Home » Subsidy Loan Facility: ಯಾವ ಗ್ಯಾರಂಟಿಗಳು ಇಲ್ಲಾ ಅಂದ್ರೂ ನಿಮಗೆ ಸಿಗುತ್ತೆ 3 ಲಕ್ಷ ಸಾಲ – ಅರ್ಜಿ ಸಲ್ಲಿಸಿಸಲು ಮುಗಿಬಿದ್ದ ಜನ

Subsidy Loan Facility: ಯಾವ ಗ್ಯಾರಂಟಿಗಳು ಇಲ್ಲಾ ಅಂದ್ರೂ ನಿಮಗೆ ಸಿಗುತ್ತೆ 3 ಲಕ್ಷ ಸಾಲ – ಅರ್ಜಿ ಸಲ್ಲಿಸಿಸಲು ಮುಗಿಬಿದ್ದ ಜನ

1 comment
Subsidy Loan Facility

Subsidy Loan Facility: ಇತ್ತೀಚೆಗೆ ಕೇಂದ್ರ ಸರ್ಕಾರ ಬಡ್ಡಿ ರಹಿತ ಸಾಲವನ್ನು (Loan) ನೀಡುತ್ತಿದ್ದು, ಸಬ್ಸಿಡಿ ಸಾಲದ (Subsidy Loan Facility) ಯೋಜನೆಯಿಂದಾಗಿ ಆರ್ಥಿಕ ಸಬಲೀಕರಣಕ್ಕೆ ಸಹಾಯಕವಾಗುತ್ತಿದೆ. ಇದೀಗ ಸಾಂಪ್ರದಾಯಿಕ ಕೌಶಲ್ಯವನ್ನು ಹೊಂದಿದ್ದು ಸಾಂಪ್ರದಾಯಿಕ ಕೆಲಸವನ್ನೇ ಮುಂದುವರೆಸಿಕೊಂಡು ಬಂದಿರುವ ವಿಶ್ವಕರ್ಮ ಜನಗಳಿಗೆ ಉಪಯೋಗವಾಗುವಂತಹ ಯೋಜನೆಯ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಸಾಕಷ್ಟು ಜನ ಯಾವುದೇ ಗ್ಯಾರೆಂಟಿ ನೀಡದೆ 3 ಲಕ್ಷ ರೂಪಾಯಿಗಳ ವರೆಗೆ ಸಾಲ ಸೌಲಭ್ಯ (Loan Facility) ಪಡೆದುಕೊಳ್ಳಬಹುದು.

ಹೌದು, ಕೇಂದ್ರ ಸರ್ಕಾರವು ಭಾರತೀಯ ಕುಶಲಕರ್ಮಿಗಳಿಗೆ ಅನುಕೂಲವಾಗಲು ವಿಶ್ವಕರ್ಮ ಯೋಜನೆ (pradhanmantri Vishwakarma Yojana) ಆರಂಭಿಸಲಾಗಿದ್ದು, ಇದಕ್ಕಾಗಿ 13,000 ಕೋಟಿ ರೂಪಾಯಿಗಳನ್ನು ಸರ್ಕಾರ ಮೀಸಲಿಟ್ಟಿದೆ. ಅರ್ಹ ಅಭ್ಯರ್ಥಿಗಳು ಸರ್ಕಾರದ ಅಧಿಕೃತ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದವರಿಗೆ ಬಯೋಮೆಟ್ರಿಕ್ ಆಧಾರಿತ ಪಿಎಂ ವಿಶ್ವಕರ್ಮ ಅಧಿಕೃತ ಐಡಿ (official id) ನೀಡಲಾಗುತ್ತದೆ. ಇದಕ್ಕಾಗಿ ನೀವು ವಿಶ್ವಕರ್ಮ ವೆಬ್ ಪೋರ್ಟಲ್ https://pmvishwakarma.gov. ನಲ್ಲಿ ಅರ್ಜಿ ಸಲ್ಲಿಸಬೇಕು.

