Marriage rules: ಸರಕಾರಿ ಸಿಬ್ಬಂದಿ ಇಲಾಖೆಯ ‘ಕಚೇರಿ ಸುತ್ತೋಲೆಯಲ್ಲಿ ಸಂಗಾತಿ (Life Partner)ಜೀವಂತವಾಗಿದ್ದು, ಮತ್ತೊಬ್ಬ ವ್ಯಕ್ತಿಯನ್ನು ಮದುವೆಯಾಗುವ ಮೊದಲು ಸರ್ಕಾರದ ಅನುಮತಿಯನ್ನು ತೆಗೆದುಕೊಳ್ಳುವಂತೆ ನೌಕರರಿಗೆ(Government Employee)ಅಸ್ಸಾಂ ಸರಕಾರ ಸೂಚನೆ ನೀಡಿದೆ.
ಅಸ್ಸಾಂ ಸರ್ಕಾರಿ ನೌಕರರು ಸಂಗಾತಿ ಜೀವಂತವಾಗಿದ್ದು, ಇನ್ನೊಬ್ಬರನ್ನು ಮದುವೆಯಾಗುವುದನ್ನು(Marriage rules)ಸರ್ಕಾರ ನಿರ್ಬಂಧ ಹೇರಿದ್ದು, ನೌಕರರು ದ್ವಿಪತ್ನಿತ್ವದಲ್ಲಿ ತೊಡಗಿಸಿಕೊಂಡರೆ ದಂಡದ ಕ್ರಮದ ಎಚ್ಚರಿಕೆಯನ್ನು ನೀಡಿದೆ.ಈ ಕುರಿತು ಅಕ್ಟೋಬರ್ 20 ರಂದು ಸಿಬ್ಬಂದಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೀರಜ್ ವರ್ಮಾ ಅಧಿಸೂಚನೆ ಹೊರಡಿಸಿದ್ದಾರೆ. ಅಸ್ಸಾಂ ನಾಗರಿಕ ಸೇವೆಗಳ (ನಡತೆ) ನಿಯಮಗಳು 1965 ರ ನಿಯಮ 26 ರ ನಿಬಂಧನೆಗಳ ಅನುಸಾರ ಮಾರ್ಗಸೂಚಿಗಳನ್ನು ನೀಡಲಾಗಿದೆ ಎಂದು ಹೇಳಲಾಗಿದೆ.
“ಹೆಂಡತಿ ಜೀವಂತವಾಗಿರುವ ಯಾವುದೇ ಸರ್ಕಾರಿ ನೌಕರನು ಸರ್ಕಾರದ ಅನುಮತಿಯನ್ನು ಸ್ವೀಕರಿಸದೇ ಮತ್ತೊಂದು ಮದುವೆ ಒಪ್ಪಂದ ಮಾಡಿಕೊಳ್ಳಬಾರದು ಎಂದು ಸೂಚಿಸಲಾಗಿದೆ. ಯಾವುದೇ ಮಹಿಳಾ ಸರ್ಕಾರಿ ಉದ್ಯೋಗಿ, ತನ್ನ ಗಂಡ ಬದುಕಿರುವಾಗ ಸರ್ಕಾರದ ಅನುಮತಿ ಪಡೆದುಕೊಳ್ಳದೇ ಬೇರೊಬ್ಬ ವ್ಯಕ್ತಿಯನ್ನು ಮದುವೆಯಾಗಬಾರದು ಎಂದು ಸರ್ಕಾರದ ಸುತ್ತೋಲೆಯಲ್ಲಿ ತಿಳಿಸಲಾಗಿದ್ದು, ಇದು ಕೂಡಲೇ ಜಾರಿಗೆ ಬರಲಿದೆ ಎಂದು ತಿಳಿಸಲಾಗಿದೆ.
