NIA: ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣದ ಕುರಿತು ಮತ್ತೊಂದು ಮಹತ್ವದ ಮಾಹಿತಿಯನ್ನು ಎನ್‌ಐಎ(NIA) ಅಧಿಕಾರಿಗಳು ಹೊರಹಾಕಿದ್ದಾರೆ. ಶಂಕಿತ ಉಗ್ರರು ಟಾರ್ಗೆಟ್ ಮಾಡಿದ್ದು ಕದ್ರಿ ದೇವಸ್ಥಾನ ಮಾತ್ರವಲ್ಲ, ಉಡುಪಿ ಕೃಷ್ಣ ಮಠವನ್ನು ಕೂಡಾ ಟಾರ್ಗೆಟ್ ಮಾಡಿದ್ದಾರೆ ಎಂದು ವರದಿಯಾಗಿದೆ.
ಶಂಕಿತ ಉಗ್ರ ಅರಾಫತ್ ಆಲಿ ಈ ಸ್ಫೋಟಕ ಮಾಹಿತಿಯನ್ನು ಹೇಳಿದ್ದಾನೆ ಎಂದು ವರದಿಯಾಗಿದೆ. ಎನ್‌ಐಎ ಅಧಿಕಾರಿಗಳು ಈತನ ಕುರಿತು ತನಿಖೆ ನಡೆಸುತ್ತಿದ್ದು, ಈತ ಈ ಸ್ಫೋಟಕ ಮಾಹಿತಿ ಹೇಳಿದ್ದಾನೆ.
ಮೂರು ಸ್ಥಳಗಳಲ್ಲಿ ಬಾಂಬ್ ಬ್ಲಾಸ್ಟ್ ಮಾಡಲು ಪ್ಲ್ಯಾನ್ ಮಾಡಿದ್ದರು ಎನ್ನಲಾಗಿದೆ. ಇದರಲ್ಲಿ ಉಡುಪಿಯ ಕೃಷ್ಣ ಮಠ, ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಕಚೇರಿ, ಕದ್ರಿ ದೇವಸ್ಥಾನ ಸೇರಿತ್ತು ಎಂದು ತನಿಖಾ ಸಂದರ್ಭದಲ್ಲಿ ಶಂಕಿತ ಉಗ್ರ ಹೇಳಿದ್ದಾನೆ ಎಂದು ವರದಿಯಾಗಿದೆ.
ಇದನ್ನೂ ಓದಿ: KPSC ಯಿಂದ FDA ಹುದ್ದೆಗಳ ಕುರಿತು ಮಹತ್ವದ ಮಾಹಿತಿ!
