Home » Pub Fight viral video: ಬೆಂಗಳೂರು- ಪಬ್‌ನಲ್ಲಿ ಯುವತಿಯನ್ನು ರೇಗಿಸಿ,ಅರೆನಗ್ನ ಸ್ಥಿತಿಯಲ್ಲಿ ಗಲಾಟೆ !

Pub Fight viral video: ಬೆಂಗಳೂರು- ಪಬ್‌ನಲ್ಲಿ ಯುವತಿಯನ್ನು ರೇಗಿಸಿ,ಅರೆನಗ್ನ ಸ್ಥಿತಿಯಲ್ಲಿ ಗಲಾಟೆ !

5 comments
Pub Fight viral video

Pub Fight viral video: ಬೆಂಗಳೂರಿನ ಚರ್ಚ್‌ ಸ್ಟ್ರೀಟ್‌ನಲ್ಲಿರುವ ಬರ್ಗರ್‌ ಸೈನೆರ್‌ (Burger Seigneur) ಪಬ್ ಒಂದರ ಎದುರು ತಡರಾತ್ರಿ ಯುವಕ-ಯುವತಿಯರ ಮಧ್ಯೆ ಭಾರಿ ಗಲಾಟೆ ನಡೆದಿದ್ದು, ಈ ವಿಡಿಯೊ ಈಗ ವೈರಲ್‌ (Pub Fight viral video ) ಆಗಿದೆ. ಹೌದು, ನಗರದ ಪಬ್‌ ಒಂದರಲ್ಲಿ ಯುವತಿಯರನ್ನು ಮನಸೋ ಇಚ್ಛೆ ಚುಡಾಯಿಸಿದ್ದಕ್ಕೆ ಯುವಕ-ಯುವತಿಯರ ಮಧ್ಯೆ ಜೋರು ಗಲಾಟೆ ನಡೆದಿದೆ. ಕಾಲೇಜು ಯುವಕರು ಹಾಗೂ ಯುವತಿಯರು ರಾತ್ರಿ ಪಬ್‌ನಲ್ಲಿ ಪಾರ್ಟಿ ಮುಗಿಸಿಕೊಂಡು ಹೋಗುವಾಗ ಈ ಗಲಾಟೆ ನಡೆದಿದೆ ಎಂದು ತಿಳಿದುಬಂದಿದೆ.

ಮಾಹಿತಿ ಪ್ರಕಾರ, ಕೆಲವು ಯುವಕರು ಯುವತಿಯರನ್ನು ಚುಡಾಯಿಸಿದ್ದು, ಕೆಟ್ಟ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ಇದಾದ ಬಳಿಕ ಅರೆನಗ್ನವಾಗಿ ಕಾಣುವ ರೀತಿ ಬಟ್ಟೆ ಧರಿಸಿದ್ದ ಯುವತಿಯರು ಯುವಕರಿಗೆ ಬೈದಿದ್ದಾರೆ. ಇದೇ ವೇಳೆ ಯುವತಿಯರ ಗೆಳೆಯರು ಹಾಗೂ ಚುಡಾಯಿಸಿದ ಯುವಕರ ಮಧ್ಯೆ ಮಾತಿಗೆ ಮಾತು ಬೆಳೆದು ತಳ್ಳಾಟ, ನೂಕಾಟ ನಡೆದಿದೆ. ರಸ್ತೆ ಬಳಿಯೇ ಎರಡೂ ಗುಂಪುಗಳು ಹೊಡೆದಾಡಿಕೊಂಡಿದ್ದು,ಇವರು ಕುಡಿದ ಮತ್ತಿನಲ್ಲಿ ರಂಪಾಟ ಮಾಡಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಜೊತೆಗೆ ಯುವತಿಯರು ಕೂಡ ಯುವಕರನ್ನು ತಳ್ಳುವ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿವೆ.

ಯುವಕ ಹಾಗೂ ಯುವತಿಯರ ರಂಪಾಟದ ವಿಡಿಯೊ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ತಡರಾತ್ರಿವರೆಗೆ ಪಾರ್ಟಿ ಮಾಡಿ, ಕುಡಿದ ಮತ್ತಿನಲ್ಲಿ ಹೀಗೆ ಮಾಡುವುದು ಎಷ್ಟು ಸರಿ, ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಾಲತಾಣಗಳಲ್ಲಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ರೈತರೇ ಗಮನಿಸಿ, ಬೆಳೆ ನಷ್ಟ ಪರಿಹಾರ ಬೇಕಂದ್ರೆ ಕೂಡಲೇ ಈ ಕೆಲಸ ಮಾಡಿ

You may also like

Leave a Comment