Home » HSRP ನಂಬರ್ ಪ್ಲೇಟ್ ಮನೆಯಲ್ಲಿ ಕೂತೇ ಬುಕ್ ಮಾಡಿಕೊಳ್ಳಿ, ಇಷ್ಟು ಸುಲಭ ಅಂತ ಗೊತ್ತೇ ಇರಲಿಲ್ಲ !

HSRP ನಂಬರ್ ಪ್ಲೇಟ್ ಮನೆಯಲ್ಲಿ ಕೂತೇ ಬುಕ್ ಮಾಡಿಕೊಳ್ಳಿ, ಇಷ್ಟು ಸುಲಭ ಅಂತ ಗೊತ್ತೇ ಇರಲಿಲ್ಲ !

by ಹೊಸಕನ್ನಡ
1 comment
HSRP number plate

HSRP ನಂಬರ್ ಪ್ಲೇಟ್ ಬಗ್ಗೆ ಇನ್ನೂ ಎಲ್ಲರಿಗೂ ಸರಿಯಾದ ಮತ್ತು ಪೂರ್ತಿ ಮಾಹಿತಿ ಇಲ್ಲ. ಹಾಗಾಗಿ ಇವತ್ತು ನಾವು ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಎಂದರೇನು, ಇದನ್ನು ಯಾಕೆ ಪಡೆಯಬೇಕು ಮತ್ತು ಈ ನಂಬರ್ ಪ್ಲೇಟ್ ಅನ್ನು ಹೇಗೆ ಅಳವಡಿಸಿಕೊಳ್ಳುವುದು ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇವೆ.

ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ (HSRP) ನಂಬರ್ ಪ್ಲೇಟ್ ಅನ್ನು ಅಲ್ಯುಮಿನಿಯಂ ಪ್ಲೇಟ್ ತಯಾರಿಸಿ ದ ನಂಬರ್ ಪ್ಲೇಟ್ ಆಗಿದ್ದು, ಇದನ್ನು ಡಿಜಿಟಲ್ ನಂಬರ್ ಪ್ಲೇಟ್ ಎನ್ನಬಹುದು. ಈ ನಂಬರ್ ಪ್ಲೇಟ್ ನಲ್ಲಿ ನಂಬರ್ ಗಳು ಮತ್ತು ಅಕ್ಷರಗಳನ್ನು ಲೇಸರ್ ಎನ್ ಕೋಡ್ ಮಾಡಲಾಗುತ್ತದೆ ಮತ್ತು ಪ್ರೀತಿನ ಎಡಭಾಗದಲ್ಲಿರುವ ಅಶೋಕ ಚಕ್ರದೊಂದಿಗೆ ಕ್ರೋಮಿಯಂ ಹಾಲೋ ಗ್ರಾಂ ಹಾಟ್ ಸ್ಟಾಂಪ್ (20mm * 20mm) ಮಾಡಿರುತ್ತಾರೆ.

ಸರ್ಕಾರದ ಪ್ರಕಾರ 1 ನೇ ಏಪ್ರಿಲ್ 2019 ಗಿಂತ ಮೊದಲು ರಿಜಿಸ್ಟರ್ ಮಾಡಿರುವ ಎಲ್ಲಾ ವಾಹನಗಳಿಗೆ HSRP ನಂಬರ್ ಪ್ಲೇಟ್ ಕಡ್ಡಾಯ. ಕರ್ನಾಟಕದಲ್ಲಿ ಈ ಬಗ್ಗೆ ಆಗಸ್ಟ್ 2023 ರಂದು ನೋಟಿಫಿಕೇಶನ್ ಹೊರಡಿಸಿದ್ದು, ಇನ್ನು ಕೆಲವೇ ದಿನಗಳಲ್ಲಿ HSRP ಸ್ಟಾಂಪ್ ಹೊಂದುವುದು ಕಡ್ಡಾಯ ಆಗಲಿದೆ. ಅಂದರೆ, ಬರುವ ನವೆಂಬರ್ 17 ಡೆಡ್ ಲೈನ್ ಆಗಿದ್ದು, ಅದರ ಒಳಗೆ HSRP ಸ್ಟಾಂಪಿಂಗ್ ಮಾಡಿಸಿಕೊಳ್ಳಬೇಕು. ಇಲ್ಲದೆ ಹೋದರೆ ದುಬಾರಿ ದಂಡ ಬೀಳೋದು ಗ್ಯಾರಂಟಿ.

