೆಯ ಪರಿಸ್ಥಿತಿ. ಒಟ್ಟಿನಲ್ಲಿ ತಂದೆಯಿಂದಲೇ ಮಗನ‌ ಹತ್ಯೆಯಾದಂತಾಗಿದೆ. ಅಂದಹಾಗೆ ಚಂದ್ರಶೇಖರ್ (16) ಮೃತ ದುರ್ದೈವಿ ಬಾಲಕನಾಗಿದ್ದಾನೆ. ಸದ್ಯ ಇದೀಗ ತಂದೆ ಲಕ್ಷ್ಮಣಬಾಬು ವಿರುದ್ಧ ಪುತ್ರನ ಹತ್ಯೆ ಆರೋಪ ವ್ಯಕ್ತವಾಗಿದೆ. ಮೊಳಕಾಲ್ಮೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ: KSRTC: ಈ ಬಸ್ಸುಗಳಲ್ಲಿ ಮಹಿಳೆಯರು ಕೂಡ ಇಷ್ಟು ಹಣ ನೀಡಿ ಪ್ರಯಾಣಿಸಬೇಕು !!

You may also like

Leave a Comment