Home » Congress Vs BJP: ರಾಜ್ಯದಲ್ಲಿ ಕಾಂಗ್ರೆಸ್’ನಿಂದ ಹೊಸ ‘SBI’ ಬ್ಯಾಂಕ್ ಸ್ಥಾಪನೆ ?! ಡಿಕೆಶಿಗೆ ಕೌಂಟ್ರು ಕೊಟ್ಟು BJP ಹೇಳಿದ್ದೇನು ?!

Congress Vs BJP: ರಾಜ್ಯದಲ್ಲಿ ಕಾಂಗ್ರೆಸ್’ನಿಂದ ಹೊಸ ‘SBI’ ಬ್ಯಾಂಕ್ ಸ್ಥಾಪನೆ ?! ಡಿಕೆಶಿಗೆ ಕೌಂಟ್ರು ಕೊಟ್ಟು BJP ಹೇಳಿದ್ದೇನು ?!

1 comment
Congress Vs BJP

Congress vs BJP: ಕಾಂಗ್ರೆಸ್ ಪಕ್ಷದ ವಿರುದ್ಧ ಶಿಕಾರಿಪುರದ ಶಾಸಕ ಬಿ.ವೈ ವಿಜಯೇಂದ್ರ (BY Vijayendra) ಹರಿಯಾಯ್ದಿದ್ದು, ಡಿ .ಕೆ ಶಿವಕುಮಾರ್ ಮೂಲಕ ಬಿಬಿಎಂಪಿ ಸೇರಿದಂತೆ ಬೇರೆ ಬೇರೆ ಇಲಾಖೆಯಲ್ಲಿ ಹಣ ಶೇಖರಣೆ ಮಾಡಿ ಬೇರೆ ಬೇರೆ ರಾಜ್ಯಗಳಿಗೆ ಹಣ ಸಾಗಿಸುತ್ತಿರುವ ಅನುಮಾನವಿದೆ. ಪಂಚ ರಾಜ್ಯಗಳ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಕರ್ನಾಟಕವನ್ನು ATM ರೀತಿ ಬಳಕೆ ಮಾಡಿಕೊಳ್ಳುತ್ತಿದೆ. ದೇಶದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India- RBI) ಇರುವಂತೆ, ರಾಜ್ಯದಲ್ಲಿ ಕಾಂಗ್ರೆಸ್ನವರು SBI ಬ್ರಾಂಚ್ ಓಪನ್ ಮಾಡಿಕೊಂಡು ಬಿಟ್ಟಿದ್ದಾರೆ.

ಶಿಕಾರಿಪುರದ ಶಾಸಕ ಬಿ.ವೈ ವಿಜಯೇಂದ್ರ (BY Vijayendra) ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿ ಕಾರಿದ್ದು, SBI ಎಂದರೆ ಶಿವಕುಮಾರ್ ಬ್ಯಾಂಕ್ ಆಫ್ ಇಂಡಿಯಾ (Shivakumar Bank of India) ಎಂದು ಲೇವಡಿ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಸಚಿವರು ಕಂಟ್ರಾಕ್ಟರ್ ಗಳ ಮೂಲಕ ಹಣ ಸಂಗ್ರಹ ಮಾಡಿ ಬೇರೆ ಕಡೆ ರವಾನಿಸುತ್ತಿದ್ದಾರೆ ಎಂದು ಬಿವೈ ವಿಜಯೇಂದ್ರ ಗಂಭೀರ ಆರೋಪ ಮಾಡಿದ್ದಾರೆ.

ಡಿ.ಕೆ ಶಿವಕುಮಾರ್ (DK Shivakumar), ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಏನೇ ಹೇಳಿದರೂ ಕೂಡ ರಾಜ್ಯದಲ್ಲಿ ಕೊಳ್ಳೆ ಹೊಡೆದು ಲೂಟಿ ಮಾಡಿಯೇ ಸರ್ಕಾರ ಅಧಿಪತ್ಯ ಸಾಧಿಸಿರಿವುದಂತು ಸುಳ್ಳಲ್ಲ. ರಾಜ್ಯದಲ್ಲಿ ಉತ್ತಮ ಆಡಳಿತ ನೀಡುವ ಭರವಸೆ ನೀಡಿ, ಪಾರದರ್ಶಕ ಆಡಳಿತ ನೀಡುವ ವಿಶ್ವಾಸ ಮೂಡಿಸಿದ್ದ . ಕಾಂಗ್ರೆಸ್ ಸರ್ಕಾರ ದಿನನಿತ್ಯ ಹಗಲು ದರೋಡೆಯಲ್ಲಿಯೇ ಮುಳುಗಿದೆ. ಕಾಂಗ್ರೆಸ್ ಇದೆ ರೀತಿ ಲೂಟಿ ಮಾಡುವ ಮುಖಾಂತರ ಬೇರೆ ರಾಜ್ಯಗಳಲ್ಲಿ ಚುನಾವಣೆಯಲ್ಲಿ ಗೆಲುವು ಸಾಧಿಸುವ ಯೋಜನೆ ಹಾಕಿಕೊಂಡಿದೆ ಎಂದು ಬೆಂಗಳೂರಿನಲ್ಲಿ ವಿಜಯೇಂದ್ರ ಹೇಳಿದ್ದಾರೆ.

 

ಇದನ್ನು ಓದಿ: ವಾಹನ ಸವಾರರೇ ನಿಮಗೊಂದು ಬಿಗ್ ಅಪ್ಡೇಟ್! ಇಂಧನ ಬೆಲೆ ಮಾಹಿತಿ ತಿಳಿಯೋ ರೀತಿ ಇಲ್ಲಿದೆ!!!

You may also like

Leave a Comment