PM Kisan Samman Nidhi Scheme: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ವಾರ್ಷಿಕ ರೂ.6000 ನೆರವು ನೀಡುತ್ತಿದೆ ಕೇಂದ್ರ ಸರಕಾರ. ಈಗ ಹೊಸ ವಿಷಯ ಏನೆಂದರೆ ಈ ಯೋಜನೆಯಡಿ ಸಹಾಯಧನದ ಮೊತ್ತವನ್ನು ಹೆಚ್ಚಿಸಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan Samman Nidhi)ಯೋಜನೆ 2018ರ ಡಿಸೆಂಬರ್‌ನಲ್ಲಿ ಪ್ರಾರಂಭ ಮಾಡಲಾಗಿದೆ. ಈ ಯೋಜನೆಯಡಿ ರೈತರಿಗೆ ವಾರ್ಷಿಕ ರೂ.6000 ಗಳನ್ನು ನೀಡಲಾಗುತ್ತದೆ. ಇದೀಗ ಈ ಯೋಜನೆಯಡಿ ನೀಡುವ ಮೊತ್ತವನ್ನು ಹೆಚ್ಚಿಸಬೇಕೆಂಬ ಆಗ್ರಹ ಹೆಚ್ಚುತ್ತಿದೆ.
ರೈತರ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ, ಆರ್ಥಿಕ ನೆರವು ಹೆಚ್ಚಿಸಲು ICRIER (ಇಂಡಿಯನ್ ಕೌನ್ಸಿಲ್ ಫಾರ್ ರಿಸರ್ಚ್ ಆನ್ ಇಂಟರ್‌ನ್ಯಾಷನಲ್ ಎಕನಾಮಿಕ್ ರಿಲೇಶನ್ಸ್) ವರದಿ ಮಂಡಿಸಿದೆ. ಹಾಗಾಗಿ PM KISAN ಅಡಿಯಲ್ಲಿ ಮೊತ್ತವನ್ನು ಹೆಚ್ಚಿಸುವಂತೆ ಒತ್ತಾಯ ಮಾಡಲಾಗಿದೆ.
ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ರೈತರಿಗೆ ವಾರ್ಷಿಕ ಕೇವಲ 6,000 ರೂ. ನೀಡಲಾಗುತ್ತಿದೆ ಎಂದು ICRIER ವರದಿಯಲ್ಲಿ ತಿಳಿಸಲಾಗಿದೆ. ಇದರಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಆದರೆ, ವಸ್ತುಗಳ ಹಣದುಬ್ಬರವು ಹಲವು ಬಾರಿ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಈಗಿನ ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು ರೈತರಿಗೆ ಕನಿಷ್ಠ 10,000 ರೂಪಾಯಿ ಆರ್ಥಿಕ ನೆರವು ನೀಡಬೇಕು.
ಭಾರತ ಅತಿ ಹೆಚ್ಚು ಸಣ್ಣ ರೈತರನ್ನು ಹೊಂದಿದ್ದು, ಎರಡು ಹೆಕ್ಟೇರ್‌ಗಿಂತ ಕಡಿಮೆ ಭೂಮಿಯನ್ನು ಹೊಂದಿರುವವರು ಒಂದು ಕಡೆಯಾದರೆ, ದೊಡ್ಡ ರೈತರ ಸಂಖ್ಯೆ ಕಡಿಮೆ ಇದೆ. ರೈತರು ಈ ವ್ಯಾಪಾರಗಳ ನೀತಿಯಿಂದ ಅತೀ ನಷ್ಟ ಅನುಭವಿಸುತ್ತಾರೆ. ಈ ಕಾರಣದಿಂದ ಸಹಾಯದ ಮೊತ್ತವನ್ನು ಹೆಚ್ಚಿಸಬೇಕೆಂದು CNBC-TV18.com ವರದಿ ಮಾಡಿದೆ.
ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯಿಂದ ಸಾವಿರಾರು ಅನರ್ಹ ರೈತರು ಹೊರಗಿದ್ದಾರೆ. ಪಿಎಂ ಕಿಸಾಸ್ ಯೋಜನೆಯಡಿ ಕೇಂದ್ರವು ಹತ್ತುಸಾವಿರ ಕೋಟಿ ರೂ. ಉಳಿತಾಯ ಮಾಡಿದ್ದು, ಹೀಗಾಗಿ ಈ ಯೋಜನೆಯಲ್ಲಿ ಭೂ ರಹಿತ ರೈತರು, ದೊಡ್ಡ ಹಿಡುವಳಿದಾರರನ್ನು ಸೇರಿಸಬೇಕೆಂಬ ಆಗ್ರಹ ಹೆಚ್ಚಿದೆ.
ಇದನ್ನೂ ಓದಿ: Teeth Care: ಹಲ್ಲು ಹಳದಿಗಟ್ಟಿದೆಯೇ? ಬಿಳಿಯಾಗಿಸಿ ಫಳಫಳ ಹೊಳೆಯೋ ತಂತ್ರ ಇಲ್ಲಿದೆ!
