Home » Tiger pawl: ಮತ್ತೊಂದು ಹುಲಿ ಉಗುರಿನ ಪ್ರಕರಣ, ಧನಂಜಯ ಸ್ವಾಮಿಯ ಹುಲಿ ಉಗುರು ನಾಪತ್ತೆ! ಅಧಿಕಾರಿಗಳ ತನಿಖೆ!!!

Tiger pawl: ಮತ್ತೊಂದು ಹುಲಿ ಉಗುರಿನ ಪ್ರಕರಣ, ಧನಂಜಯ ಸ್ವಾಮಿಯ ಹುಲಿ ಉಗುರು ನಾಪತ್ತೆ! ಅಧಿಕಾರಿಗಳ ತನಿಖೆ!!!

by Mallika
1 comment
Tiger claw pendant case

Tiger claw pendant case : ಕೃಷಿಕ ಹಾಗೂ ಬಿಗ್‌ಬಾಸ್‌ (BBK Season 10) ಸ್ಪರ್ಧಿ ವರ್ತೂರು ಸಂತೋಷ್‌ (Varthur Santhosh) ಅವರನ್ನು ದೊಡ್ಮನೆಯಿಂದಲೇ ಬಂಧಿಸಿದ್ದು, ಇದೀಗ ಈ ಪ್ರಕರಣ ರಾಜ್ಯಾದ್ಯಂತ ಸುದ್ದಿ ಮಾಡುತ್ತಿರುವಾಗಲೇ ಇದೇ ಮಾದರಿಯಲ್ಲಿ ಆಭರಣ ಧರಿಸಿದ ಗಣ್ಯರು ಮತ್ತು ಸೆಲೆಬ್ರಿಟಿಗಳಿಗೆ ಆತಂಕ ಹೆಚ್ಚಾಗಿದೆ. ಅದರಲ್ಲೂ ಮುಖ್ಯವಾಗಿ ಹುಲಿಯುಗುರಿನ ಪೆಂಡೆಂಟ್‌ (Tiger claw pendant case ) ಧರಿಸಿ ತುಮಕೂರು ಜಿಲ್ಲೆ ಕುಣಿಗಲ್‌ ತಾಲೂಕಿನ ಬಿದನಗೆರೆಯ ಧನಂಜಯ ಸ್ವಾಮಿ (Dhananjaya Swami) ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಧನಂಜಯ ಸ್ವಾಮಿ ಚಿತ್ರಗಳನ್ನು ಹಾಕಿ ಇವರ ಮೇಲೆ ಯಾಕೆ ಕ್ರಮವಿಲ್ಲ ಎಂದು ಕೇಳಿದ್ದರು. ಕೆಲವರು ಅರಣ್ಯ ಇಲಾಖೆ (Forest Department Officials) ಅಧಿಕಾರಿಗಳಿಗೆ ದೂರು ಕೂಡಾ ನೀಡಿದ್ದರು. ಇದನ್ನು ಪರಿಗಣಿಸಿ ಅರಣ್ಯಾಧಿಕಾರಿಗಳು ತನಿಖೆ ಮಾಡಿದ್ದು, ಕುತೂಹಲಕಾರಿ ಬೆಳವಣಿಗೆಯಲ್ಲಿ ಧನಂಜಯ ಸ್ವಾಮಿ ಧರಿಸುತ್ತಿದ್ದ ಪೆಂಡೆಂಟ್‌ ನಿಗೂಢವಾಗಿ ನಾಪತ್ತೆಯಾಗಿದೆ.

ಅದು ನಕಲಿ. ತುಂಬಾ ದಿನಗಳಿಂದ ಹಾಕಿದ್ದಕ್ಕೆ ಏನೋ ಅದು ಕಪ್ಪು ಬಣ್ಣಕ್ಕೆ ತಿರುಗಿತ್ತು. ಅದನ್ನು ಎಸೆದಿದ್ದೇನೆ ಎಂದು ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರಂತೆ ಧನಂಜಯ ಸ್ವಾಮಿ.

ಅದು ನಕಲಿಯೇ ಇರಬಹುದು, ಯಾವುದೇ ಇರಬಹುದು, ಅದನ್ನು ಪರಿಶೀಲನೆಗೆ ಒಪ್ಪಿಸಬೇಕು ಎಂದು ಇವರ ಹೇಳಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ ಜಿಲ್ಲಾ ಅರಣ್ಯಾಧಿಕಾರಿ ಅನುಪಮಾ. ಉಗುರನ್ನು ಎಸೆದಿರುವುದಾಗಿ ಹೇಳಿದ್ದರಿಂದ ಕೃತಕ ಉಗುರನ್ನು ಅವರಿಂದ ಪಡೆದು ಎಫ್‌ಎಸ್‌ಎಲ್‌ ಪರೀಕ್ಷೆಗೆ ಕಳುಹಿಸಲಾಗುವುದು. ಉಗುರು ಸಿಗದಿದ್ದರೆ ಸರ್ಚ್‌ ವಾರಂಟ್‌ ಪಡೆದು ಹುಡುಕಬೇಕಾಗುತ್ತದೆ ಎಂದು ಡಿಎಫ್‌ಒ ಅನುಪಮಾ ಮಾಹಿತಿ ನೀಡಿದ್ದಾರೆ ಎಂದು ಮಾಧ್ಯಮವೊಂದು ಹೇಳಿದೆ.

ಧನಂಜಯ ಸ್ವಾಮಿ ಅವರ ಜೊತೆಗೆ ಚಿತ್ರನಟ ದರ್ಶನ್‌, ರಾಜ್ಯ ಸಭಾ ಸದಸ್ಯ ಜಗ್ಗೇಶ್‌, ರಾಕ್‌ಲೈನ್‌ ವೆಂಕಟೇಶ್‌, ಹುಲಿ ಚರ್ಮ ಬಳಸುವ ವಿನಯ ಗುರೂಜಿ ಮೊದಲವರ ಕುರಿತು ಕೂಡಾ ಚರ್ಚೆ ಆರಂಭವಾಗಿದೆ.

ಇದನ್ನೂ ಓದಿ: ಲಿವ್‌ ಇನ್‌ ರಿಲೇಷನ್‌ಶಿಪ್‌ ಗೆಳತಿಯ ಭೀಕರ ಕೊಲೆ! ಸಾಕ್ಷ್ಯ ನಾಶಪಡಿಸಿದ ಪ್ರಿಯಕರನ ಪತ್ತೆ ಮಾಡಿದ್ದು, ಟ್ರಾಲಿ ಬ್ಯಾಗ್‌ನ ಬ್ರ್ಯಾಂಡ್‌!!! ರಹಸ್ಯ ಕೊಲೆ ಮಿಸ್ಟ್ರಿ ಬಹಿರಂಗಗೊಂಡಿದ್ದೇ ರೋಚಕ!!!

You may also like

Leave a Comment