Home » BJP State President: ಕಾಂಗ್ರೆಸ್ ‘ಮಹಿಳಾ ಗ್ಯಾರಂಟಿ’ಗಳ ವಿರುದ್ಧ ಬಂತು ಹೊಸ ಅಸ್ತ್ರ- ಬಿಜೆಪಿ ಯಿಂದ ಶುರುವಾಯ್ತು ಮಾಸ್ಟರ್ ಗೇಮ್

BJP State President: ಕಾಂಗ್ರೆಸ್ ‘ಮಹಿಳಾ ಗ್ಯಾರಂಟಿ’ಗಳ ವಿರುದ್ಧ ಬಂತು ಹೊಸ ಅಸ್ತ್ರ- ಬಿಜೆಪಿ ಯಿಂದ ಶುರುವಾಯ್ತು ಮಾಸ್ಟರ್ ಗೇಮ್

2 comments
BJP State President

BJP State President: ರಾಜ್ಯದಲ್ಲಿ ಬಿಜೆಪಿಗೆ(BJP) ಹೊಸ ಅಧ್ಯಕ್ಷ ಯಾರು ಅನ್ನುವ ಪ್ರಶ್ನೆಗೆ ಉತ್ತರವನ್ನು ಇಡೀ ಕರ್ನಾಟಕವೇ ಕಾಯುತ್ತಿದೆ. ಹೌದು, ಕರ್ನಾಟಕ ಕೇಸರಿ ಪಡೆಯಲ್ಲಿ ಹೊಸ ಸಾರಥಿಯನ್ನು ನೇಮಕ ಮಾಡಲು ಬಿಜೆಪಿ ಹೈಕಮಾಂಡ್ ಕೊನೆಗೂ ದೃಢ ನಿರ್ಧಾರ ಮಾಡಿದಂತೆ ಇದೆ. ಅಷ್ಟಕ್ಕೂ ಕರ್ನಾಟಕ ಬಿಜೆಪಿಯ ಚುಕ್ಕಾಣಿ ಹಿಡಿಯಲು ಒಬ್ಬ ಮಹಿಳೆಯನ್ನು ಸ್ಟ್ರಾಂಗ್ ಆಗಿ ಸಿದ್ದಪಡಿಸಿದ್ದಾರೆ. ಇವರೇ ನೋಡಿ ಹಿಂದುತ್ವದ ಫೈಯರ್ ಬ್ರ್ಯಾಂಡ್ ನಾಯಕಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ(Shobha Karandlaje).

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕೂವರೆ ತಿಂಗಳು ಕಳೆದರೂ, ಸಿದ್ದರಾಮಯ್ಯ ಸರ್ಕಾರವನ್ನು ಸಮರ್ಥವಾಗಿ ಎದುರಿಸಿ ನಿಲ್ಲುವಂತಾ ಪ್ರತಿಪಕ್ಷ ನಾಯಕನಾಗ್ಲೀ, ಬಿಜೆಪಿ ರಾಜ್ಯಾಧ್ಯಕ್ಷರ (BJP State president) ನೇಮಕವಾಗ್ಲೀ ಆಗಿಲ್ಲ.

ಇನ್ನು ಹಾಲಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಅಧಿಕಾರವಧಿ ವಿಧಾನಸಭಾ ಚುನಾವಣೆಗೂ ಮೊದ್ಲೇ ಮುಗಿದಿದೆ.
ಕಟೀಲ್ ಅಧ್ಯಕ್ಷರಾಗಿರೋವಾಗ್ಲೇ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಕಂಡಿದೆ. ಇತ್ತ ಹೊಸ ರಾಜ್ಯಾಧ್ಯಕ್ಷರ ನೇಮಕವಾಗಿಲ್ಲ, ಅತ್ತ ಪ್ರತಿಪಕ್ಷ ನಾಯಕ ಯಾರು ಎಂಬ ಪ್ರಶ್ನೆಗೂ ಉತ್ತರವಿಲ್ಲ. ಇದನ್ನೇ ಮುಂದಿಟ್ಟುಕೊಂಡು ಪ್ರತೀ ದಿನ ಕಾಂಗ್ರೆಸ್ ನಾಯಕರು ಬಿಜೆಪಿ ಪಕ್ಷವನ್ನು ಟಿಕೀಸುತ್ತಿದ್ದಾರೆ.

ಇದೀಗ ಕೊನೆಗೂ ಒಂದು ಪ್ರಶ್ನೆಗೆ ಉತ್ತರ ಸಿಗುವ ಕಾಲ ಬಂದಿದೆ. ರಾಜ್ಯ ಬಿಜೆಪಿಗೆ ಹೊಸ ಅಧ್ಯಕ್ಷರ ನೇಮಕ ಇನ್ನು ಕೆಲವೇ ದಿನಗಳಲ್ಲಿ ಆಗಲಿದ್ದು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೆಸರು ಎಲ್ಲರ ಬಾಯಲ್ಲೂ ಕೇಳಿ ಬರುತ್ತಿದೆ ಎನ್ನಲಾಗ್ತಿದೆ.

ಇದನ್ನೂ ಓದಿ: Dasara Holiday: ದಸರಾ ರಜೆ ಮುಕ್ತಾಯ; ಈ ಜಿಲ್ಲೆಗಳಲ್ಲಿ ರಜೆ ಮುಂದುವರಿಕೆ!

You may also like

Leave a Comment