Waxing Care: ಇತ್ತೀಚೆಗೆ ಬಹುತೇಕ ಮಹಿಳೆಯರು ತ್ವಚೆಯು ನಯವಾಗಿ ಕಾಣಲು ಮತ್ತು ಬೇಡದ ಕೂದಲಿನಿಂದ ಮುಕ್ತವಾಗಿ ಕಾಣಲು ವ್ಯಾಕ್ಸ್ ಮಾಡಿಸಿಕೊಳ್ಳುವುದು ಅಭ್ಯಾಸವಾಗಿಬಿಟ್ಟಿದೆ. ಆದರೆ ವ್ಯಾಕ್ಸಿಂಗ್ ಮಾಡುವಾಗ ಸರಿಯಾದ ವಿಧಾನದ (Waxing Care)ಬಗ್ಗೆ ತಿಳಿಯದೇ ಇರುವುದರಿಂದ ಕೆಲವೊಮ್ಮೆ ವ್ಯಾಕ್ಸಿಂಗ್ ನಂತರ ಚರ್ಮದ ಮೇಲೆ ತುರಿಕೆ, ದದ್ದು ಕಿರಿಕಿರಿಯ ಅನುಭವ ಉಂಟಾಗಬಹುದು. ಇನ್ನು ವ್ಯಾಕ್ಸಿಂಗ್ ಮಾಡಿದ ಕೆಲವೇ ದಿನಗಳಲ್ಲಿ ಕೂದಲು ಮತ್ತೆ ಬರುತ್ತದೆ. ಆದರೆ ನೀವು ಮುನ್ನೆಚ್ಚರಿಕೆಗಳನ್ನು ಅನುಸರಿಸಿದರೆ ಕೂದಲು ಬೇಗ ಬರುವುದಿಲ್ಲ.
ಹೌದು, ಇದಕ್ಕಾಗಿ ಕೂದಲು ಬೆಳವಣಿಗೆಯನ್ನು ತಡೆಯಲು ಪ್ರತಿ ತಿಂಗಳು ನಿಯಮಿತ ವೇಳಾಪಟ್ಟಿಯಲ್ಲಿ ಪ್ರತಿ ನಾಲ್ಕು ವಾರಗಳಿಗೊಮ್ಮೆ ವ್ಯಾಕ್ಸಿಂಗ್ ಮಾಡಬೇಕು. ಕೂದಲು ಕಡಿಮೆ ಬೆಳೆದಾಗ ಅಥವಾ ಇದ್ದಾಗ ವ್ಯಾಕ್ಸಿಂಗ್ ಮಾಡಲು ಕಷ್ಟವಾಗುತ್ತದೆ ಅಲ್ಲದೇ ಇದರಿಂದ ಕೂದಲು ಹಾಗೆ ಉಳಿಯಬಹುದು. ಅದಕ್ಕಾಗಿಯೇ ವ್ಯಾಕ್ಸಿಂಗ್ ಅನ್ನು ಮಧ್ಯಂತರದಲ್ಲಿ ಮಾತ್ರ ಮಾಡಬೇಕು.
ವ್ಯಾಕ್ಸಿಂಗ್ ಮಾಡುವ ಒಂದು ವಾರದ ಮೊದಲು ಚರ್ಮವನ್ನು ನಿಧಾನವಾಗಿ ಮಸಾಜ್ ಮಾಡಬೇಕು. ಇದರಿಂದ ತ್ವಚೆಯಲ್ಲಿರುವ ಸತ್ತ ಜೀವಕೋಶಗಳು ಹೋಗುತ್ತವೆ. ಅಲ್ಲದೇ ಕೂದಲುಗಳು ತ್ವಚೆಗೆ ಅಂಟಿಕೊಂಡಿದ್ದರೆ, ಅವು ಸಹ ಹೊರಬರುತ್ತವೆ.
ಚರ್ಮವು ಆರೋಗ್ಯಕರವಾಗಿದ್ದರೆ ವ್ಯಾಕ್ಸಿಂಗ್ ಫಲಿತಾಂಶವು ಹೆಚ್ಚು ಕಾಲ ಉಳಿಯುತ್ತದೆ. ಅದಕ್ಕಾಗಿಯೇ ನೀವು ಯಾವಾಗಲೂ ಚರ್ಮಕ್ಕೆ ಮಾಯಿಶ್ಚರೈಸರ್ ಅನ್ನು ಹಚ್ಚಿಕೊಳ್ಳಬೇಕು. ಪ್ರತಿದಿನ ಸಾಕಷ್ಟು ನೀರು ಕುಡಿಯುವುದು, ಹೆಚ್ಚು ಹಣ್ಣುಗಳು ಮತ್ತು ಹಸಿರು ತರಕಾರಿಗಳನ್ನು ಸೇವಿಸುವುದರಿಂದ ಚರ್ಮವು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಕಾಣುತ್ತದೆ.
ಇದನ್ನೂ ಓದಿ : ಶಿಕ್ಷಕರಾಗೋ ಕನಸು ಕಂಡವರಿಗೆ ಮುಖ್ಯ ಮಾಹಿತಿ- B.ED ಕೋರ್ಸ್ ಬಗ್ಗೆ ಇಲ್ಲಿದೆ ಬಿಗ್ ಅಪ್ಡೇಟ್
