Home » Wagh Bakri Tea Parag Desai: ಬೀದಿ ನಾಯಿಗಳ ದಾಳಿ, ವಾಘ ಬಕ್ರಿ ಚಹಾ ಕಂಪನಿ ಮಾಲಿಕ ಸಾವು!!!

Wagh Bakri Tea Parag Desai: ಬೀದಿ ನಾಯಿಗಳ ದಾಳಿ, ವಾಘ ಬಕ್ರಿ ಚಹಾ ಕಂಪನಿ ಮಾಲಿಕ ಸಾವು!!!

by Mallika
2 comments
Wagh Bakri Tea Parag Desai

Wagh Bakri Tea Parag Desai Passes away: ಬೀದಿ ನಾಯಿಗಳ ದಾಳಿಗೆ ಒಳಗಾದ ಖ್ಯಾತ ಚಹಾ ಕಂಪನಿ ವಾಘ್‌ ಬಕ್ರಿಯ (Wagh Bakri) ಮಾಲಿಕ ಪರಾಗ್‌ ದೇಸಾಯಿ (49) ಅವರು ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ. ಅ.15ರಂದು ಬೀದಿ ನಾಯಿಗಳಿಂದ ತೀವ್ರ ದಾಳಿಗೊಳಗಾದ ಪರಾಗ್‌ ದೇಸಾಯಿ (Parag Desai) ಅವರು ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ನಿಧನರಾಗಿದ್ದಾರೆ.

ವಾಘ್ ಬಕ್ರಿ ಟೀ ಗ್ರೂಪ್‌ನ ನಿರ್ದೇಶಕ, ಉನ್ನತ ಕಾರ್ಯನಿರ್ವಾಹಕ ಪರಾಗ್ ದೇಸಾಯಿ ಅವರು ಬೀದಿ ನಾಯಿಗಳ ದಾಳಿಗೆ ಒಳಗಾಗಿ ಬಿದ್ದಿರುವುದನ್ನು ಭದ್ರತಾ ಸಿಬ್ಬಂದಿ ಅವರು ಗಮನಿಸಿದ್ದು, ಕೂಡಲೇ ಅವರ ಸದಸ್ಯರ ಗಮನಕ್ಕೆ ತಂದಿದ್ದರು. ಕೂಡಲೇ ಅವರನ್ನು ಶೆಲ್ಬಿ ಆಸ್ಪತ್ರಗೆ ದಾಖಲು ಮಾಡಲಾಗಿತ್ತು. ಒಂದು ದಿನದ ತೀವ್ರ ನಿಗಾದ ನಂತರ ದೇಸಾಯಿ ಅವರನ್ನು ಶಸ್ತ್ರಚಿಕಿತ್ಸೆಗಾಗಿ ಝೈಡಸ್‌ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ ಅವರು ಮಿದುಳು ರಕ್ತಸ್ರಾವಕ್ಕೆ ಒಳಗಾಗಿ ಭಾನುವಾರ ಮೃತಪಟ್ಟಿದ್ದಾರೆ.

ದೇಸಾಯಿ ಅವರು ವಾಘ್ ಬಕ್ರಿ ಟೀ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕರಾದ ರಸೇಶ್ ದೇಸಾಯಿ ಅವರ ಪುತ್ರ. ಅವರು ಪತ್ನಿ ವಿದಿಶಾ ಮತ್ತು ಮಗಳು ಪರಿಶಾ ಅವರನ್ನು ಅಗಲಿದ್ದಾರೆ.

 

ಇದನ್ನು ಓದಿ: ನಿಮ್ಮ ಹೆಬ್ಬೆರಳು ಹೀಗಿದ್ಯಾ? ಹಾಗಿದ್ರೆ ನೀವು ಒಳ್ಳೆಯವರಾ? ಇಲ್ಲಾ ಕೆಟ್ಟವರಾ?

You may also like

Leave a Comment