6
Dasara school Holiday: ದಸರಾ ರಜೆ ಮುಗಿದಿದೆ. ಮಕ್ಕಳೆಲ್ಲ ಶಾಲೆಗೆ ಹೋಗಲು ರೆಡಿಯಾಗಿದ್ದಾರೆ. ಶಾಲೆಗಳು ಪುನರಾರಂಭವಾಗಿದೆ. ಶಿಕ್ಷಣ ಇಲಾಖೆಯ ಶೈಕ್ಷಣಿಕ ವೇಳಾಪಟ್ಟಿಯ ಪ್ರಕಾರ ದಸರಾ ರಜೆ( Dasara school Holiday) ಮುಗಿದಿದೆ. ಅಕ್ಟೋಬರ್ 25 (ಇಂದು) ರಿಂದು ಶಾಲೆಗಳು ಶುರುವಾಗಲಿದೆ.
ಎರಡನೇ ಅವಧಿಯ ಶಾಲಾ ಕರ್ತವ್ಯಗಳು ಇಂದಿನಿಂದ ಆರಂಭವಾಗಲಿದ್ದು, ಎಪ್ರಿಲ್ 10 ರವರೆಗೆ ಇರಲಿದೆ. ಅಂದ ಹಾಗೆ ರಜೆ ಮುಂದುವರಿಸಬೇಕೆಂದು ಶಿಕ್ಷಕರ ಸಂಘಟನೆಗಳು ಒತ್ತಾಯ ಮಾಡಿದ್ದವು. ಆದರೆ ಶಿಕ್ಷಣ ಇಲಾಖೆ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇಂದಿನಿಂದ ಸರಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳು ಆರಂಭವಾಗಿದೆ. ಆದರೆ ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಇಂದು ಕೂಡಾ ರಜೆ ಮುಂದುವರಿದಿದ್ದು, ನಾಳೆ ಶಾಲೆಗಳು ಆರಂಭವಾಗಲಿದೆ.
ಇದನ್ನೂ ಓದಿ: Karnataka Weather: ಕರ್ನಾಟಕದಾದ್ಯಂತ ತಾಪಮಾನ ಏರಿಕೆ ಮುನ್ಸೂಚನೆ!
