Live in Partner Murder: ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಮಹಿಳೆಯನ್ನು ಕೊಲೆ (Live in Partner Murder) ಮಾಡಿದ ವ್ಯಕ್ತಿಯೋರ್ವ ಎರಡು ದಿನ ಮನೆಯೊಳಗೆ ಶವವನ್ನು ಬಚ್ಚಿಟ್ಟಿದ್ದು, ನಂತರ ದುರ್ವಾಸನೆ ಬರಲಾರಂಭಿಸಿದಾಗ ವಿಲೇವಾರಿ ಮಾಡಲು ಯೋಚಿಸಿದ್ದಾನೆ. ಹಾಗಾಗಿ ಟ್ರಾಲಿ ಬ್ಯಾಗ್‌ನಲ್ಲಿ ಶವವನ್ನು ತುಂಬಿ ತನ್ನ ಎಸ್‌ಯುವಿಯಲ್ಲಿ ಏಕಾಂತ ಸ್ಥಳಕ್ಕೆ ಕೊಂಡೊಯ್ದು, ಅಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ವಾಪಾಸ್ ಬಂದಿದ್ದಾನೆ. ಈ ಘಟನೆ ನಡೆದಿರುವುದು ಗುಜರಾತ್‌ನ ರಾಜ್‌ಕೋಟ್‌ನಲ್ಲಿ. ಈ ಕೊಲೆಯ ಪ್ರಕರಣ ಭಾರೀ ಸಂಚಲನ ಉಂಟುಮಾಡಿತ್ತು. ಏಕೆಂದರೆ ಪೊಲೀಸರಿಗೆ ಕೊಲೆಯಾದ ಹುಡುಗಿಯ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ.
ಆದರೆ, ಮಹಿಳೆಯ ಸಂಪೂರ್ಣ ದೇಹ ಸುಟ್ಟು ಹೋಗಿಲ್ಲ. ಅರ್ಧ ಸುಟ್ಟ ದೇಹವನ್ನು ಪೊಲೀಸರು ಪತ್ತೆಯಾಗಿದ್ದು, ಟ್ರಾಲಿ ಬ್ಯಾಗ್‌ನ ಬ್ರಾಂಡ್ ಸಹಾಯದಿಂದ, ಪೊಲೀಸರು ಕೊಲೆಗಾರನ ಲಿವ್ ಇನ್ ರಿಲೇಷನ್‌ನ ಪಾರ್ಟ್ನರ್‌ನ ತಲುಪಲು ಸಾಧ್ಯವಾಯಿತು ಎಂದರೆ ನಂಬುತ್ತೀರಾ? ಆದರೆ ಇದು ಸತ್ಯ.
ರಾಜ್‌ಕೋಟ್‌ನ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಮೆಹುಲ್ ಚೋಟಾಲಿಯಾ (32) ಅಲ್ಪಾ ಅಲಿಯಾಸ್ ಆಯೇಷಾ ಮಕ್ವಾನಾ ಎಂಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದನು. ಇಬ್ಬರೂ ಸುಮಾರು 18 ತಿಂಗಳ ಕಾಲ ಲಿವ್-ಇನ್ ಸಂಬಂಧದಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ಈ ತಿಂಗಳ ಅಕ್ಟೋಬರ್ 9 ರಂದು, ರಾಜ್‌ಕೋಟ್ ನಗರದ ಪಕ್ಕದ ಪದ್ಧರಿ ಗ್ರಾಮದ ಬಳಿ ಆಯೇಷಾ ಮಕ್ವಾನಾಳ ಅರ್ಧ ಸುಟ್ಟ ಶವ ಪತ್ತೆಯಾಗಿತ್ತು. ಶವವನ್ನು ಕಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ವಿಧಿವಿಜ್ಞಾನ ತಂಡವನ್ನು ಕರೆಸಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಫೋರೆನ್ಸಿಕ್ ತಂಡ ಸ್ಥಳದಿಂದ ಸಾಕ್ಷ್ಯ ಸಂಗ್ರಹಿಸಿದೆ.
