Shivanand Patil: ರೈತರೇ ಗಮನಿಸಿ, APMC ಕಾಯ್ದೆ ಕುರಿತು ರಾಜ್ಯ ಸರ್ಕಾರ ಬಿಗ್ ಅಪ್ಡೇಟ್ ನೀಡಿದೆ.ಕೋಲಾರದಲ್ಲಿ(Kolar)ಎಪಿಎಂಸಿ ಕಾಯ್ದೆ ವಾಪಸ್ ಪಡೆದು ಹಿಂದಿನಂತೆ ರೈತ ಪರ ಕಾಯ್ದೆ ಜಾರಿ ಮಾಡುವ ಕುರಿತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ (Shivanand Patil)ಮಾಹಿತಿ ನೀಡಿದ್ದಾರೆ.
ಬಿಜೆಪಿ ಸರ್ಕಾರ ಜಾರಿ ಮಾಡಿದ್ದ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ನಿಯಂತ್ರಣ ಮತ್ತು ಅಭಿವೃದ್ಧಿ ತಿದ್ದುಪಡಿ ವಿಧೇಯಕ 2023 ಅನ್ನು ಮಂಡಿಸಿ ಕಾಯ್ದೆ ವಾಪಸ್ ಪಡೆಯಲಾಗುತ್ತದೆ. ಈ ಮೊದಲು ಇದ್ದ ಹಾಗೆ ರೈತಪರ ಕಾಯ್ದೆ ಜಾರಿಗೊಳಿಸಲಾಗುತ್ತದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಮಾಹಿತಿ ನೀಡಿದ್ದಾರೆ. ವಿಧೇಯಕ ಅಂಗೀಕಾರವಾದ ಸಂದರ್ಭದಲ್ಲಿ ಮತ್ತೆ ಎಪಿಎಂಸಿಗಳು ಪುನಶ್ಚತನಗೊಂಡು ಆದಾಯ ಸಿಗಲಿದೆ. ರೈತರಿಗೆ ವರ್ತಕರು ಮೋಸ ಮಾಡಬಾರದು ಎಂಬುದು ನಮ್ಮ ಧ್ಯೇಯವಾಗಿದ್ದು, ಅದೇ ರೀತಿ ರೈತರ ಬೆಳೆ ಇಲ್ಲವೇ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗಬೇಕು ಎಂಬುದು ನಮ್ಮ ಆಶಯ ಎಂದು ತಿಳಿಸಿದ್ದಾರೆ
ಇದನ್ನೂ ಓದಿ: ಹಬ್ಬ ಹರಿದಿನಗಳಲ್ಲಿ ದೊರೆಯುವ ಗಿಫ್ಟ್‌ಗೆ ನೀವು ತೆರಿಗೆ ಪಾವತಿ ಮಾಡುತ್ತೀರಾ? ಯಾಕೆ, ಎಷ್ಟು ತೆರಿಗೆ ಪಾವತಿ ಮಾಡಬೇಕು ಗೊತ್ತೇ?
