Sandwich:ಆಹಾರ ಪ್ರಿಯರೇ ಗಮನಿಸಿ, ನೀವೇನಾದರೂ ಸ್ಯಾಂಡ್ ವಿಚ್ (Sandwich)ಹೆಚ್ಚು ಸೇವನೆ ಮಾಡುತ್ತೀರಾ?? ಹಾಗಿದ್ರೆ ಮೊದಲು, ಈ ವಿಚಾರ ತಿಳಿದುಕೊಳ್ಳಿ!! ಸ್ಯಾಂಡ್ ವಿಚ್ ತಂದಿಡಬಹುದು ನಿಮ್ಮ ಜೀವಕ್ಕೆ ಕುತ್ತು!! ಬಾಲಕಿಯೊಬ್ಬಳು(Girl)ಸ್ಯಾಂಡ್ ವಿಚ್ (Sandwich)ತಿಂದು ನೆನಪಿನ ಶಕ್ತಿಯನ್ನೇ (Memoruy Loss)ಕಳೆದುಕೊಂಡು ಬಿಟ್ಟಿದ್ದಾಳೆ!! ಈ ಕಹಾನಿ ಕೇಳುವಾಗ ಅಚ್ಚರಿ ಎನಿಸದೆ ಇರದು!!
ಆಸ್ಟ್ರೇಲಿಯಾದಲ್ಲಿ ನ್ಯೂಯಾರ್ಕ್ ಪೋಸ್ಟ್ ವರದಿಯ ಅನುಸಾರ, ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ಮೂಲದ 9ರ ಹರೆಯದ ಬಾಲಕಿ ಬೆಳಗಿನ ಉಪಾಹಾರಕ್ಕಾಗಿ ಸ್ಯಾಂಡ್ ವಿಚ್ ಸೇವಿಸಿದ್ದಾಳೆ. ಈಕೆ ಸ್ಟ್ಯಾಂಡ್ ವಿಚ್ ಅನ್ನು ಸ್ಥಳೀಯ ಮಾರಾಟಗಾರರಿಂದ ಖರೀದಿ ಮಾಡಿದ್ದು, ನೂಕ್ಯಾಸಲ್ ನಲ್ಲಿ ಬೇಕನ್ ಹಾಗೂ ಏಡ್ ರೋಲ್ ಸೇವಿಸಿದ್ದಾಳೆ. ಅವಳು ಈ ಮತ್ತು ಅದನ್ನು ತಿನ್ನುತ್ತಿದ್ದಳು. ಈ ನಡುವೆ, ಆಕೆ ಸ್ಯಾಂಡ್ ವಿಚ್ ಸೇವಿಸುವಾಗ ಗಂಟಲಿನಲ್ಲಿ ಏನೋ ಸಿಲುಕಿಕೊಂಡ ಅನುಭವವಾಗಿದೆ. ಇದನ್ನು ಆಕೆಯ ತಾಯಿ ಗಮನಿಸಿ ಮಗಳು ವೇಗವಾಗಿ ಆಹಾರ ಸೇವಿಸಿದ ಪರಿಣಾಮ ಗಂಟಲಲ್ಲಿ ಏನೋ ಸಿಲುಕಿದೆ ಎಂದು ಭಾವಿಸಿ ನೀರು ಕುಡಿಸಿದ್ದಾಳೆ. ಇದಾದ ಬಳಿಕ ಬಾಲಕಿಯ ಆರೋಗ್ಯವು ಇದಕ್ಕಿದ್ದಂತೆ ಹದಗೆಡಲು ಶುರುವಾಗಿದ್ದು, ಹೀಗಾಗಿ, ಪೋಷಕರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು.
ವೈದ್ಯರು (Doctors)ಸಿಟಿ ಸ್ಕ್ಯಾನ್ (Scan)ನಡೆಸಿದ ಬಳಿಕ ಬಾಲಕಿಯ ಕುತ್ತಿಗೆಯ ಬಳಿ ತೆಳುವಾದ ತಂತಿ ಸಿಲುಕಿಕೊಂಡಿರುವುದು ಬೆಳಕಿಗೆ ಬಂದಿದೆ.ಇದು ವಾಸ್ತವವಾಗಿ ಬಿಬಿಕ್ಸ್ನಲ್ಲಿ ಬಳಸಲಾಗುವ ಬಷ್ ನ ಮುಳ್ಳು ಎನ್ನಲಾಗಿದ್ದು, ಇದು ಅವಳ ಸ್ಯಾಂಡ್ ವಿಚ್ ಗೆ ಸೇರಿಕೊಂಡಿದೆ. ಈ ತಂತಿಯು ಕರೋಟಿಡ್ ಅಪಧಮನಿಯಲ್ಲಿ ಸಿಲುಕಿಕೊಂಡ ಪರಿಣಾಮ ಬಾಲಕಿಯ ಮೆದುಳಿಗೆ ರಕ್ತ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿ ಸೋಂಕು ಕಾಣಿಸಿಕೊಂಡಿದೆ. ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ತಂತಿಯನ್ನು ಹೊರ ತೆಗೆದು ಅಗತ್ಯ ಚಿಕಿತ್ಸೆ ನೀಡಿದ್ದು, ಆದರೂ ಬಾಲಕಿ ನೆನಪಿನ ಶಕ್ತಿಯನ್ನೇ ಕಳೆದುಕೊಂಡಿದ್ದಾಳೆ. ಸುಮಾರು ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಆದರೆ ನೆನಪಿನ ಶಕ್ತಿ ಮಾತ್ರ ಮರಳಿ ಬಂದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.