ಮುಖ್ಯವಾಗಿ ದೇಶದಲ್ಲಿ ಕೆಲಸ ಮಾಡುವ ಕುಂಬಾರರು, ಚಮ್ಮಾರರು, ಮೀನುಗಾರರು, ವಾಸ್ತುಶಿಲ್ಪ ಕೆತ್ತನೆ ಕೆಲಸ ಮಾಡುವವರು ಮೊದಲಾದ ಸಾಂಪ್ರದಾಯಿಕ ಕೌಶಲ್ಯ ವೃತ್ತಿ ಮಾಡುವವರು ಈ ಯೋಜನೆಯ ಪ್ರಯೋಜನ ಪಡೆಯಬಹುದು.

ವಿಶ್ವಕರ್ಮ ಯೋಜನೆ ಅಡಿ ಏಳು ದಿನಗಳ ಕಾಲ ನಿಮ್ಮದೇ ಕ್ಷೇತ್ರದ ಬಗ್ಗೆ ನಿಮಗೆ ಇನ್ನಷ್ಟು ತರಬೇತಿ ನೀಡಲಾಗುತ್ತದೆ. ತರಬೇತಿ ಸಮಯದಲ್ಲಿ ಪ್ರತಿದಿನ 500 ರೂಪಾಯಿಗಳನ್ನು ಕೂಡ ತರಬೇತಿ ಪಡೆದುಕೊಳ್ಳುವವರಿಗೆ ನೀಡಲಾಗುತ್ತದೆ. ಇನ್ನು ತರಬೇತಿಯ ಸಮಯದಲ್ಲಿ 15,000 ಟೂಲ್ ಕಿಟ್ ಪಡೆದುಕೊಳ್ಳಲು ಹಣ ಒದಗಿಸಲಾಗುತ್ತದೆ. ಒಟ್ಟು ಹತ್ತು ಸಾವಿರ ರೂಪಾಯಿಗಳಿಂದ 3 ಲಕ್ಷ ರೂಪಾಯಿಗಳವರೆಗೆ ಸಾಲ ಪಡೆದುಕೊಳ್ಳಬಹುದು, ಮೊದಲ ಹಂತದಲ್ಲಿ ಒಂದು ಲಕ್ಷ ರೂಪಾಯಿಗಳನ್ನು ಸಾಲವಾಗಿ ಪಡೆದುಕೊಂಡರೆ 5% ಸಾಲ ಸಿಗುತ್ತದೆ.

ಈ ಸಾಲ ತೀರಿಸಲು 12 ತಿಂಗಳು 30 ತಿಂಗಳು ಹೀಗೆ ಬೇರೆ ಬೇರೆ ರೀತಿಯ ಅವಧಿ ನೀಡಲಾಗುತ್ತದೆ, ಅಷ್ಟರ ಒಳಗೆ ನೀವು ಮೊದಲು ಪಡೆದುಕೊಂಡ ಸಾಲ ತೀರಿಸಿದರೆ ನಂತರ ಮತ್ತೆ ಎರಡು ಲಕ್ಷ ರೂಪಾಯಿಗಳನ್ನು ನಂತರ ಮೂರು ಲಕ್ಷ ರೂಪಾಯಿಗಳ ಸಾಲ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಜೊತೆಗೆ ಬಡ್ಡಿಗೆ ಸಬ್ಸಿಡಿಯನ್ನು (subsidy loan) ಸರ್ಕಾರ ನೀಡುತ್ತದೆ.

ಇದನ್ನೂ ಓದಿ: ಮಹಿಳೆಯರೇ ‘ಗೃಹಲಕ್ಷ್ಮೀ’ ಗೆ ಬಂತು ಹೊಸ ರೂಲ್ಸ್ – 3ನೇ ಕಂತಿನ ಹಣ ಬೇಕಂದ್ರೆ ಈ ಕೆಲಸ ಕಡ್ಡಾಯ !!

You may also like

Leave a Comment