HSRP ರಿಜಿಸ್ಟ್ರೇಷನ್ ಪ್ಲೇಟ್ ಹಾಕದೆ ಇದ್ದರೆ, ನಿಮ್ಮ ವಾಹನಗಳನ್ನು ಮಾರಲು, ಕೊಳ್ಳಲು ಅಥವಾ ಯಾವುದೇ ಟ್ರಾನ್ಸ್ಪೋರ್ಟ್ ಸಂಬಂಧಿ ಕೆಲಸ ಮಾಡಲು ಸಾಧ್ಯ ಆಗುವುದಿಲ್ಲ. ಹಾಗಾಗಿ HSRP ನಂಬರ್ ಪ್ಲೇಟ್ ಗಳನ್ನು ತ್ವರಿತವಾಗಿ ಪಡೆದುಕೊಳ್ಳಬೇಕಾಗುತ್ತದೆ. ಈ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಗಳನ್ನು ನೀವೇ ಸ್ವತಃ ನಿಮ್ಮ ಮೊಬೈಲ್ ನಲ್ಲಿಯೇ ಅಪ್ಲೈ ಮಾಡಬಹುದು. https://transport.karnataka.gov.in ಅಥವಾ https://www.siam.in ಮೂಲಕ ಅಪ್ಲೈ ಮಾಡಬಹುದು.

ಉದಾಹರಣೆಗೆ, https://www.siam.in ಮೂಲಕ ಅಪ್ಲೈ ಮಾಡಲು ಮೊದಲು ವೆಬ್ ಸೈಟ್ ತೆರೆಯಿರಿ. ನಂತರ Book HSRP ಎನ್ನುವ ಮೆನು ಬಟನ್ ಅನ್ನು ಕ್ಲಿಕ್ ಮಾಡಿ ನೀವೇ ಅರ್ಜಿ ಅಪ್ಲೈ ಮಾಡಿಕೊಳ್ಳಬಹುದು. ಇಲ್ಲಿ ಒಟ್ಟು 6 ಸ್ಟೆಪ್ ಪ್ರೋಸೆಸ್ ಇದೆ. ಮೊದಲಿಗೆ ನಿಮ್ಮ ವಾಹನ ತಯಾರಿಕಾ ಸಂಸ್ಥೆ ಯಾವುದು, ಯಾವ ಮಾಡೆಲ್ ಎಂಬ ಆಯ್ಕೆಗಳು ಇರುತ್ತವೆ. ಅದನ್ನು ಭರ್ತಿ ಮಾಡಿದ ನಂತರ ನಿಮಗೆ ನಿಮ್ಮ ಹತ್ತಿರದ HSRP ಕೊಡುವ ಡೀಲರ್ ರನ್ನು ಆಯ್ಕೆ ಮಾಡುವ ಅವಕಾಶ ನೀಡಲಾಗಿದೆ. ಹಾಗೆ ಡೀಲರ್ ಆಯ್ಕೆಯ ನಂತರ ಆನ್ಲೈನ್ ನಲ್ಲಿ ಫೀಸ್ ಪೇ ಮಾಡಿದ ನಂತರ ನಿಮಗೆ ನಿಮ್ಮ ಆಯ್ಕೆಯ ದಿನ ಮತ್ತು ಸಮಯವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲಾಗುತ್ತದೆ. ಆ ದಿನ ಡೀಲರ್ ಬಳಿ ಹೋದರೆ ಅಲ್ಲಿ ನಿಮ್ಮ ನಂಬರ್ ಪ್ಲೇಟ್ ರೆಡಿಯಾಗುತ್ತದೆ. ಕೆಲವು ಸಂದರ್ಭಗಳಲ್ಲಿ ನಿಮ್ಮ ಮನೆಯಲ್ಲಿ ಅಥವಾ ಆಫೀಸ್ ಲೊಕೇಶನ್ ಗಳಲ್ಲಿ ಕೂಡ ಬಂದು ನಂಬರ್ ಪ್ಲೇಟ್ ಅಂಟಿಸುವ ಅವಕಾಶಗಳು ಇವೆ. ಹೀಗೆ ಸ್ವಚ್ಛವಾಗಿ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಗಳನ್ನು ಹಾಕಿಸುವ ಬಗ್ಗೆ ಮಾಹಿತಿ ನೀಡಿದ್ದೇವೆ.

You may also like

Leave a Comment