Home » DA Hike: ಸರ್ಕಾರದ ಈ ನೌಕರರಿಗೆ ಹೊಡೀತು ಬಂಪರ್ ಲಾಟ್ರಿ- 46% ಗೆ ಏರಿತು ತುಟ್ಟಿಭತ್ಯೆ

DA Hike: ಸರ್ಕಾರದ ಈ ನೌಕರರಿಗೆ ಹೊಡೀತು ಬಂಪರ್ ಲಾಟ್ರಿ- 46% ಗೆ ಏರಿತು ತುಟ್ಟಿಭತ್ಯೆ

1 comment

DA Hike: ದೀಪಾವಳಿ ಪ್ರಯುಕ್ತ ರೈಲ್ವೇ ಮಂಡಳಿಯು ತನ್ನ ಉದ್ಯೋಗಿಗಳಿಗೆ ತುಟ್ಟಿ ಭತ್ಯೆ (DA Hike)ರೂಪದಲ್ಲಿ ಸಿಹಿ ಸುದ್ದಿ ನೀಡಿದೆ. ಹೌದು, ಜುಲೈ 1, 2023 ರಿಂದ ಅನ್ವಯವಾಗುವಂತೆ ರೈಲ್ವೇ ಮಂಡಳಿಯು ತನ್ನ ಉದ್ಯೋಗಿಗಳ ತುಟ್ಟಿಭತ್ಯೆಯನ್ನು ಮೂಲ ವೇತನದ ಶೇ. 42 ರಿಂದ 46ಕ್ಕೆ ಪರಿಷ್ಕರಿಸಿದೆ.

ರೈಲ್ವೇ ಮಂಡಳಿಯು ಅಕ್ಟೋಬರ್ 23, 2023 ರಂದು, ಜನರಲ್ ಮ್ಯಾನೇಜರ್‌ಗಳು, ಅಖಿಲ ಭಾರತ ರೈಲ್ವೇಯ ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಉತ್ಪಾದನಾ ಘಟಕಗಳಿಗೆ ಈ ಸಂಬಂಧ ಲಿಖಿತ ರೂಪದಲ್ಲಿ ಮಾಹಿತಿ ನೀಡಿದೆ. ಈ ಹಿನ್ನೆಲೆ ಉದ್ಯೋಗಿಗಳಿಗೆ ತುಟ್ಟಿಭತ್ಯೆಯನ್ನು ಹೆಚ್ಚಿಸಲು ಸಂತಸವಾಗುತ್ತಿದೆ ಎಂದು ಸಿಇಒ ಜಯವರ್ಮಾ ಸಿನ್ಹಾ ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು ಅಂಗೀಕರಿಸಿದ 7 ನೇ ಸಿಪಿಸಿ ಶಿಫಾರಸಿನ ಪ್ರಕಾರ ಪಾವತಿಸುವ ವೇತನ ಎಂದು ‘ಮೂಲ ವೇತನ’ ಎಂದು ವ್ಯಾಖ್ಯಾನಿಸಿದೆ, ‘ಆದರೆ ವಿಶೇಷ ವೇತನ ಇತ್ಯಾದಿಗಳಂತಹ ಯಾವುದೇ ವೇತನದ ಸಮಯವನ್ನು ಒಳಗೊಂಡಿಲ್ಲ.’ 1ನೇ ಜುಲೈ, 2023 ರಿಂದ ಅನ್ವಯವಾಗುವಂತೆ ಮೂಲ ವೇತನದ ಶೇ.42 ರಿಂದ ಶೇ.46ರವರೆಗೆ ಅಸ್ತಿತ್ವದಲ್ಲಿರುವ ದರದಿಂದ ಹೆಚ್ಚಿಸಲಾಗಿದೆ ಎನ್ನಲಾಗಿದೆ.

ಕೇಂದ್ರ ಸಚಿವ ಸಂಪುಟವು ಸುಮಾರು 15,000 ಕೋಟಿ ರೂಪಾಯಿ ಬೋನಸ್ ಅನ್ನು ಅನುಮೋದಿಸಿದ ಐದು ದಿನಗಳ ನಂತರ ಮಂಡಳಿಯ ಪ್ರಕಟಣೆ ಬಂದಿದೆ, ಇದರಲ್ಲಿ ಸರ್ಕಾರಿ ನೌಕರರಿಗೆ ಡಿಎಯಲ್ಲಿ ಶೇಕಡಾ 4 ರಷ್ಟು ಹೆಚ್ಚಳ ಸೇರಿದೆ. ನೌಕರರು ತಮ್ಮ ಮುಂದಿನ ವೇತನದಲ್ಲಿ ಹೆಚ್ಚಳವಾಗಿರುವ ಡಿಎ ಮೊತ್ತವನ್ನು ಪಡೆಯಲಿದ್ದಾರೆ. ಜುಲೈನಿಂದ ಬಾಕಿ ಇರುವ ಮೊತ್ತವನ್ನೂ ಇದೇ ಸಂದರ್ಭದಲ್ಲಿ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೆ ಹೃದಯಾಘಾತ?

You may also like

Leave a Comment