Kumble: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ತನ್ನ ಮೂವರು ಮಕ್ಕಳಲ್ಲಿ, ಒಂದು ಮಗುವನ್ನು ಮರೆತು ಬಸ್‌ನಲ್ಲಿ ಬಿಟ್ಟು ಹೋದ ಘಟನೆಯೊಂದು ನಡೆದಿದ್ದು, ಸಹಪ್ರಯಾಣಿಕರೊಬ್ಬರ ಸಮಯ ಪ್ರಜ್ಞೆಯಿಂದ ಮಗು ಹೆತ್ತವರ ಮಡಿಲು ಸೇರಿದೆ.
ಈ ಘಟನೆ ರವಿವಾರ ರಾತ್ರಿ ನಡೆದಿದೆ. ಉಪ್ಪಳದಿಂದ ಬಂದ್ಯೋಡ್ ಎಂಬಲ್ಲಿಗೆ ಟಿಕೆಟ್ ಪಡೆದ ದಂಪತಿಗಳು ತಮ್ಮ ಮೂವರು ಮಕ್ಕಳೊಂದಿಗೆ ಬಸ್ಸೇರಿದ್ದಾರೆ. ಆದರೆ ಇಳಿಯುವ ಸ್ಥಳ ಬಂದಾಗ, ಪತಿ ಒಂದು ಮಗುವಿನೊಂದಿಗೆ ಬಾಗಿಲಲ್ಲಿ ಇಳಿದರೆ, ತಾಯಿ ಇನ್ನೊಂದು ಮಗುವಿನೊಂದಿಗೆ ಮತ್ತೊಂದು ಬಾಗಿಲಿನಲ್ಲಿ ಇಳಿದಿದ್ದಾರೆ. ಪಾಪ, ಬಸ್ಸಿನೊಳಗೆ ಇನ್ನೊಂದು ಸೀಟಿನಲ್ಲಿದ್ದ ಮಗು ಅಲ್ಲೇ ಬಾಕಿಯಾಗಿದೆ. ಆ ಸೀಟಿನಲ್ಲಿ ವ್ಯಕ್ತಿಯೊಬ್ಬ ಕುಳಿತಿದ್ದು, ಬಸ್ ನಲ್ಲಿ ಮಗು ಮಾತ್ರ ಉಳಿದಿರುವುದು ಅರಿತು, ನಂತರ ಬಸ್ಸನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಈ ವಿಷಯ ಅನಂತರ ವೈರಲ್ ಆಗಿದ್ದು, ನಂತರ ಹೆತ್ತವರು ಠಾಣೆಗೆ ಬಂದಿದ್ದಾರೆ. ನಂತರ ಅವರಿಗೆ ಮಗುವನ್ನು ನೀಡಲಾಯಿತು.
ಇದನ್ನು ಓದಿ: Indian Railways: ರೈಲ್ವೇ ಪ್ರಯಾಣಿಕರಿಗೆ ಭರ್ಜರಿ ಸುದ್ದಿ- ಈ ಭಾಗದ ಪ್ರಯಾಣಿಕರಿಗಂತೂ ಬಂಪರ್ ಲಾಟ್ರಿ
