KEA Exam in Karnataka : ಸರ್ಕಾರದ ವಿವಿಧ ನಿಗಮ-ಮಂಡಳಿಗಳಲ್ಲಿ ಖಾಲಿಯಿರುವ ಎಫ್‌ಡಿಎ/ಎಸ್‌ಡಿಎ ಹುದ್ದೆಗಳ ಭರ್ತಿಗೆ ಅ.28, 29 ರಂದು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಾಗಿದೆ.ಪಿಎಸ್‌ಐ ನೇಮಕಾತಿ ಪರೀಕ್ಷೆ ಹಗರಣ ಬೆಳಕಿಗೆ ಬಂದ ಬಳಿಕ ಇತ್ತೀಚೆಗಷ್ಟೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA )ನಡೆಸಿದ ವಿವಿಧ ನಿಗಮ-ಮಂಡಳಿಗಳ ಎಫ್‌ಡಿಎ(FDA)ಪರೀಕ್ಷೆಯಲ್ಲೂ ಬ್ಲೂತ್ ಟೂತ್ ಅಕ್ರಮ ಬಯಲಾಗಿ ಕಲಬುರಗಿ, ಯಾದಗಿರಿಯಲ್ಲಿ 25 ಮಂದಿಯನ್ನು ಬಂಧಿಸಲಾಗಿದೆ. ಆದರೆ, ಈ ಅಕ್ರಮ ಕೇವಲ ಎರಡು ಜಿಲ್ಲೆಗಳಿಗಷ್ಟೇ ಸೀಮಿತವಾಗಿರದೆ ಹುಬ್ಬಳ್ಳಿ, ಬೆಳಗಾವಿ ಸೇರಿ ರಾಜ್ಯದ ವಿವಿಧೆಡೆಯೂ ವ್ಯಾಪಿಸಿದೆ ಎನ್ನುವ ಆರೋಪಗಳು ನೊಂದ ಅಭ್ಯರ್ಥಿಗಳಿಂದ ಕೇಳಿ ಬರುತ್ತಿವೆ.
ಹುಬ್ಬಳ್ಳಿ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಯೊಬ್ಬನ ಒಎಂಆರ್ ಶೀಟ್(OMR Sheet), ಪ್ರಶ್ನೆಪತ್ರಿಕೆ ಪ್ಯಾಟರ್ನ್ ಹಾಗೂ ಅಭ್ಯರ್ಥಿಯ ಮೂಲ ಫೋಟೋ ಹಾಜರು ಮಾಡದೇ ಮೇಲ್ವಿಚಾರಕರು ಹಾಲ್ ಟಿಕೆಟ್ ಮೇಲೆ ಸಹಿ ಮಾಡಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಸಾಮಾನ್ಯವಾಗಿ ಪರೀಕ್ಷಾ ಕೇಂದ್ರದೊಳಗೆ ಪರೀಕ್ಷಾರ್ಥಿಗಳ ಮೊಬೈಲ್ ತಪಾಸಣೆ ಮಾಡಿದ ನಂತರವೇ ಅಭ್ಯರ್ಥಿಗಳನ್ನು ಒಳ ಬಿಡಲಾಗುತ್ತದೆ. ಪ್ರಶ್ನೆಪತ್ರಿಕೆ ಪ್ಯಾಟರ್ನ್ ಸಂಖ್ಯೆ, ಖಾಲಿ ಬಿಟ್ಟಿರುವ ಒಎಂಆರ್ ಮೂಲ ಪ್ರತಿ ಫೋಟೋ ಹೇಗೆ ಬಹಿರಂಗವಾಗಿದೆ ಎನ್ನುವುದು ಬಹಿರಂಗವಾಗಿಲ್ಲ. ಅಭ್ಯರ್ಥಿ ಹಾಲ್ ಟಿಕೆಟ್ ಮೇಲೆ ಈಗಾಗಲೇ ಮುದ್ರಿತ ಫೋಟೋ ಹೊರತುಪಡಿಸಿ, ಮತ್ತೊಂದು ಹಾರ್ಡ್ ಕಾಪಿ ಫೋಟೋ ಅಂಟಿಸಿ ಅಭ್ಯರ್ಥಿ ಎಂದು ಖಾತ್ರಿ ಪಡಿಸಿಕೊಂಡು ಮೇಲ್ವಿಚಾರಕರು ಸಹಿ ಮಾಡುತ್ತಾರೆ. ಆದರೆ, ಒಂದೇ ಫೋಟೋವಿದ್ದರೂ ಕೂಡ ಮೇಲ್ವಿಚಾರಕರು ಸಹಿ ಮಾಡಿರುವುದು ಅನುಮಾನಕ್ಕೆ ಕಾರಣವಾಗಿದೆ.
ಇದನ್ನು ಓದಿ: ಕಟ್ ಮಾಡೋ ನಿಮ್ಮ ಉಗುರನ್ನು ಈ ಜಾಗದಲ್ಲಿ ಹಾಕಿ – ದುಷ್ಟ ಶಕ್ತಿ ದೂರಾಗುವುದಲ್ಲದೆ ಅದೃಷ್ಟ ಲಕ್ಷ್ಮೀಯೂ ಮನೆ ಪ್ರವೇಶಿಸುತ್ತಾಳೆ
