Coimbatore: ಇಬ್ಬರು ಅಣ್ಣ-ತಮ್ಮ ಸೇರಿ ಐವರು ಕಾಲೇಜು ವಿದ್ಯಾರ್ಥಿಗಳು ನದಿಯಲ್ಲಿ ಈಜಲು ತೆರಳಿದ್ದು, ಐವರೂ ಮುಳುಗಿ ಮೃತಪಟ್ಟಿರುವ ಘಟನೆಯೊಂದು ನಡೆದಿದೆ.
ಪೊಲೀಸರ ಪ್ರಕಾರ, ಕೊಯಮತ್ತೂರಿನ(Coimbatore) ಕಿನತುಕಡವು ಪ್ರದೇಶದ 10 ಕಾಲೇಜು ವಿದ್ಯಾರ್ಥಿಗಳು ದ್ವಿಚಕ್ರ ವಾಹನದಲ್ಲಿ ವಾಲ್ಪಾರೈ ಬಳಿಕ ಕೂಲಂಗಲ್ ನದಿಯ ಬಳಿ ಬಂದಿದ್ದು ನಂತರ ನದಿಗೆ ಇಳಿದಿದ್ದು, ಐವರು ಮುಳುಗಿ ಮೃತಪಟ್ಟಿದ್ದಾರೆ.
ನದಿಯಲ್ಲಿ ಆಳ ಇದ್ದು ಐವರು ವಿದ್ಯಾರ್ಥಿಗಳು ದಾರುಣವಾಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶರತ್ (20) ನದಿಯ ಆಳವಾದ ಭಾಗಕ್ಕೆ ಹೋಗಿ ಸುರುಳಿಯಲ್ಲಿ ಸಿಲುಕಿದ್ದಾನೆ. ನಂತರ ನಬಿಲ್ ಅರ್ಸಾದ್ (20), ಧನುಷ್ ಕುಮಾರ್ (20), ಹಾಗೂ ಇವರನ್ನು ರಕ್ಷಿಸಲು ಹೋದ ಅಜಯ್ (20) ಮತ್ತು ವಿನಿತ್ ಕುಮಾರ್ (23) ಸಹ ನೀರಿನಲ್ಲಿ ಮುಳುಗಿ ದಾರುಣ ಮೃತಹೊಂದಿದ್ದಾರೆ.
ಮಾಹಿತಿ ಪಡೆದ ವಾಲ್ಪಾರೈ ಅಗ್ನಿಶಾಮಕ ಠಾಣೆ ಅಧಿಕಾರಿ, ಹಾಗೂ ಏಳು ಸದಸ್ಯರ ತಂಡ ಸ್ಥಳಕ್ಕೆ ತೆರಳಿ ಐದು ಜನರ ಶವವನ್ನು ವಶಪಡಿಸಿಕೊಂಡಿದ್ದಾರೆ. ವಾಲ್ಪಾರೈ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:Liquor Sale: ಮದ್ಯಪ್ರಿಯರಿಗೆ ಶಾಕಿಂಗ್ ನ್ಯೂಸ್, ಅ.24 ರಂದು ಇಲ್ಲಿ ಮದ್ಯಮಾರಾಟ ನಿಷೇಧ!!!
