Home » Girls lips secrets: ಹುಡುಗರು ಹುಡುಗಿಯರ ತುಟಿ ನೋಡೋದು ಇದೇ ಕಾರಣಕ್ಕಂತೆ!!

Girls lips secrets: ಹುಡುಗರು ಹುಡುಗಿಯರ ತುಟಿ ನೋಡೋದು ಇದೇ ಕಾರಣಕ್ಕಂತೆ!!

1 comment
Girls lips secrets

Girls Lip secrets: ಶೃಂಗಾರ ಎಂದೊಡನೆ ಥಟ್ಟನೆ ನೆನಪಾಗುವುದು ಹೆಣ್ಣು ಮಕ್ಕಳು. ಸುಂದರ ಕೇಶರಾಶಿ, ಕಣ್ಮನ ಸೆಳೆಯುವ ಕಣ್ಣುಗಳ(Eyes)ಜೊತೆಗೆ ಹೆಣ್ಣಿನ ಸುಂದರ ವದನಕ್ಕೆ ಆಕರ್ಷಕ ತುಟಿಗಳು( Lips)ಕೂಡ ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ.

ಅನೇಕ ಹುಡುಗರು ಹುಡುಗಿಯರು ಮಾತನಾಡುವಾಗ ಅವರ ತುಟಿಗಳನ್ನು ಹೆಚ್ಚು ಗಮನಿಸುತ್ತಾರೆ. ಆದರೆ, ಹೀಗೆ ಹುಡುಗರು ಹುಡುಗಿಯರ ತುಟಿ(Girls Lip secrets) ನೋಡಲು ಅನೇಕ ಕಾರಣಗಳಿವೆಯಂತೆ. ಹುಡುಗಿಯರ ತುಟಿಯನ್ನು ಹುಡುಗರು ಹೆಚ್ಚು ಗಮನಿಸುವುದು ಯಾಕೆ ಗೊತ್ತಾ?

ಲಿಪ್ ಸ್ಟಿಕ್ ಬಣ್ಣ :
ಹೆಂಗೆಳೆಯರೆಂದರೆ ಸೌಂದರ್ಯಾ ಪ್ರಿಯರು. ಹೀಗಾಗಿ, ಸೌಂದರ್ಯಕ್ಕೆ ಹೆಚ್ಚು ಮಹತ್ವ ನೀಡುವವರು ಎಂದರೂ ತಪ್ಪಾಗಲಾರದು. ಮಹಿಳೆಯರು ತುಟಿಯ ಅಂದ ಚಂದ ಹೆಚ್ಚಿಸಲು ಬಣ್ಣ ಬಣ್ಣದ ಲಿಪ್ ಸ್ಟಿಕ್ ಹಾಕುವುದು ಸಾಮಾನ್ಯ. ಈ ರೀತಿ ಬಣ್ಣ ಬಣ್ಣದ ಲಿಪ್ಸ್ಟಿಕ್ ಹುಡುಗರನ್ನು ಆಕರ್ಷಿಸುತ್ತದಂತೆ . ಇದರಿಂದಾಗಿ, ಆಕರ್ಷಕವಾಗಿರುವ ಲಿಪ್ ಸ್ಟಿಕ್ ಹಚ್ಚಿಕೊಂಡರೆ ಹುಡುಗರು ಮೊದಲು ಹುಡುಗಿಯರ ತುಟಿಯನ್ನು ಗಮನಿಸುತ್ತಾರಂತೆ.

ಪ್ರೀತಿ :
ಪ್ರೀತಿಯಲ್ಲಿ ಬಿದ್ದ ಯುವಕ ತನ್ನ ಪ್ರೇಯಸಿಯ ತುಟಿಯನ್ನು ಸಹಜವಾಗಿ ಗಮನಿಸುತ್ತಾನೆ. ಅದರಲ್ಲಿಯೂ ಆಕೆಗೆ ಮುತ್ತು ನೀಡಲು ಹೆಚ್ಚು ಬಯಸುತ್ತಾನಂತೆ.

ಸೆಕ್ಸಿ ತುಟಿ :
ಮಹಿಳೆ ಸುಂದರವಾಗಿ ಕಾಣಲು ಆಕೆಯ ತುಟಿ ಕೂಡ ಕಾರಣವಾಗುತ್ತದೆ. ಕೆಲವರ ತುಟಿ ಅವರ ಸುಂದರ ವದನದ ಮೊದಲ ಆಕರ್ಷಣೆಯಾಗಿರುತ್ತದೆ. ಹೀಗಾಗಿ, ಹುಡುಗರ ಚಿತ್ತ ತುಟಿಯತ್ತ ಹೋಗುತ್ತದೆ.

ಹುಡುಗಿ ಅರ್ಥ ಮಾಡಿಕೋ :
ಹೆಚ್ಚಿನ ಹುಡುಗರು ಕೆಲವೊಂದು ವಿಷಯಗಳನ್ನು ಹುಡುಗಿಯರ ಮುಂದೆ ಮನಸ್ಸು ಬಿಚ್ಚಿ ಹೇಳಿಕೊಳ್ಳುವುದಿಲ್ಲ. ಹುಡುಗಿ ಬೇರೆ ಬೇರೆ ವಿಚಾರದ ಬಗ್ಗೆ ಮಾತನಾಡುವ ಸಂದರ್ಭ ಹುಡುಗ ಆಕೆಯ ತುಟಿಯನ್ನೇ ಗಮನಿಸಿರುತ್ತಿರುತ್ತಾನೆ. ಸ್ವಲ್ಪ ಸುಮ್ಮನಿದ್ದು, ನನ್ನ ಹೃದಯದ ಮಾತನ್ನು ಕೇಳು ಎನ್ನುವುದನ್ನು ಆಕೆಗೆ ಅರ್ಥ ಮಾಡಿಸುವ ಸಲುವಾಗಿ ಹೀಗೆ ಮಾಡುತ್ತಾರಂತೆ.

ತುಟಿಯನ್ನು ಓದಲು :
ಕೆಲ ಹುಡುಗರು, ಹುಡುಗಿಯರು ಮಾತನಾಡುವಾಗ ಅವರ ತುಟಿಯನ್ನು ನೋಡುತ್ತಾ ಇರುತ್ತಾರೆ. ಹುಡುಗಿಯ ಮಾತು ಕೇಳುವ ಜೊತೆಗೆ ಓದಲು ಕೆಲವರು ಇಷ್ಟಪಡುತ್ತಾರೆ. ಹಾಗಾಗಿ ಅವರ ತುಟಿಯನ್ನೇ ನೋಡುತ್ತಿರುತ್ತಾರಂತೆ.

 

ಇದನ್ನು ಓದಿ: EMI ಕಟ್ಟಲು ಕಷ್ಟ ಆಗ್ತಿದೆಯಾ ?! ಹಾಗಿದ್ರೆ ತಕ್ಷಣ ಈ 4 ಕೆಲಸ ಮಾಡಿ, ಸಮಸ್ಯೆಯಿಂದ ಪಾರಾಗಿ !!

You may also like

Leave a Comment