Home » Job Fair: ನ.19 ರಂದು ಅನ್ನದಾತರ ಮಕ್ಕಳಿಗೆ ಉದ್ಯೋಗ ಮೇಳ! ಹೆಚ್ಚಿನ ಮಾಹಿತಿ ಇಲ್ಲಿದೆ!

Job Fair: ನ.19 ರಂದು ಅನ್ನದಾತರ ಮಕ್ಕಳಿಗೆ ಉದ್ಯೋಗ ಮೇಳ! ಹೆಚ್ಚಿನ ಮಾಹಿತಿ ಇಲ್ಲಿದೆ!

by Mallika
2 comments
Job Fair

Job Fair: ರೈತ ಕುಟುಂಬದ ನಿರುದ್ಯೋಗ ಯುವಕ, ಯುವತಿಯರಿಗೆ ಗುಡ್‌ನ್ಯೂಸ್‌. ನಿಮಗೆ ಉದ್ಯೋಗಾವಕಾಶವೊಂದನ್ನು ಕಲ್ಪಿಸಲಾಗಿದೆ. ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶೀರ್ವಾದದಿಂದ ಈ ಉದ್ಯೋಗ ಮೇಳ ಆಯೋಜನೆ ಮಾಡಲಾಗಿದೆ.

ಎಸ್‌ಎಸ್‌ಎಲ್‌ಸಿ, ಪಿಯುಸಿ, ಯಾವುದೇ ಪದವಿ (ಪಾಸ್‌/ಫೇಲ್‌), ಐಟಿಐ, ಡಿಪ್ಲೊಮಾ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್‌, ಎನ್‌ಟಿಟಿ, ಟಿಸಿಎಚ್‌, ಬಿ.ಇಡಿ, ಎಂ.ಇಡಿ ಶಿಕ್ಷಣ ಪಡೆದ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಮೇಳದಲ್ಲಿ ಭಾಗವಹಿಸಬಹುದು.

ಮೈಸೂರಿನಲ್ಲಿ ನವೆಂಬರ್‌ 19ರಂದು ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ʼಅನ್ನದಾತರ ಮಕ್ಕಳಿಗೆ ಉದ್ಯೋಗ ಮೇಳʼ (Job Fair)ವೊಂದು ನಡೆಯಲಿದೆ. ಒಕ್ಕಲಿಗ ಯುವ ಬ್ರಿಗೇಡ್‌ ಹಾಗೂ ಎನ್‌ಆರ್‌ಐ ಬ್ರಿಗೇಡ್‌ ವತಿಯಿಂದ ನಗರದ ಹೆಬ್ಬಾಳ ಇಂಡಸ್ಟ್ರಿಯಲ್‌ ಎಸ್ಟೇಟ್‌ನ ಇನ್ಫೋಸಿಸ್‌ ಸಂಸ್ಥೆ ಹತ್ತಿರದ ಶ್ರೀ ಲಕ್ಷ್ಮೀಕಾಂತ ದೇವಸ್ಥಾನ ಆವರಣದ ಬಿಜಿಎಸ್‌ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಭಾಭವನದಲ್ಲಿ ಆಯೋಜಿಸಲಾಗಿದೆ.

ಇದು ಸಂಪೂರ್ಣ ಉಚಿತವಾಗಿದ್ದು, ಐದು ಸಂಸ್ಥೆಗಳ ಸಂದರ್ಶನದಲ್ಲಿ ಪ್ರತಿ ಅಭ್ಯರ್ಥಿಯು ಭಾಗವಹಿಸಬಹುದು. ಇಲ್ಲಿ 5000 ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಇದೆ. ಅಭ್ಯರ್ಥಿಗಳು ಕಡ್ಡಾಯವಾಗಿ ತಮ್ಮ ಹೆಸರು ನೋಂದಣಿ ಮಾಡಬೇಕು. ಈ ಉದ್ಯೋಗ ಮೇಳದಲ್ಲಿ ಪ್ರಬೋದಿತ, ಮಹೀಂದ್ರಾ ಫೈನಾನ್ಸ್‌, ರಿಲಯನ್ಸ್‌ ಮಾರ್ಟ್‌, ಮ್ಯಾನ್‌ಪವರ್‌ ಗ್ರೂಪ್‌ ಸೇರಿ ಐವತ್ತಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿದೆ. ಹೌಸ್‌ ಕೀಪಿಂಗ್‌, ಸೇಲ್ಸ್‌ ಬಾಯ್‌, ಆಫೀಸ್‌ ಅಸಿಸ್ಟೆಂಟ್‌, ಚಾಲಕರು, ಡೆಲಿವರಿ ಬಾಯ್‌, ಸೆಕ್ಯೂರಿಟಿ ಸರ್ವೀಸಸ್‌, ಡಿಟಿಪಿ, ಸಾಫ್ಟ್‌ವೇರ್‌, ಹಾರ್ಡ್‌ವೇರ್‌, ಟೀಚಿಂಗ್‌, ಟ್ರೈನಿಂಗ್‌, ಕಲೆಕ್ಷನ್‌, ಕೌಂಟರ್‌ ಸೇಲ್ಸ್‌, ಮಾರ್ಕೆಟಿಂಗ್‌, ಟೆಲಿ ಮಾರ್ಕೆಟಿಂಗ್‌, ಇನ್ಶೂರೆನ್ಸ್‌, ಬ್ಯಾಂಕಿಂಗ್‌, ಆಡಳಿತ, ಬಿಪಿಒ, ಕೆಪಿಒ ಮತ್ತು ಎಂಟಿ ಇತ್ಯಾದಿ ಉದ್ಯೋಗಾವಕಾಶಗಳಿವೆ.

ಹೆಚ್ಚಿನ ಮಾಹಿತಿಗಾಗಿ‌ ಮೋಹನ್: 9686564192, ರವಿಚಂದ್ರ: 9886943810, ಕಿರಣಕುಮಾರ: 8660569173 ಸಂಪರ್ಕಿಸಲು ಕೋರಲಾಗಿದೆ.

 

ಇದನ್ನು ಓದಿ: Health Tips: ಬೊಜ್ಜು ಕರಗಿಸಲು ಬೆಳ್ಳಂಬೆಳಗ್ಗೆಯೇ ನಿಂಬೆ ರಸ ಬೆರೆಸಿ ನೀರು ಕುಡಿಯುತ್ತೀರಾ ?! ಸ್ವಲ್ಪ ಯಾಮಾರಿದ್ರೂ ಈ ಸಮಸ್ಯೆ ತಪ್ಪಿದ್ದಲ್ಲ

You may also like

Leave a Comment