Home » BIGG NEWS: ಸರ್ಕಾರದ ಈ ಉದ್ಯೋಗಿಗಳಿಗೆ ಬೊಂಬಾಟ್ ನ್ಯೂಸ್- ದಸರಾ ಪ್ರಯುಕ್ತ ಬೋನಸ್ ಆಗಿ ಸಿಗ್ತಿದೆ 78 ದಿನಗಳ ವೇತನ !

BIGG NEWS: ಸರ್ಕಾರದ ಈ ಉದ್ಯೋಗಿಗಳಿಗೆ ಬೊಂಬಾಟ್ ನ್ಯೂಸ್- ದಸರಾ ಪ್ರಯುಕ್ತ ಬೋನಸ್ ಆಗಿ ಸಿಗ್ತಿದೆ 78 ದಿನಗಳ ವೇತನ !

1 comment
Railway employees

 

Railway employees: ಸರ್ಕಾರದ (government) ಈ ಉದ್ಯೋಗಿಗಳಿಗೆ ಬೊಂಬಾಟ್ ನ್ಯೂಸ್ ಇಲ್ಲಿದೆ (BIGG NEWS). ದಸರಾ ಪ್ರಯುಕ್ತ ಬೋನಸ್ ಆಗಿ ಸಿಗ್ತಿದೆ 78 ದಿನಗಳ ವೇತನ. ಹೌದು, ಸರ್ಕಾರವು 11 ಲಕ್ಷಕ್ಕೂ ಹೆಚ್ಚು ರೈಲ್ವೆ ಉದ್ಯೋಗಿಗಳಿಗೆ 1,968 ಕೋಟಿ ರೂಪಾಯಿಗಳ ಉತ್ಪಾದಕತೆ ಲಿಂಕ್ಸ್ ಬೋನಸ್ ನೀಡಲು ಅನುಮೋದಿಸಿದೆ.

ಎಲ್ಲಾ ಅರ್ಹ ಗೆಜೆಟೆಡ್ ಅಲ್ಲದ ರೈಲ್ವೇ ಉದ್ಯೋಗಿಗಳಿಗೆ 2022-23 ಹಣಕಾಸು ವರ್ಷಕ್ಕೆ 78 ದಿನಗಳ ವೇತನಕ್ಕೆ ಸಮಾನವಾದ ಬೋನಸ್ ಅನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. ಈ ಮೂಲಕ ಸರ್ಕಾರ ರೈಲ್ವೆ ಉದ್ಯೋಗಿಗಳಿಗೆ (Railway employees) ಸಿಹಿಸುದ್ದಿ ನೀಡಿದೆ.

ಸ್ಟೇಷನ್ ಮಾಸ್ಟರ್‌ಗಳು, ಮೇಲ್ವಿಚಾರಕರು, ತಂತ್ರಜ್ಞರು, ತಂತ್ರಜ್ಞ ಸಹಾಯಕರು, ಟ್ರ್ಯಾಕ್ ನಿರ್ವಾಹಕರು, ಲೋಕೋ ಪೈಲಟ್‌ಗಳು ಹಾಗೂ ರೈಲು ನಿರ್ವಾಹಕರು (ಗಾರ್ಡ್‌ಗಳು) ಸೇರಿದಂತೆ ರೈಲ್ವೇ ಸಿಬ್ಬಂದಿಗೆ ಬೋನಸ್ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Karnataka government: ಆಯುಧ ಪೂಜೆಯಲ್ಲಿ ಕುಂಕುಮ ಅರಿಷಿಣ ಬಳಸುವಂತಿಲ್ಲ- ಮಹತ್ವದ ಆದೇಶ ಹೊರಡಿಸಿದ ರಾಜ್ಯ ಸರ್ಕಾರ

You may also like

Leave a Comment