Home » Belthangady: ಕ್ಷುಲ್ಲಕ ವಿಚಾರಕ್ಕೆ ತಂದೆ -ಮಗನ ನಡುವೆ ಕಲಹ: ತಂದೆಯಿಂದಲೇ ಮಗನ ಹತ್ಯೆ !

Belthangady: ಕ್ಷುಲ್ಲಕ ವಿಚಾರಕ್ಕೆ ತಂದೆ -ಮಗನ ನಡುವೆ ಕಲಹ: ತಂದೆಯಿಂದಲೇ ಮಗನ ಹತ್ಯೆ !

1 comment

Belthangady: ಅಕ್ಟೋಬರ್ 29 ರಂದು ರಾತ್ರಿ ಬೆಳ್ತಂಗಡಿಯ(Belthangady) ಉಜಿರೆಯಲ್ಲಿ ಮನೆಯಲ್ಲಿ ಅಪ್ಪ – ಮಗನ ನಡುವೆ ನಡೆದ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದ್ದು, ಆ ಬಳಿಕ ಕೊಲೆಯಲ್ಲಿ (Murder)ಅಂತ್ಯವಾದ ಘಟನೆ ನಡೆದಿದೆ.

Belthangady

ವೈದ್ಯಕೀಯ ಚಿಕಿತ್ಸೆಯ ದಾಖಲೆ ನೀಡುವಂತೆ ತಂದೆ-ಮಗನ ನಡುವೆ ಜಗಳ ನಡೆದಿದೆ ಎನ್ನಲಾಗಿದೆ. ಈ ಸಂದರ್ಭ ತಂದೆಯೇ ಮಗನನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ನಿನ್ನೆ(ಅ.29) ರಾತ್ರಿ ಉಜಿರೆಯಲ್ಲಿ ಸಂಭವಿಸಿದೆ.ಉಜಿರೆ ಗ್ರಾಮದ ಕೊಡೆಕಲ್ಲು ನಿವಾಸಿ ಕೃಷ್ಣಯ್ಯ ಆಚಾರ್(75ವ) ಅವರ ಪುತ್ರ ಜಗದೀಶ್(30ವ) ಎಂಬವರು ಈ ಘಟನೆಯಲ್ಲಿ ಮೃತಪಟ್ಟ ದುರ್ದೈವಿಯಾಗಿದ್ದು, ಇವರ ತಂದೆ ಕೃಷ್ಣಯ್ಯಾಚಾರ್ ಚೂರಿಯಿಂದ ಇರಿದು ಮಗನನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಅ.29 ರಂದು ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಕೊಡೆಕಲ್ಲು ನಿವಾಸಿ ಕೃಷ್ಣಯ್ಯ ಆಚಾರಿ(75) ಮಲಗಿದ್ದ ಸಂದರ್ಭ ಮಗ ಜಗದೀಶ್ ಆಚಾರಿ(31) ನಡುವೆ ವೈದ್ಯಕೀಯ ಚಿಕಿತ್ಸೆಯ ದಾಖಲೆ ನೀಡುವಂತೆ ತಂದೆ ಹಾಗೂ ಮಗನ ನಡುವೆ ಮಾತಿನ ಚಕಮಕಿ ನಡೆದಿದ್ದು, ಆ ಬಳಿಕ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದೆ. ಕೃಷ್ಣಯ್ಯ ಆಚಾರ್ ಮನೆಯ ಕೋಣೆಯೊಳಗೆ ಹೋಗಿ ಚಿಲಕ ಹಾಕಿದ್ದು, ಮಗ ಜಗದೀಶ ಕಾಲಿನಿಂದ ತುಳಿದು ಬಾಗಿಲು ತೆಗೆಯಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ಕೋಪಗೊಂಡ ಅಪ್ಪ ಕೃಷ್ಣಯ್ಯ ತನ್ನ ಕಪಾಟಿನಲ್ಲಿ ಇರಿಸಿದ್ದ ಚೂರಿಯಿಂದ ಮಗನ ಕುತ್ತಿಗೆಗೆ ಇರಿದಿದ್ದಾನೆ. ಜಗದೀಶನಿಗೆ ಎಡ ಭುಜಕ್ಕೆ ಹಾಗೂ ಎಡ ಎದೆ ಭಾಗಕ್ಕೆ ಚೂರಿಯಿಂದ ತಂದೆ ಇರಿದಿದ್ದು, ಇರಿತಕ್ಕೆ ಒಳಗಾಗಿ ಕುಸಿದು ಬಿದ್ದ ಜಗದೀಶ್ ಅನ್ನು ತಕ್ಷಣವೇ ಮನೆಯವರು ಉಜಿರೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಹೆಚ್ಚಿನ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದು ಈ ಸಂದರ್ಭ ಜಗದೀಶ್ ಆಚಾರಿ ಮೃತಪಟ್ಟಿದ್ದಾರೆ. ಇನ್ನು ಮಗನನ್ನು ಕೊಲೆ ಮಾಡಿದ ತಂದೆ ಕೃಷ್ಣಯ್ಯ ಅಚಾರಿಯನ್ನು ಬೆಳ್ತಂಗಡಿ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Belthangady: ಕ್ಷುಲ್ಲಕ ವಿಚಾರಕ್ಕೆ ತಂದೆ -ಮಗನ ನಡುವೆ ಕಲಹ: ತಂದೆಯಿಂದಲೇ ಮಗನ ಹತ್ಯೆ !

You may also like

Leave a Comment