Home » Ramalinga reddy: KSRTC ಯಿಂದ ನಾಡಿನ ಜನತೆಗೆ ಮತ್ತೊಂದು ಗುಡ್ ನ್ಯೂಸ್ !!

Ramalinga reddy: KSRTC ಯಿಂದ ನಾಡಿನ ಜನತೆಗೆ ಮತ್ತೊಂದು ಗುಡ್ ನ್ಯೂಸ್ !!

1 comment

Ramalinga reddy: ಶಕ್ತಿ ಯೋಜನೆ, ಎಲೆಕ್ಟ್ರಿಕ್ ಬಸ್ ಸೌಲಭ್ಯ ಮುಂತಾದ ಹಲವಾರು ಜನಪರ ಯೋಜನೆಗಳನ್ನು ತಂದಿರುವಂತಹ ಕೆಎಸ್ಆರ್ಟಿಸಿ(KSRTC) ಸಂಸ್ಥೆ ಇದೀಗ ಕನ್ನಡ ರಾಜ್ಯೋತ್ಸವದಂದು ಬೆಳ್ಳಂಬೆಳಗ್ಗೆಯೇ ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಅದರಲ್ಲೂ ಈ ಸುದ್ದಿ ಉದ್ಯೋಗದ ನಿರೀಕ್ಷೆಯಲ್ಲಿರುವಂತಹ ಯುವಜನತೆಗೆ ಸಂತಸವನ್ನು ತರುತ್ತದೆ.

ಹೌದು, ಇತ್ತೀಚೆಗಷ್ಟೆ 5 ಸಾವಿರಕ್ಕೂ ಅಧಿಕ ಹೊಸ ಬಸ್ ಗಳ ಖರೀದಿಗೆ ಮುಂದಾಗಿ ನಾಡಿನ ಜನತೆಗೆ ಅನುಕೂಲ ಮಾಡಿಕೊಡಲು ಮುಂದಾಗಿದ್ದ ಸಾರಿಗೆ ಇಲಾಖೆಯು ಇದೀಗ KSRTC ಕುರಿತಾಗಿಯೇ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದು, ಶೀಘ್ರ 8000 ಹುದ್ದೆಗಳ ನೇಮಕಾತಿ ಹಾಗೂ ಹೊಸ ಬಸ್ ಖರೀದಿ ಪ್ರಕ್ರಿಯೆ ನಡೆಯಲಿದೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದೆ.

ಅಂದಹಾಗೆ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಾರಿಗೆ ಸಚಿವ ರಮಾಲಿಂಗರೆಡ್ಡಿಯವರು(Ramalinga reddy) ಬಿಜೆಪಿ ಅಧಿಕಾರ ಹಿಡಿದ ಹೊತ್ತಲ್ಲಿ 13,888 ಸಾರಿಗೆ ಇಲಾಖೆಯ ನೌಕರರು ನಿವೃತ್ತಿ ಹೊಂದಿದ್ದರು. ಆದರೆ ಅವರು ಒಂದು ಹುದ್ದೆಗೂ ನೇಮಕಾತಿ ಮಾಡಿಕೊಳ್ಳಲಿಲ್ಲ. ಒಂದೂ ಹೊಸ ಬಸ್ ಖರೀದಿಸಲಿಲ್ಲ. ನಾನು 2013ರಲ್ಲಿ ಮಂತ್ರಿ ಇದ್ದಾಗ ನೇಮಕಾತಿ ಮಾಡಿರುವುದು ಬಿಟ್ಟರೆ ಮತ್ತೆ ನೇಮಕಾತಿಯಾಗಿಲ್ಲ. ಹೀಗಾಗಿ ಜನಪರವಾಗಿರುವ ನಮ್ಮ ಸರ್ಕಾರ ಶೀಘ್ರದಲ್ಲಿ ಹೊಸ ಬಸ್ ಖರೀದಿ ಮತ್ತು ಖಾಲಿ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ನಡೆಸಲಿದೆ ಎಂದು ತಿಳಿಸಿದ್ದಾರೆ.

ಅಲ್ಲದಿ ಇನ್ನೂ 10 ವರ್ಷಗಳ ಕಾಲ ಶಕ್ತಿ ಯೋಜನೆ ಜಾರಿಯಲ್ಲಿರುತ್ತದೆ. ಯಾರೂ ಇದರ ಬಗ್ಗೆ ಅನುಮಾನಿಸದಿರಿ. ನಾಡಿನ ಜನತೆಗೆ ಸಾರಿಗೆ ವಿಚಾರವಾಗಿ ಯಾವುದೇ ತೊಂದರೆಗಳು ಆಗುವುದಿಲ್ಲ. ಎಲ್ಲಾ ರಿತಿಯ ಅನುಕೂಲವನ್ನು ನಮ್ಮ ಸರ್ಕಾರ ಮಾಡಿಕೊಡುತ್ತದೆ. ಇನ್ನು ಬಹುತೇಕ ಬಸ್‌ಗಳು ಗುಜರಿಗೆ ಹೋಗಿವೆ. ಹೊಸ ಬಸ್‌ಗಳು ಸಹ ಬಂದಿರಲಿಲ್ಲ. ಹೀಗಾಗಿ 13800 ಹೊಸ ಬಸ್ ಖರೀದಿಗೆ ಅನುಮತಿ ಕೇಳಿದ್ದು, 8000ಕ್ಕೂ ಅಧಿಕ ಬಸ್ ಖರೀದಿಗೆ ಅನುಮತಿ ಸಿಕ್ಕಿದೆ. ಪ್ರಕ್ರಿಯೆ ಪ್ರಾರಂಭವಾಗಿದೆ. ನಾಲ್ಕೈದು ತಿಂಗಳಲ್ಲಿ 5200 ಹೊಸ ಬಸ್ ಬರಲಿವೆ ಎಂದು ತಿಳಿಸಿದರು.

ಇದನ್ನೂ ಓದಿ: Bengalore: ನಟ ದರ್ಶನ್ ಮನೆ ಮುಂದೆ ಕಾರು ನಿಲ್ಸಿದಕ್ಕೆ ಮಹಿಳೆ ಮೇಲೆ ಮನೆಯ ನಾಯಿಯಿಂದ ಅಟ್ಯಾಕ್- ಛೂ ಬಿಟ್ಟದ್ದು ಯಾರು ಗೊತ್ತಾ !!

You may also like

Leave a Comment