Home » Janardana Reddy: ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ ಜನಾರ್ಧನ ರೆಡ್ಡಿ- ಕೊನೆಗೂ ಮಾಡೇ ಬಿಟ್ರಾ ಆ ನಿರ್ಧಾರ !!

Janardana Reddy: ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ ಜನಾರ್ಧನ ರೆಡ್ಡಿ- ಕೊನೆಗೂ ಮಾಡೇ ಬಿಟ್ರಾ ಆ ನಿರ್ಧಾರ !!

1 comment
Janardana Reddy

Janardana Reddy: ಇತ್ತೀಚಿನ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಂತೂ ಅನೇಕ ಮಹತ್ವದ ಬದಲಾವಣೆಗಳು ನಡೆಯುತ್ತಿವೆ. ಇಷ್ಟು ದಿನ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಹಲವಾರು ನಾಟಕೀಯ ಬೆಳವಣಿಗೆಗಳನ್ನು ಕಂಡಂತ ನಾಡಿನ ಜನರಿಗೆ ಇದೀಗ ಮತ್ತೊಂದು ಪಕ್ಷವು ತನ್ನ ಶಕ್ತಿ ಪ್ರದರ್ಶಿಸಲು ಮುಂದಾಗಿದೆ.

ರಾಜ್ಯ ರಾಜಕೀಯದಲ್ಲಿ ಪ್ರಬಲ ನಾಯಕನಾಗಿ ಗುರುತಿಸಿಕೊಂಡು, ಬಳ್ಳಾರಿ ಗಣಿಯ ಧಣಿಯಾಗಿ ಮೆರೆದು, ಎಲ್ಲಾ ಪಕ್ಷಗಳಿಂದ ಬಸವಳಿದು ಇದೀಗ ತನ್ನದೇ ಸ್ವಂತ ಪಕ್ಷವಾದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಕಟ್ಟಿ ರಾಜ್ಯದಲ್ಲಿ ನೆಲೆಯೂರಲು ಹೊರಟಿರುವ ಜನಾರ್ಧನ ರೆಡ್ಡಿ(Janaradana Reddy)ಯವರು ರಾಜ್ಯ ರಾಜಕೀಯದಲ್ಲಿ ಮಹಾನ್ ಸಂಚಲನ ಉಂಟುಮಾಡಲು ಶುರುಮಾಡಿದ್ದು, ಪಕ್ಷದ ಬಲವರ್ಧನೆಗೆ ಮುಂದಾಗಿದ್ದಾರೆ.

ಹೌದು, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಬೆಂಗಳೂರು ಕಾರ್ಯಾಲಯದಲ್ಲಿ ದಿನಾಂಕ 26/10/23 ರಂದು ಪಕ್ಷದ ನೇತಾರ ಜನಾರ್ಧನ ರೆಡ್ಡಿಯವರು ಪಕ್ಷದ ಪದಾಧಿಕಾರಿಗಳ ಸಭೆ ನಡೆಸಲಾಗಿದೆ. ಸಭೆಯಲ್ಲಿ ಪಕ್ಷದ ಬಲವರ್ಧನೆ ಬಗ್ಗೆ ಚರ್ಚಿಸಲಾಗಿದ್ದು ರಾಜ್ಯದಲ್ಲಿ ಭಧ್ರವಾಗಿ ನೆಲೆಯೂರೋ ಬಗ್ಗೆ ಚಿಂತಿಸಾಗಿದೆ ಎನ್ನಲಾಗಿದೆ.

ಅಂದಹಾಗೆ ಈ ಕುರಿತು ಜೆ. ರಾಮಣ್ಣ ರಾಷ್ಟ್ರೀಯ ಅಧ್ಯಕ್ಷರು, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಬೆಂಗಳೂರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ರಾಜ್ಯ ಘಟಕ, ಜಿಲ್ಲಾ ಘಟಕ, ತಾಲೂಕು ಹಾಗೂ ನಗರ ಘಟಕಗಳನ್ನು ಒಳಗೊಂಡಂತೆ ಎಲ್ಲಾ ಘಟಕಗಳನ್ನು ಅಕ್ಟೋಬರ್ 26ರಿಂದಲೇ ಜಾರಿಗೆ ಬರುವಂತೆ ವಿಸರ್ಜಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಆದರೆ ಪಕ್ಷದ ಬಲವರ್ಧನೆ ಅಂದುಕೊಂಡು ಘಟಕಗಳನ್ನು ವಿಸರ್ಜಿಸುತ್ತಿರುವುದು ಭಾರೀ ಕುತೂಹಲ ಕೆರಳಿಸಿದೆ.

 

ಇದನ್ನು ಓದಿ: Tiger Nail: ಹುಲಿ ಉಗುರು ಪ್ರಕರಣ ಕುರಿತು ಸಿ ಟಿ ರವಿಯಿಂದ ಸ್ಪೋಟಕ ಹೇಳಿಕೆ- ಅದನ್ನು ಮರೆಮಾಚಲು ನಡೀತಿದ್ಯಾ ಈ ಪ್ಲಾನ್ ?!

You may also like

Leave a Comment