Home » Gruha Lakshmi Scheme Money: ಗೃಹಲಕ್ಷ್ಮೀ ಹಣ ಬಾರದ ಮಹಿಳೆಯರಿಗೆ ಸಂತಸದ ಸುದ್ದಿ- ನಿಮಗಿನ್ನು ಈ ಹೊಸ ಖಾತೆಗೆ ಜಮಾ ಆಗುತ್ತೆ 2,000 !!

Gruha Lakshmi Scheme Money: ಗೃಹಲಕ್ಷ್ಮೀ ಹಣ ಬಾರದ ಮಹಿಳೆಯರಿಗೆ ಸಂತಸದ ಸುದ್ದಿ- ನಿಮಗಿನ್ನು ಈ ಹೊಸ ಖಾತೆಗೆ ಜಮಾ ಆಗುತ್ತೆ 2,000 !!

1 comment

Gruha Lakshmi Scheme Money: ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆಯ (Gruha lakshmi Scheme Money ) ಅಡಿಯಲ್ಲಿ ಕೆಲವು ಮಹಿಳೆಯರ ಖಾತೆಗೆ ಇನ್ನೂ 2000 ಹಣ ಜಮಾ ಆಗಿಲ್ಲ. ಸದ್ಯ ಖಾತೆಗೆ ಹಣ ಬಾರದೇ ಇರುವ ಯಜಮಾನಿಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಿಹಿಸುದ್ದಿ ನೀಡಿದ್ದು, ಅಂಚೆ ಕಚೇರಿಯಲ್ಲಿ ಖಾತೆ ತೆರೆದು ಗೃಹಲಕ್ಷ್ಮಿ ಹಣ ಜಮಾ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಗನವಾಡಿ ಕಾರ್ಯಕರ್ತೆಯರು ಮನೆಗಳಿಗೆ ಹೋಗಿ ತಿಳಿವಳಿಕೆ ನೀಡಿ ಗೃಹಲಕ್ಷ್ಮಿ ಯೋಜನೆಗೆ ಯಜಮಾನಿಯರನ್ನು ಸೇರ್ಪಡೆ ಮಾಡುತ್ತಿದ್ದಾರೆ. ಬ್ಯಾಂಕ್ ಖಾತೆ ಸಮಸ್ಯೆ ಇದ್ದರೆ ಅಂಚೆ ಕಚೇರಿಯಲ್ಲಿ ಖಾತೆ ತೆರೆದು ಗೃಹಿಣಿಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಪಾವತಿಸಲಾಗುವುದು ಎಂದು ಹೇಳಿದ್ದಾರೆ.

ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ಯಜಮಾನಿಯರ ಖಾತೆಗೆ ಹಣ ಜಮಾ ಮಾಡಲು, ಒಂದೆರಡು ದಿನ ವಿಳಂಬ ಆಗಬಹುದು. ಆದರೆ ಈಗಾಗಲೇ 1.8 ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳು 2.500 ಕೋಟಿ ರೂ. ಸಂದಾಯ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. 6-7 ಲಕ್ಷ ಮಹಿಳೆಯರು ಉಳಿದುಕೊಂಡಿದ್ದು, ಅವರಲ್ಲಿ ಎರಡು ಲಕ್ಷ ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದರು.

ಇದನ್ನೂ ಓದಿ: ರೈತರಿಗೆ ಬಿಗ್ ಶಾಕ್ – ಹಾಲಿನ ಖರೀದಿ ದರವನ್ನು ಕಡಿತ ಮಾಡಿ ಆದೇಶ ಹೊರಡಿಸಿದ ಸರ್ಕಾರ !!

You may also like

Leave a Comment