Home » Gruhalakshmi Scheme: ಯಜಮಾನಿಯರೇ, 2ನೇ ಕಂತಿನ ‘ಗೃಹಲಕ್ಷ್ಮೀ’ ಹಣ ಈ ದಿನ ಖಾತೆಗೆ ಜಮಾ ಆಗಲಿದೆ

Gruhalakshmi Scheme: ಯಜಮಾನಿಯರೇ, 2ನೇ ಕಂತಿನ ‘ಗೃಹಲಕ್ಷ್ಮೀ’ ಹಣ ಈ ದಿನ ಖಾತೆಗೆ ಜಮಾ ಆಗಲಿದೆ

2 comments
Gruhalakshmi Scheme

Gruhalakshmi Scheme: ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಅಡಿಯಲ್ಲಿ ಪ್ರತಿ ಕುಟುಂಬದ ಒಬ್ಬ ಮಹಿಳೆಗೆ ತಿಂಗಳಿಗೆ 2,000 ರೂಪಾಯಿಯನ್ನು ಈಗಾಗಲೇ ಮನೆ ಯಜಮಾನಿಯರು ಪಡೆದುಕೊಂಡಿದ್ದಾರೆ.

ಈಗಾಗಲೇ 1.8 ಕೋಟಿ ಅರ್ಹ ಫಲಾನುಭವಿಗಳಿಗೆ 2169 ಕೋಟಿ ರೂ. ಅನುದಾನವನ್ನು ಸರಕಾರ ಬಿಡುಗಡೆಗೊಳಿಸಿತ್ತು. ಸೆಪ್ಟಂಬರ್ ತಿಂಗಳಲ್ಲಿ 1.14 ಲಕ್ಷ ಫಲಾನುಭವಿಗಳಿಗೆ 2280 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಲಾಗಿದೆ. ಸದ್ಯ ಸೆಪ್ಟೆಂಬರ್ ಕಂತು ಸೇರಿ ಈ ತಿಂಗಳು 4 ಸಾವಿರ ಹಣ ಒಟ್ಟಿಗೆ ಜಮಾ ಆಗಲಿದ್ದು, ಇದಕ್ಕಾಗಿ ಈಗಾಗಲೇ ಎಲ್ಲಾ ರೀತಿಯ ಸಿದ್ದತೆಯನ್ನು ಸರ್ಕಾರದ ಆರ್ಥಿಕ ಇಲಾಖೆ ಮಾಡಿಕೊಂಡಿದೆ.

ಈ ಗೃಹಲಕ್ಷ್ಮಿ ಮಾಸಿಕ ರೂ.2,000 ಸಹಾಯಧನಕ್ಕಾಗಿ ಈವರೆಗೆ 1.16 ಕೋಟಿ ಮಹಿಳೆಯರಿಂದ ಅರ್ಜಿ ಸಲ್ಲಿಕೆ ಆಗಿದ್ದು , 1.08 ಕೋಟಿ ಮಹಿಳೆಯರಿಗೆ ಹಣ ಜಮೆಯಾಗಿದ್ದು, ಆಗಸ್ಟ್‌ ಮತ್ತು ಸೆಪ್ಟೆಂಬರ್ ತಿಂಗಳ ಸಹಾಯಧನದ ಪಾವತಿಗಾಗಿ ಒಟ್ಟು ರೂ.4,449 ಕೋಟಿ ಹಣ ಬಿಡುಗಡೆಗೆ ಗ್ರೀನ್‌ ಸಿಗ್ನಲ್‌ ಸಿಕ್ಕಿದೆ. ಇನ್ನು ಕೆಲವೇ ದಿನದಲ್ಲಿ ಮಹಿಳೆಯರ ಖಾತೆಗೆ ಹಣ ಸೇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Teacher Jobs: ಪ್ರಾಥಮಿಕ ಶಾಲಾ ಶಿಕ್ಷಕ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ!

You may also like

Leave a Comment