Bengalore: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಈಗ ಮೆಟ್ರೋ ರೈಲುಗಳ ಹಾವಳಿಯೇ ಹೆಚ್ಚು. ಎಲ್ಲಿ ನೋಡಿದರೂ ಕೂಡ ಮೆಟ್ರೋಗಳ ಪರ್ವ ಶುರುವಾದಂತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಕೂಡ ಮೆಟ್ರೋ ಮಾರ್ಗವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈಗಾಗಲೇ ಕಾಮಗಾರಿಗಳು ಶುರುವಾಗಿವೆ. ಹೀಗಾಗಿ ಮೆಟ್ರೋ ಕಾಮಗಾರಿ ಹಿನ್ನೆಲೆಯಲ್ಲಿ ಬೆಂಗಳೂರಿನ(Bengalore) ಪ್ರಮುಖ ರಸ್ತೆಯೊಂದು ಮುಂದಿನ 4 ತಿಂಗಳ ಕಾಲ ಬಂದ್ ಆಗಲಿದೆ.
ಹೌದು, ಮೆಟ್ರೋ ಕಾಮಗಾರಿಯ ಹಿನ್ನೆಲೆಯಲ್ಲಿ ಹೊಸೂರು-ಮಡಿವಾಳ ಸಂಪರ್ಕಿಸುವ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ಮೇಲ್ಸೇತುವೆಯನ್ನು ಶನಿವಾರದಿಂದ ರಸ್ತೆಯನ್ನು ಬಂದ್ ಮಾಡಲಾಗಿದೆ. ಆದರೆ ಇದು ಸ್ವಲ್ಪ ದಿನಗಳ ಮಟ್ಟಿಗೆ ಮಾತ್ರವಲ್ಲ. ಮುಂದಿನ ನಾಲ್ಕು ತಿಂಗಳು ಅಂದರೆ ಫೆಬ್ರವರಿವರೆಗೆ ಮುಚ್ಚಲಾಗುತ್ತಿದೆ!! ಇದರಿಂದ ನಗರದ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕುವುದಲ್ಲದೆ ಸಂಚಾರ ದಟ್ಟಣೆಗೆ ಸಿಲುಕಿ ರೋಸಿಹೋಗಲಿದ್ದಾರೆ.
ಅಂದಹಾಗೆ ಹೊರವರ್ತುಲ ರಸ್ತೆಯ ಸೆಂಟ್ರಲ್ ಸಿಲ್ಕ್ ಬೋರ್ಡ್- ಕೆ.ಆರ್.ಪುರ- ಹೆಬ್ಬಾಳ ನಡುವೆ ಮೆಟ್ರೋ ನಿರ್ಮಾಣ ಕಾರ್ಯ ಚುರುಕಿನಿಂದ ಸಾಗಿದೆ. ಇದಕ್ಕೆ ಪೂರಕವಾದ ಕಾಮಗಾರಿಗಳಿಗಾಗಿ ಶನಿವಾರದಿಂದ ನಾಲ್ಕು ತಿಂಗಳ ಕಾಲ ಸಿಲ್ಕ್ ಬೋರ್ಡ್ ಫೈಓವರ್ ಭಾಗಶಃ ಮುಚ್ಚಲಿದೆ. ಸುಮಾರು 11 ಮೀಟರ್ ಅಗಲ ಇರುವ ಮೇಲ್ಸೇತುವೆ ಎರಡೂ ಬದಿಯಲ್ಲಿನ ತಲಾ 2.5 ಕಿಲೋ ಮೀಟರ್ ಮೆಟ್ರೋ ಕಾಮಗಾರಿಗಾಗಿ ಮುಚ್ಚಲಾಗುತ್ತಿದೆ. ಉಳಿದ 6 ಮೀಟರ್‌ನ ವಾಹನಗಳು ಸಂಚರಿಸಲು ಅವಕಾಶವಿದೆ ಎಂದು ತಿಳಿದುಬಂದಿದೆ. ಬಹಳ ಸಮಯದ ವರೆಗೆ ಈ ರಸ್ತೆಯಲ್ಲಿ ಸಂಚಾರವಿಲ್ಲದ ಕಾರಣ ಪ್ರಯಾಣಿಕರಿಗೆ ಇದರ ಬಿಸಿ ತುಸು ಜೋರಾಗಿಯೇ ತಟ್ಟುವ ಸಾಧ್ಯತೆ ಇದೆ.
ಇದನ್ನೂ ಓದಿ: Mysore: ಅರಮನೆ ಆರವಣದಲ್ಲಿ ಮಾವುತ- ಪೋಲೀಸ್ ನಡುವೆ ಗಲಾಟೆ- ಮಾವುತನ ಜೋರು ಧ್ವನಿ ಕೇಳಿ ಓಡಿ ಬಂದ ‘ಭೀಮ’ ಏನು ಮಾಡ್ತು ಗೊತ್ತಾ?