ಆಯೇಷಾ ಮಕ್ವಾನಾ ಬಗ್ಗೆ ಯಾವುದೇ ರೀತಿಯ ಮಾಹಿತಿ ಪೊಲೀಸರಿಗೆ ದೊರೆತಿರಲಿಲ್ಲ. ಪೊಲೀಸರಿಗೆ ಸುಟ್ಟ ಸುಟ್ಟ ಟ್ರಾಲಿ ಬ್ಯಾಗ್ ಮತ್ತು ಎಸ್‌ಯುವಿಯ ಚಕ್ರದ ಗುರುತುಗಳನ್ನು ಪೊಲೀಸರು ಮಾತ್ರ ದೊರಕಿದೆ. ಆದಾಗ್ಯೂ, ಪೊಲೀಸರಿಗೆ ಅಷ್ಟೇ ಸಾಕ್ಷಿ ಕೊಲೆಗಾರನಲ್ಲಿಗೆ ಕೊಂಡೊಯ್ಯುವಲ್ಲಿ ಸಹಾಯ ಮಾಡಿದೆ. ಕಾರಣ ಪೊಲೀಸರಿಗೆ ಸಿಕ್ಕಿದ ಟ್ರಾಲಿ ಬ್ಯಾಗ್ ಬ್ರಾಂಡೆಡ್ ಕಂಪನಿಯದ್ದು ಮತ್ತು ಸಾಕಷ್ಟು ದುಬಾರಿಯಾಗಿದೆ. ರಾಜ್‌ಕೋಟ್‌ನಲ್ಲಿ ಈ ಬ್ರಾಂಡ್‌ನ ಕೆಲವೇ ಅಂಗಡಿಗಳಿದ್ದವು.
ಈ ಬ್ರಾಂಡೆಡ್ ಟ್ರಾಲಿ ಬ್ಯಾಗ್‌ನ ಪತ್ತೆ ಹಚ್ಚಲು ಹೋದಾಗ ಅಂಗಡಿಯಲ್ಲಿ ತನಿಖೆ ಮಾಡಿದಾಗ ಇತ್ತೀಚೆಗೆ ಖರೀದಿಸಿದವರ ಬಗ್ಗೆ ವಿಚಾರಣೆ ಮಾಡಿದಾಗ 27 ಜನರು ಈ ಟ್ರಾಲಿ ಬ್ಯಾಗ್ ಖರೀದಿ ಮಾಡಿದ್ದು ತಿಳಿದು ಬಂದಿದೆ. ಕೂಡಲೇ ಎಲ್ಲರ ಸಂಪರ್ಕ ಪಡೆದು, ವಿಚಾರಿಸಿದಾಗ 26 ಮಂದಿ ತಮ್ಮ ಬ್ಯಾಗ್ ತೋರಿಸಿದ್ದಾರೆ. 27 ನೇ ವ್ಯಕ್ತಿಯನ್ನು ತಲುಪಿದಾಗ ಅಂದರೆ ಆಯೇಷಾ ಮಕ್ವಾನಾ ಅವರ ಲೈವ್-ಇನ್ ರಿಲೇಷನ್‌ಶಿಪ್ ಸಂಗಾತ ಮೆಹುಲ್ ಚೋಟಾಲಿಯಾ, ಅವರು ಬ್ಯಾಗ್ ತೋರಿಸಲು ನಿರಾಕರಿಸಿದಾನೆ.
