Madhu Bangarappa: ಶಿಕ್ಷಣ ಸಚಿವ (Minister of Primary & Secondary Education and Sakala of Karnataka)ಮಧು ಬಂಗಾರಪ್ಪ(Madhu Bangarappa). ರವರು ರಾಜ್ಯದ ಎಲ್ಲ ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಉಚಿತವಾಗಿ ಶಾಲಾ ಬಸ್‌ಗಳ ವ್ಯವಸ್ಥೆ ಕಲ್ಪಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಈಗಾಗಲೇ ಆರಂಭಿಸಲಾಗಿರುವ ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ (KPS) ರಾಜ್ಯಾದ್ಯಂತ ಶಿಕ್ಷಣ ಇಲಾಖೆಯಿಂದ ಖಾಸಗಿ ಶಾಲೆಗಳ ಮಾದರಿಯಂತೆ ಸ್ಕೂಲ್ ಬಸ್ ವ್ಯವಸ್ಥೆ ಮಾಡಲಾಗುತ್ತದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪರವರು ತಿಳಿಸಿದ್ದಾರೆ. ಈಗಾಗಲೇ ಆರಂಭಿಸಿರುವ ಕೆಪಿಎಸ್ ಶಾಲೆಗೆ ಉಚಿತ ಬಸ್ ಸೇವೆಯನ್ನು ಆರಂಭಿಸಲಿದ್ದು,ಮುಂದಿನ 3 ವರ್ಷದಲ್ಲಿ 3000 ಕರ್ನಾಟಕ ಪಬ್ಲಿಕ್ ಶಾಲೆ ಪ್ರಾರಂಭ ಮಾಡಲಾಗುತ್ತದೆ. ಈ ಮೂಲಕ ಪಬ್ಲಿಕ್ ಶಾಲೆಯ ಸುತ್ತಲಿನ ವಿದ್ಯಾರ್ಥಿಗಳು ಶಾಲೆಗೆ ಬರಲು ಹೆಚ್ಚು ನೆರವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Popular Fitness Influencer: ಖ್ಯಾತ ಬಾಡಿ ಬಿಲ್ಡರ್, ನೋಟದಲ್ಲೇ ಮರುಳು ಮಾಡೋ ಫಿಟ್‌ನೆಸ್ ಮಹಿಳೆಯ ನಿಗೂಢ ನಿಧನ !!