ಪೊಲೀಸರಿಗೆ ಅನುಮಾನ ಬಂದು, ಕೊನೆಗೆ ಫೊರೆನ್ಸಿಕ್ ತನಿಖೆಯ ಸಮಯದಲ್ಲಿ ಪೊಲೀಸ್ ತಂಡಕ್ಕೆ ಸ್ಥಳದಲ್ಲಿ ಎಸ್‌ಯುವಿ ಚಕ್ರದ ಗುರುತುಗಳನ್ನು ಕಂಡು ಹಿಡಿದಿದ್ದರು. ನಿಮ್ಮ ಬಳಿ ಅಂತಹ ಕಾರು ಇದೆಯೇ ಂದು ಕೇಳಿದಾಗ ಮೆಹುಲ್ ತನ್ನ ಎಸ್‌ಯುವಿ ಬಗ್ಗೆ ಪೊಲೀಸರಿಗೆ ಹೇಳಿದ್ದಾನೆ. ಕಾರನ್ನು ನೋಡಿದ ತಕ್ಷಣ ಪೊಲೀಸರಿಗೆ ಮೆಹುಲ್ ಮೇಲೆ ಅನುಮಾನ ಬಂದಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಹೊರಬಿದ್ದಿದೆ.
ತಾನು ಮತ್ತು ಆಯೇಷಾ ಗಾಂಧಿಗ್ರಾಮ್ ಪ್ರದೇಶದ ಆತ್ಮನ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿರುವುದಾಗಿ ಮೆಹುಲ್ ಚೋಟಾಲಿಯಾ ಪೊಲೀಸರಿಗೆ ತಿಳಿಸಿದ್ದಾರೆ. ಅಕ್ಟೋಬರ್ 6 ರಂದು ಇಬ್ಬರೂ ಪರಸ್ಪರ ಜಗಳವಾಡಿದ್ದು, ಜಗಳದ ಸಮಯದಲ್ಲಿ, ಆಯೇಷಾ ಮಕ್ವಾನಾ ಕಪಾಳಕ್ಕೆ ಹೊಡೆದಿದ್ದು, ನಂತರ ಕೋಪದಿಂದ ಆಯೇಷಾಳನ್ನು ಕತ್ತು ಹಿಸುಕಿ ಕೊಂದಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.
ಆಯೇಷಾ ಎತ್ತರ ಕಡಿಮೆ ಇದ್ದುದರಿಂದ ಅದನ್ನು ಟ್ರಾಲಿ ಬ್ಯಾಗ್‌ನಲ್ಲಿ ತುಂಬಿದ ನಂತರ ಸುಡುವ ಯೋಚನೆ ಮಾಡಿದ್ದಾನೆ ಆರೋಪಿ. ಹಾಗಾಗಿ ಒಂದು ಅಂಗಡಿಯಿಂದ ಟ್ರಾಲಿ ಬ್ಯಾಗ್ ತಗೊಂಡು, ಅಂಗಡಿಯೊಂದರಿಂದ ಮರವನ್ನೂ ಖರೀದಿಸಿದ್ದಾನೆ. ಅಕ್ಟೋಬರ್ 8 ರ ರಾತ್ರಿ ಆಯೇಷಾಳ ದೇಹವನ್ನು ಚೀಲದಲ್ಲಿ ತುಂಬಿಸಿ ತನ್ನ ಎಸ್ಯುವಿಯಲ್ಲಿ ಇಟ್ಟುಕೊಂಡಿದ್ದಾಗಿ ಮೆಹುಲ್ ಹೇಳಿದ್ದಾನೆ. ಪದ್ಧರಿ ಗ್ರಾಮದ ಬಳಿಯ ನಿರ್ಜನ ಸ್ಥಳಕ್ಕೆ ಕಾರನ್ನು ಕೊಂಡೊಯ್ದಿದ್ದು, ಇಲ್ಲಿ ಚೀಲದ ಮೇಲೆ ಮರದ ತುಂಡುಗಳನ್ನು ಇಟ್ಟು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದೇನೆ ಎಂದು ಪೊಲೀಸರಿಗೆ ಹೇಳಿದ್ದಾನೆ.
ಇದನ್ನೂ ಓದಿ: Dasara Holiday: ದಸರಾ ರಜೆ ಮುಕ್ತಾಯ; ಈ ಜಿಲ್ಲೆಗಳಲ್ಲಿ ರಜೆ ಮುಂದುವರಿಕೆ!
